ನವದೆಹಲಿ: ಟೆಲಿಕಾಂ ಕಂಪನಿಗಳು ಹಿಂದಿನ ಬಾಕಿ ಮೊತ್ತ 1.47 ಲಕ್ಷ ಕೋಟಿ ರೂ. ಪಾವತಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದ ಬೆನ್ನಲ್ಲೇ, 'ಯಾವುದೇ ಟೆಲಿಕಾಂ ಸಂಸ್ಥೆಯು ದಿವಾಳಿತನದ ಫೈಲ್ ಮಾಡಿದರೆ ಬ್ಯಾಂಕ್ಗಳು ಬೆಲೆ ತೆರಬೇಕಾಗುತ್ತವೆ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಎಚ್ಚರಿಸಿದಾರೆ.
ಟೆಲಿಕಾಂ ಕಂಪನಿಗಳು ಕಾದು ನೋಡುವ ತಂತ್ರದಲ್ಲಿವೆ. ಸುಪ್ರೀಂಕೋರ್ಟ್ ಆದೇಶ ಅನುಸರಿಸುವುದನ್ನು ಖಚಿತಪಡಿಸುವ ಹೊಣೆಗಾರಿಕೆ ದೂರಸಂಪರ್ಕ ಇಲಾಖೆಯ (ಡಿಒಟಿ) ಬಳಿ ಇದೆ ಹೊರತು ಸರ್ಕಾರದ ಅಡಿಯಲ್ಲಿ ಅಲ್ಲ ಎಂದರು.
ಯಾವುದೇ ಉದ್ಯಮದ ಮೇಲೆ ನಕಾರಾತ್ಮಕ ಪರಿಣಾಮವಿದ್ದರೆ ಅದು ಇಡೀ ವಾಣಿಜ್ಯ ಪರಿಸರ ವ್ಯವಸ್ಥೆಯ ಮೇಲೆ ಪಸರಿಸುತ್ತದೆ. ಅದು ಬ್ಯಾಂಕ್ಗಳೇ ಆಗಿರಲಿ ಅಥವಾ ನೌಕರರೇ ಆಗಿರಲಿ, ಮಾರಾಟಗಾರರೇ ಆಗಿರಲಿ ಇಲ್ಲವೇ ಗ್ರಾಹಕರೇ ಆಗಿರಲಿ ಅದರ ಪ್ರಭಾವಕ್ಕೆ ಪ್ರತಿಯೊಬ್ಬರೂ ಒಳಪಟ್ಟಿರುತ್ತಾರೆ. ಅಂತಹ ಸಂದಿಗ್ಧತೆ ಎದುರಾಗಿ ಟೆಲಿಕಾಂ ಕಂಪನಿಗಳು ದಿವಾಳಿಯತ್ತ ಸಾಗಿದರೆ ಬ್ಯಾಂಕ್ಗಳ ಮೇಲೆ ಅದರ ದುಷ್ಪರಿಣಾ ಪರಿಣಾಮ ಉಂಟಾಗುತ್ತದೆ ಎಂದು ಕುಮಾರ್ ಹೇಳಿದರು.
ಯಾವುದೇ ಕಾರ್ಪೊರೇಟ್ ಸಂಸ್ಥೆಯೊಂದು ಸ್ಥಗಿತಗೊಂಡಿರೆ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಯಾವುದೇ ಉದ್ಯಮವನ್ನು ಸ್ಥಗಿತಗೊಳಿಸುವುದನ್ನು ತಡೆಯುವ ಪ್ರಯತ್ನ ಮಾಡಬೇಕು ಎಂದು ಎಚ್ಚರಿಸಿದರು.
ಅನುತ್ಪಾದಕ ಆಸ್ತಿಯಡಿ (ಎನ್ಪಿಎ) ಏರ್‌ಸೆಲ್ ಮತ್ತು ಆರ್‌ಕಾಮ್ ದಿವಾಳಿಯಾಗಿವೆ. ಅವುಗಳ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ಎಸ್‌ಬಿಐ ತನ್ನ ಗ್ರಾಹಕರಿಗೆ ಠೇವಣಿ ವಿಮೆಯ ಪ್ರೀಮಿಯಂ ಹೆಚ್ಚಳದ ಹೊರೆ ಹಾಕುವುದಿಲ್ಲ ಎಂದು ಕುಮಾರ್ ಭರವಸೆ ನೀಡಿದರು.