ಪ್ರಯಾಗರಾಜ್: ರಾಂಪುರದ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದಲ್ಲಿ ನಿರ್ಮಾಣಕ್ಕೆ ವಿಧಿಸಲಾದ ಸೆಸ್ ಸೇರಿ 4.08 ಕೋಟಿ ರೂ. ದಂಡ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.
ಮೌಲಾನಾ ಮೊಹಮ್ಮದ್ ಅಲಿ ಜೌಹರ್ ಟ್ರಸ್ಟ್ ತನ್ನ ಅಧ್ಯಕ್ಷ ಮೊಹಮ್ಮದ್ ಅಜಮ್ ಖಾನ್ ಮೂಲಕ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಲಾಗಿದೆ. ಕಟ್ಟಡ ಮತ್ತು ಇತರ ನಿರ್ಮಾಣದ ಕಾರ್ಮಿಕರ ಕಲ್ಯಾಣ ಸೆಸ್ ಕಾಯ್ದೆ, 1996ರ ಅಡಿ ಸೆಸ್ ವಿಧಿಸುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅರ್ಜಿದಾರರಿಗೆ ಪರ್ಯಾಯ ಪರಿಹಾರವಿದೆ ಎಂದು ನ್ಯಾಯಮೂರ್ತಿ ಜೆ.ಜೆ. ಮುನೀರ್ ಹೇಳಿದರು.
ಇದನ್ನೂ ಓದಿ: ರಾಮ ಮಂದಿರ ನಿಧಿ ಕೇಳಲು ಸೋನಿಯಾ, ರಾಹುಲ್ ಮನೆಗೆ ಹೋಗ್ತಿನಿ, ಆದ್ರೆ ಒಂದು ಕಂಡಿಷನ್: ಗಿರಿ ಮಹಾರಾಜ
ಈ ಹಿಂದೆ ಟ್ರಸ್ಟ್‌ಗೆ ಹಾಜರಾದ ಹಿರಿಯ ವಕೀಲ ಎಸ್.ಜಿ.ಹಸ್ನೈನ್ ಅವರು ಅರ್ಜಿದಾರರಿಗೆ ತಮ್ಮ ಪ್ರಕರಣ ಮಂಡಿಸಲು ಯಾವುದೇ ಅವಕಾಶ ನೀಡದ ಕಾರಣ ನ್ಯಾಚ್ಯುರಲ್ ನ್ಯಾಯದ ತತ್ವಗಳನ್ನು ಉಲ್ಲಂಘಿಸಿ ವಿಶ್ವವಿದ್ಯಾಲಯದ ವಿರುದ್ಧದ ಆದೇಶ ಜಾರಿಗೊಳಿಸಲಾಗಿದೆ ಎಂದು ವಾದಿಸಿದ್ದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸುವ ಹೆಚ್ಚುವರಿ ಅಡ್ವೊಕೇಟ್ ಜನರಲ್ ಮನೀಶ್ ಗೋಯಲ್, ಅರ್ಜಿದಾರರು ವಿಧಿಸಿದ ಸೆಸ್ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು ಎಂದು ವಾದಿಸಿದರು.
ಇಬ್ಬರ ವಾದ ಆಲಿಸಿದ ನ್ಯಾಯಾಲಯವು, ಅರ್ಜಿದಾರರಿಗೆ ಸೆಸ್ ಕಾಯ್ದೆಯಡಿ ಸಂಪೂರ್ಣ ಪರಿಹಾರವಿದೆ. ಇದು ವಿಶೇಷ ಮತ್ತು ಹಣಕಾಸಿನ ಶಾಸನವಾಗಿದೆ. ಈ ಪರಿಹಾರವನ್ನು ಈ ನ್ಯಾಯಾಲಯದ ಅಭಿಪ್ರಾಯದಲ್ಲಿ ವಿಶ್ವವಿದ್ಯಾನಿಲಯವು ಬಳಸಿಕೊಳ್ಳಬೇಕು ಎಂದಿದೆ.