ನವದೆಹಲಿ: ಅಬಕಾರಿ ಸುಂಕದಲ್ಲಿ ಸುಮಾರು 20.26 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಕೇಂದ್ರೀಯ ತನಿಖಾ ತಂಡ (ಸಿಬಿಐ), ವಿದೇಶಿ ವ್ಯಾಪಾರ ಮಹಾ ನಿರ್ದೇಶನಾಲಯದ (ಡಿಜಿಎಫ್ಟಿ) ಮಾಜಿ ಅಧಿಕಾರಿ ಸೇರಿ ಖಾಸಗಿ ಕಂಪನಿಯ ನಿರ್ದೇಶಕರ ವಿರುದ್ಧ ಭ್ರಷ್ಟಾಚಾರ ಆರೋಪ ಪ್ರಕಣವನ್ನು ದಾಖಲಿಸಿಕೊಂಡಿದೆ.
ಮಾಜಿ ಅಧಿಕಾರಿ ಜೊತೆಗೆ ಖಾಸಗಿ ಕಂಪನಿಯ ನಿರ್ದೇಶಕರ ವಿರುದ್ಧ ಸಹ ಭ್ರಷ್ಟಾಚಾರ ಪ್ರಕರಣವನ್ನು ದಾಖಲಿಸಿಕೊಂಡಿರುವ ಸಿಬಿಐ, ಪ್ರಕರಣದ ಕುರಿತು ಗಂಭೀರ ತನಿಖೆ ನಡೆಸುತ್ತಿದೆ. ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವ ಮೊದಲು ಸಿಬಿಐ, ವಾಣಿಜ್ಯ ಸಚಿವಾಲಯದ ಅನುಮತಿ ಕೋರಿತ್ತು. 2019ರ ಜುಲೈ 15ರಂದು ಸಚಿವಾಲಯವು ಕ್ರಮಕ್ಕೆ ಅನುಮತಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2014-15ರಲ್ಲಿ ಅಬಕಾರಿ ಸುಂಕದಲ್ಲಿ ಸುಮಾರು 20.26 ಕೋಟಿ ರೂ. ವಂಚಿಸಿದ ಪ್ರಕರಣ ಇದಾಗಿದೆ. ಡಿಜಿಎಫ್ಟಿ ಮಾಜಿ ಜಂಟಿ ನಿರ್ದೇಶಕರಾದ ಎ. ಕೆ. ಸಿಂಗ್ ಮತ್ತು ಕ್ರಿಸ್ಟಲ್ ಕ್ರಾಪ್ ಪ್ರೋಟಕ್ಷನ್ ನಿರ್ದೇಶಕರಾದ ಮೋಹಿತ್ ಕುಮಾರ್ ಗೋಯೆಲ್, ಅಂಕುರ್ ಅಗರ್ವಾಲ್ ಹಾಗೂ ನಂದ್ ಕಿಶೋರ್ ಅಗರ್ವಾಲ್ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಪ್ರಕರಣ ದಾಖಲಾಗಿದೆ.