ನವದೆಹಲಿ: ಸುಮಾರು 200ಕ್ಕೂ ಅಧಿಕ ಕೋಟಿ ಬಳಕೆದಾರರನ್ನು ಹೊಂದಿರುವ ವಿಶ್ವದ ಜನಪ್ರಿಯ ಸಂದೇಶ ಅಪ್ಲಿಕೇಷನ್ವಾಟ್ಸ್ಆ್ಯಪ್ ಮತ್ತೊಂದು ಹೊಸ ಫೀಚರ್ ಪರಿಚಯಿಸಿದೆ.
ಸಂದೇಶ ಕಳುಹಿಸಿದ ಏಳು ದಿನಗಳ ನಂತರ 'ಕಣ್ಮರೆಯಾಗುವ ಸಂದೇಶ' ಫೀಚರ್ ಅನ್ನು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪರಿಚಯಿಸಲಾಗುವುದು. ಈ ತಿಂಗಳಲ್ಲಿ ಎಲ್ಲಾ ಬಳಕೆದಾರರಿಗೆ ಈ ವೈಶಿಷ್ಟ್ಯ ಲಭ್ಯವಾಗಲಿದೆ ಎಂದು ವಾಟ್ಸ್ಆ್ಯಪ್ ತಿಳಿಸಿದೆ.
ವಾಟ್ಸ್ಆ್ಯಪ್ನಲ್ಲಿನ ಸಂಭಾಷಣೆಗಳು ವೈಯಕ್ತಿಕವಾಗಿ ಸಾಧ್ಯವಾದಷ್ಟು ಹತ್ತಿರವಾಗುವಂತೆ ಮಾಡಲಾಗುವುದು. ಅದಕ್ಕಾಗಿ ಶಾಶ್ವತವಾಗಿ ಅಂಟಿಕೊಳ್ಳಬೇಕಾಗಿಲ್ಲ ಎಂದು ಫೇಸ್‌ಬುಕ್ ಒಡೆತನದ ಕಂಪನಿ ಹೇಳಿದೆ.
ವಾಟ್ಸ್ಆ್ಯಪ್ನಲ್ಲಿ ಕಣ್ಮರೆಯಾಗುತ್ತಿರುವ ಸಂದೇಶಗಳನ್ನು ಬಳಸುವ ಆಯ್ಕೆ ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ. 'ಕಣ್ಮರೆಯಾಗುತ್ತಿರುವ ಸಂದೇಶಗಳು' ಫೀಚರ್ ಆನ್ ಮಾಡಿದಾಗ, ಚಾಟ್‌ಗೆ ಕಳುಹಿಸಿದ ಹೊಸ ಸಂದೇಶಗಳು 7 ದಿನಗಳ ನಂತರ ಕಾಣೆ ಆಗುತ್ತದೆ. ಇದು ಸಂಭಾಷಣೆಯನ್ನು ಹಗುರವಾಗಿ ಮತ್ತು ಖಾಸಗಿನದ ಭದ್ರತೆಗೆ ನೆರವಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಒನ್ ಟು ಒನ್ ಚಾಟ್‌ನಲ್ಲಿ ಓರ್ವ ಬಳಕೆದಾರ ಕಣ್ಮರೆಯಾಗುತ್ತಿರುವ ಸಂದೇಶಗಳನ್ನು ಆನ್ ಅಥವಾ ಆಫ್ ಮಾಡಬಹುದು. ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಅಡ್ಮಿನ್ ಇದರ ನಿಯಂತ್ರಣ ಹೊಂದಿರುತ್ತಾರೆ.
ಕಣ್ಮೆರೆ ಆಗುವುದನ್ನು ಏಳು ದಿನಗಳಿಂದ ಪ್ರಾರಂಭಿಸುತ್ತಿದ್ದೇವೆ. ಯಾವುದೇ ಸಂಭಾಷಣೆಗಳು ಶಾಶ್ವತವಲ್ಲ. ಆದ್ದರಿಂದ ನೀವು ಚಾಟ್ ಮಾಡುತ್ತಿರುವುದನ್ನು ನೀವು ಮರೆಯುವುದಿಲ್ಲ. ಕೆಲವು ದಿನಗಳ ಹಿಂದೆ ನೀವು ಸ್ವೀಕರಿಸಿದ ಶಾಪಿಂಗ್ ಪಟ್ಟಿ ಅಥವಾ ಅಂಗಡಿ ವಿಳಾಸ ನಿಮಗೆ ಅಗತ್ಯವಿರುವಾಗ ಅಲ್ಲಿಯೇ ಇರುತ್ತದೆ. ನಿಮಗೆ ಅಗತ್ಯವಿಲ್ಲದ ನಂತರ ಅದು ಕಣ್ಮರೆಯಾಗುತ್ತದೆ ಎಂದು ವಿವರಿಸಿದೆ.