ETV Bharat / business

ಭೂಗತ ಪಾತಕಿ ದಾವೂದ್​ ಇಬ್ರಾಹಿಂಗೆ ಸೇರಿದ 7 ಆಸ್ತಿ ಹರಾಜು: ಅವುಗಳ ಮೌಲ್ಯ ಹೀಗಿದೆ! - ದಾವೂದ್ ಇಬ್ರಾಹಿಂನ ಆಸ್ತಿ

ಕಳೆದ ವರ್ಷ ಅಧಿಕಾರಿಗಳು ನಾಗಪುರದಲ್ಲಿ ಒಂದು ಫ್ಲ್ಯಾಟ್ ಹರಾಜು ಮಾಡಿದ್ದರು. ಅದು ದಾವೂದ್ ಅವರ ಸಹೋದರಿ ದಿವಂಗತ ಹಸೀನಾ ಪಾರ್ಕರ್ ಅವರದ್ದು ಎಂದು ಹೇಳಲಾಗಿತ್ತು. ದಾವೂದ್‌ನ ಇತರ 3 ಆಸ್ತಿಗಳನ್ನು ಸೈಫೀ ಬುರ್ಹಾನಿ ಅಪ್‌ಲಿಫ್ಟ್‌ಮೆಂಟ್ ಟ್ರಸ್ಟ್ 2017ರಲ್ಲಿ ಇದೇ ರೀತಿಯ ಹರಾಜಿನಲ್ಲಿ ಖರೀದಿಸಿತು.

dawood ibrahim
ದಾವೂದ್​ ಇಬ್ರಾಹಿಂ
author img

By

Published : Oct 17, 2020, 8:36 PM IST

ಮುಂಬೈ: ಭೂಗತ ಪಾತಕಿ ಮತ್ತು ಜಾಗತಿಕವಾಗಿ ಭಯೋತ್ಪಾದಕ ಸಂಘಟನೆಗಳ ಜತೆ ಗುರುತಿಸಿಕೊಂಡಿರುವ ದಾವೂದ್ ಇಬ್ರಾಹಿಂಗೆ ಸೇರಿದ್ದ ಏಳು ಆಸ್ತಿಗಳನ್ನು ಕಳ್ಳಸಾಗಾಣಿಕೆ ಮತ್ತು ವಿದೇಶಿ ವಿನಿಮಯ ಮ್ಯಾನಿಪ್ಯುಲೇಟರ್ಸ್ (ಆಸ್ತಿ ಮುಟ್ಟುಗೋಲು) ಕಾಯ್ದೆ (ಸಫೆಮಾ) ಅಡಿಯಲ್ಲಿ ನವೆಂಬರ್ 10ರಂದು ಹರಾಜು ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾವೂದ್ ಇಬ್ರಾಹಿಂ ಸಂಬಂಧಿತ ಆಸ್ತಿಗಳ ಹರಾಜು ಮಹಾರಾಷ್ಟ್ರದಲ್ಲಿ ಅತಿದೊಡ್ಡದು ಎಂದು ಹೇಳಲಾಗುತ್ತದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಈ ಹರಾಜು ನಡೆಸಲಾಗುವುದು.

ರತ್ನಗಿರಿ ಜಿಲ್ಲೆಯ ಖೇಡ್ ತಾಲೂಕಿನ ಮುಂಬಕೆ ಗ್ರಾಮದಲ್ಲಿರುವ ಆರು ಆಸ್ತಿಗಳ ಮೌಲ್ಯ ಹೀಗಿದೆ...

  • 27 ಗುಂಟೆಯ ಜಮೀನು ಮೀಸಲು ಬೆಲೆ 2,05,800 ರೂ.
  • 29.30 ಗುಂಟೆಯ ಭೂಮಿಯ ಮೀಸಲು 2,23,300 ರೂ.
  • 24.90 ಗುಂಟೆ ಜಮೀನು ಮೀಸಲು ದರ 1,89,800 ರೂ.
  • 20 ಗುಂಟೆ ಜಮೀನಿನ ಮೀಸಲು ದರ 1,52,500 ರೂ.
  • 18 ಗುಂಟೆ ಭೂಮಿಯ ಮೀಸಲು ಬೆಲೆ 1,38,000 ರೂ.
  • 27 ಗುಂಟಾ ಭೂಮಿ ಮತ್ತು ಕಟ್ಟಡ ಸಂಖ್ಯೆ 172 ಮೀಸಲು ಬೆಲೆ 5,35,800 ರೂ.
  • ದಾವೂದ್ ಇಬ್ರಾಹಿಂನ ಮತ್ತೊಂದು ಆಸ್ತಿ ಖೇಡ್‌ನ ಲೊಟೆವಿಲೇಜ್‌ನಲ್ಲಿ 30 ಗುಂಟೆ ಜಮೀನಿನ ಮೀಸಲು ಬೆಲೆ 61,48,100 ರೂ.ನಷ್ಟಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗದ ಮಾರ್ಗಸೂಚಿಯ ಸಾಮಾಜಿಕ ದೂರ ಕಾಪಾಡಿಕೊಂಡು ಮತ್ತು ಎಲ್ಲ ಮುನ್ನೆಚ್ಚರಿಕೆ ಅನುಸರಿಸಿ 2020ರ ನವೆಂಬರ್ 2ರಂದು ಬಿಡ್​​ದಾರರು ಭಾಗವಹಿಸಬಹುದು.

ಕಳೆದ ವರ್ಷ ಅಧಿಕಾರಿಗಳು ನಾಗಪುರದಲ್ಲಿ ಒಂದು ಫ್ಲ್ಯಾಟ್ ಹರಾಜು ಮಾಡಿದ್ದರು. ಅದು ದಾವೂದ್ ಅವರ ಸಹೋದರಿ ದಿವಂಗತ ಹಸೀನಾ ಪಾರ್ಕರ್ ಅವರದ್ದು ಎಂದು ಹೇಳಲಾಗಿತ್ತು. ದಾವೂದ್‌ನ ಇತರ 3 ಆಸ್ತಿಗಳನ್ನು ಸೈಫೀ ಬುರ್ಹಾನಿ ಅಪ್‌ಲಿಫ್ಟ್‌ಮೆಂಟ್ ಟ್ರಸ್ಟ್ 2017ರಲ್ಲಿ ಇದೇ ರೀತಿಯ ಹರಾಜಿನಲ್ಲಿ ಖರೀದಿಸಿತು.

1993ರ ಫೆಬ್ರವರಿ-ಮಾರ್ಚ್ ಸರಣಿ ಬಾಂಬ್​ ಸ್ಫೋಟಗಳಲ್ಲಿ ದಾವೂದ್ ಇಬ್ರಾಹಿಂ ಪ್ರಮುಖ ಆರೋಪಿ ಆಗಿದ್ದು, ಆಗ ಬಾಂಬೆಯಲ್ಲಿ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಕರಾಚಿಯಲ್ಲಿ ತಲೆ ಮರೆಸಿಕೊಂಡಿರು ಭೂಗತ ಪಾತಕಿ, ಭಾರತ, ಬ್ರಿಟನ್, ಸ್ಪೇನ್, ಮೊರಾಕೊ, ಟರ್ಕಿ, ಆಸ್ಟ್ರೇಲಿಯಾ, ಸೈಪ್ರಸ್ ಮತ್ತು ಯುಎಇಗಳಲ್ಲಿ ಶತಕೋಟಿ ಮೌಲ್ಯದ ಬೃಹತ್ ಆಸ್ತಿ ಹೊಂದಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.