ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಜಯ ಕುಮಾರ್ ಚೌಧರಿ ಹಾಗೂ ದೀಪಕ್ ಕುಮಾರ್ ಎಂಬುವವರನ್ನು ಹೊಸ ಕಾರ್ಯಕಾರಿ ನಿರ್ದೇಶಕರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಜನವರಿ ಮೂರರಿಂದಲೇ ನೂತನವಾಗಿ ನೇಮಕವಾಗಿರುವ ಈ ಎಕ್ಸುಕ್ಯೂಟಿವ್ ಡೈರೆಕ್ಟರ್ಗಳ ಅಧಿಕಾರಾವಧಿ ಶುರುವಾಗಲಿದೆ ಎಂದು ಆರ್ಬಿಐ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕೇಂದ್ರ ಬ್ಯಾಂಕ್ನ ಸೂಪರ್ವೈಸನ್ ಡಿಪಾರ್ಟ್ಮೆಂಟ್ನ ಮುಖ್ಯಸ್ಥರಾಗಿ ಅಜಯ್ ಚೌಧರಿ ಕಾರ್ಯ ನಿರ್ವಹಿಸುತ್ತಿದ್ದರು. ಇನ್ನು ದೀಪಕ್ ಕುಮಾರ್ ಆರ್ಬಿಐನ ಇನ್ಫರ್ಮೇಷನ್ ಟೆಕ್ನಾಲಜಿ ಡಿಪಾರ್ಟ್ಮೆಂಟ್ನ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದರು.
ದೀಪಕ್ ಕುಮಾರ್ ದೆಹಲಿ ಸ್ಕೂಲ್ ಆಫ್ ಎಕಾನಾಮಿಕ್ಸ್ನ ಮಾಜಿ ವಿದ್ಯಾರ್ಥಿಯಾಗಿದ್ದಾರೆ. ಆರ್ಬಿಐನ ಅಂಗವಾದ ಫಾರಿನ್ ಎಕ್ಸೆಂಜ್ ಡಿಪಾರ್ಟ್ಮೆಂಟ್, ಮಾಹಿತಿ ವಿಭಾಗ, ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್ನಲ್ಲಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಇನ್ನು ಅಜಯ ಕುಮಾರ್ ಚೌಧರಿ ಅವರು ದೆಹಲ ವಿವಿಯ ಹಳೆಯ ವಿದ್ಯಾರ್ಥಿಯಾಗಿದ್ದು, ಆರ್ಬಿಐನ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದಾರೆ.
ಇದನ್ನೂ ಓದಿ:ದೈಹಿಕ ಆರೋಗ್ಯದಂತೆಯೇ ಆರ್ಥಿಕ ಆರೋಗ್ಯ: ಹಣಕಾಸು ವ್ಯವಹಾರದ ಮೇಲಿರಲಿ ನಿಗಾ