ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗವು ದೇಶದಲ್ಲಿ 1.50 ಲಕ್ಷ ಮತ್ತು ವಿಶ್ವದಾದ್ಯಂತ 1.9 ದಶಲಕ್ಷಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡಿದ್ದು, ಜೀವನ ಮತ್ತು ಜೀವನೋಪಾಯವನ್ನು ನಾಶಪಡಿಸಿತು ಮಾತ್ರವಲ್ಲದೇ ಭಾರತದ ತಲಾ ಜಿಡಿಪಿ ನಾಲ್ಕು ವರ್ಷಗಳಲ್ಲಿ ಮೊದಲ ಬಾರಿಗೆ 1 ಲಕ್ಷ ರೂ.ಗಿಂತ ಕಡಿಮೆಯಾಗಿದೆ.
ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ಒಟ್ಟು ದೇಶೀಯ ಉತ್ಪಾದನೆಯ ಮೊದಲ ಮುಂಗಡ ಅಂದಾಜಿನ ಪ್ರಕಾರ, 2020-21ರ ಹಣಕಾಸು ವರ್ಷದಲ್ಲಿ (ಏಪ್ರಿಲ್-ಮಾರ್ಚ್ ಅವಧಿ) ತಲಾ ಜಿಡಿಪಿ ಪ್ರಮಾಣ ಸುಮಾರು 99,155 ರೂ.ಯಾಗುವ ಸಾಧ್ಯತೆಯಿದೆ. ಸ್ಥಿರ ದರದಲ್ಲಿ ಕಳೆದ ಹಣಕಾಸು ವರ್ಷದಲ್ಲಿನ ತಲಾ ಜಿಡಿಪಿಗೆ ಹೋಲಿಸಿದರೆ ಶೇ 8.7 ರಷ್ಟು ಕುಸಿತವಾಗಿದೆ. ಕಳೆದ ವರ್ಷ ದಾಖಲಾದ ತಲಾ ಜಿಡಿಪಿಯಲ್ಲಿ ಶೇ 3.1ರಷ್ಟು ಬೆಳವಣಿಗೆಯಾಗಿದೆ.
ಇದನ್ನೂ ಓದಿ: 2 ಲಕ್ಷದ ತನಕ ಚಿನ್ನಾಭರಣ ಖರೀದಿಗೆ ಪಾನ್, ಆಧಾರ್ ಕಡ್ಡಾಯವೇ? ಹಣಕಾಸು ಸಚಿವಾಲಯ ಹೇಳುವುದೇನು?
2017-18ರಲ್ಲಿ ಸ್ಥಿರ ಬೆಲೆಯಲ್ಲಿ ತಲಾ ಜಿಡಿಪಿಯು 2016-17ರಲ್ಲಿನ 94,751 ರೂ.ಯಿಂದ 1,00,268 ರೂ. ತಲುಪಿತ್ತು. ಇದು ಶೇ 5.82ರಷ್ಟು ಹೆಚ್ಚಳವಾಗಿತ್ತು. ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಆರ್ಥಿಕ ಬೆಳವಣಿಗೆ ಕುಸಿದಿದ್ದರಿಂದ ತಲಾ ಜಿಡಿಪಿ 2018-19 ಮತ್ತು 2019-20ರ ನಡುವೆ ಶೇ 3.1ರಷ್ಟು ಬೆಳವಣಿಗೆ ಹೊಂದಿದೆ. ತಲಾ ಜಿಡಿಪಿ 2018-19 ಮತ್ತು 2019-20ರ ನಡುವೆ 105,361 ರೂ.ಗಳಿಂದ 108,620 ರೂ.ಗೆ ಏರಿದೆ, ಇದು ಶೇ 3.1ರಷ್ಟು ಹೆಚ್ಚಾಗಿದೆ.
ರಾಷ್ಟ್ರೀಯ ಜಿಡಿಪಿ ಬೆಳವಣಿಗೆಯ ದರದಲ್ಲಿನ ಸಂಕೋಚನಕ್ಕಿಂತ ಇದು ತೀವ್ರ ಕುಸಿತವನ್ನು ಅನುಭವಿಸುವ ನಿರೀಕ್ಷೆಯಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 7.7ರಷ್ಟಿದ್ದು, ತಲಾ ಜಿಡಿಪಿ ಈ ವರ್ಷ ಶೇ 8.7ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ.