ETV Bharat / business

ಈ ಒಂದು ಕಾರಣದಿಂದ​ ಅಪಾಯಕ್ಕೆ ಸಿಲುಕಿದ ₹ 10.52 ಲಕ್ಷ ಕೋಟಿ ಕಾರ್ಪೊರೇಟ್ ಸಾಲ..! - ಭಾರತದಲ್ಲಿ ಆರ್ಥಿಕ ಹಿಂಜರಿತ

ಇಂಡಿಯಾ ರೇಟಿಂಗ್ಸ್ ಮತ್ತು ರಿಸರ್ಚ್ ವರದಿಯಲ್ಲಿ ದೀರ್ಘಕಾಲದ ಆರ್ಥಿಕ ಮಂದಗತಿಯಿಂದಾಗಿ ಕಾರ್ಪೊರೇಟ್‌ ಸಂಸ್ಥೆಗಳ ಸಾಲದ (ಕ್ರೆಡಿಟ್) ಮೊತ್ತವು ಒತ್ತಡದಲ್ಲಿ ಉಳಿಯುವ ಸಾಧ್ಯತೆಯಿದೆ ಎಂದು ಹೇಳಿದೆ.

Debt
ಸಾಲ
author img

By

Published : Mar 2, 2020, 6:20 PM IST

ಮುಂಬೈ: ಆರ್ಥಿಕತೆಯ ದೀರ್ಘಕಾಲದ ಕುಸಿತದಿಂದಾಗಿ ಕಾರ್ಪೊರೇಟ್ ಸಾಲದ 10.52 ಲಕ್ಷ ಕೋಟಿ ರೂ. ಮುಂದಿನ ಮೂರು ವರ್ಷಗಳಲ್ಲಿ ಅಭಾವ (ಡೀಫಾಲ್ಟ್) ಅಪಾಯದಲ್ಲಿದೆ ಎಂದು ವರದಿಯೊಂದು ತಿಳಿಸಿದೆ.

2019ರ ಅಕ್ಟೋಬರ್​- ಡಿಸೆಂಬರ್​ ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯು ಸುಮಾರು 7 ವರ್ಷಗಳ ಕನಿಷ್ಠ ಶೇ 4.7ರಷ್ಟಕ್ಕೆ ಇಳಿದಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆ (ಎನ್‌ಎಸ್‌ಒ) ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿಅಂಶಗಳಿಂದ ತಿಳಿಸಿದೆ.

ಕಳೆದ ವಾರ ಬಿಡುಗಡೆಯಾದ ಎರಡನೇ ಮುಂಗಡ ಅಂದಾಜಿನ ಪ್ರಕಾರ, ಆರ್ಥಿಕ ಬೆಳವಣಿಗೆಯನ್ನು 2019-20ರ ಹಣಕಾಸು ವರ್ಷದಲ್ಲಿ ಶೇ 5ಕ್ಕೆ ಏರಿಸಲಾಗಿದೆ.

ಇಂಡಿಯಾ ರೇಟಿಂಗ್ಸ್ ಮತ್ತು ರಿಸರ್ಚ್ ವರದಿಯಲ್ಲಿ ದೀರ್ಘಕಾಲದ ಆರ್ಥಿಕ ಮಂದಗತಿಯಿಂದಾಗಿ ಕಾರ್ಪೊರೇಟ್‌ ಸಂಸ್ಥೆಗಳ ಸಾಲದ (ಕ್ರೆಡಿಟ್) ಮೊತ್ತವು ಒತ್ತಡದಲ್ಲಿ ಉಳಿಯುವ ಸಾಧ್ಯತೆಯಿದೆ ಎಂದು ಹೇಳಿದೆ.

ಕಾರ್ಪೊರೇಟ್ ಸಾಲದ ಕನಿಷ್ಠ 10.52 ಲಕ್ಷ ಕೋಟಿ ರೂ. (ಒಟ್ಟು ಸಾಲದ ಮೊತ್ತದಲ್ಲಿ ಶೇ 16ರಷ್ಟು) ಮುಂದಿನ ಮೂರು ವರ್ಷಗಳಲ್ಲಿ ಅಭಾವಕ್ಕೆ (ಡೀಫಾಲ್ಟ್) ಗುರಿಯಾಗುತ್ತದೆ ಎಂದು ರೇಟಿಂಗ್ ಏಜೆನ್ಸಿ ವರದಿಯಲ್ಲಿ ತಿಳಿಸಿದೆ.

ಮರುಹಣಕಾಸು (ರಿಫೈನಾನ್ಸಿಂಗ್​) ಅಪಾಯದ ಜೊತೆಗೆ ಉತ್ಪಾದಕ ಮತ್ತು ಉತ್ಪಾದಕವಲ್ಲದ ಸ್ವತ್ತುಗಳನ್ನು (ಗುಣಮಟ್ಟ ಆಸ್ತಿ) ಹೊಂದಿರುವ ಅಗ್ರ 500 ಖಾಸಗಿ ವಲಯದ ವಿತರಕರು ದುರ್ಬಲತೆಯ ಮಟ್ಟದಲ್ಲಿದ್ದಾರೆ ಎಂದು ವಿಶ್ಲೇಷಿಸಿದೆ.

ರಿಯಲ್ ಎಸ್ಟೇಟ್, ವಿದ್ಯುತ್, ಆಟೋ, ಟೆಲಿಕಾಂ, ಮೂಲಸೌಕರ್ಯ ಸೇರಿದಂತೆ ಒಟ್ಟು 11 ಕ್ಷೇತ್ರಗಳಲ್ಲಿ ಮರುಹಣಕಾಸಿನ ಅಪಾಯ ಮತ್ತು ಆಸ್ತಿ ಗುಣಮಟ್ಟವನ್ನು ವಿಶ್ಲೇಷಿಸುವ ಮೂಲಕ ದುರ್ಬಲ ಸಾಲದ ಪ್ರಮಾಣವನ್ನು ಪತ್ತೆಹಚ್ಚಿದೆ.

ರೇಟಿಂಗ್ ಏಜೆನ್ಸಿ ಪ್ರಕಾರ, ಸುಮಾರು 25 ಪ್ರತಿಶತದಷ್ಟು ದುರ್ಬಲ ಸಾಲವು ಕೆಲ ಉದ್ಯಮಿಗಳನ್ನು ತಪ್ಪಿತಸ್ಥರನ್ನಾಗಿ ಮಾಡುವ ಸಾಧ್ಯತೆಯಿದೆ. ಇದರ ಪರಿಣಾಮವಾಗಿ ಹೆಚ್ಚುವರಿ 2.54 ಟ್ರಿಲಿಯನ್ ರೂ. ಅಪರಾಧಕ್ಕೆ ಕಾರಣವಾಗಲಿದೆ. ಇದು 2022ರ ಹಣಕಾಸು ವರ್ಷದ ವೇಳೆಗೆ ಸಿಸ್ಟಮ್ ಮಟ್ಟದ ಕಾರ್ಪೊರೇಟ್ ಸಾಲವು ಶೇ 4ರಷ್ಟು ಹಣಕಾಸು ಅಪರಾಧಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.