ETV Bharat / business

ಟಿಸಿಎಸ್​​ ವಿರುದ್ಧದ 10,491 ಕೋಟಿ ರೂ. ದಂಡದ ತೀರ್ಪು ಎತ್ತಿಹಿಡಿದ ಶಿಕಾಗೋ ಕೋರ್ಟ್​: ಆರೋಪವೇನು? - ನಷ್ಟ ಪರಿಹಾರ ಪಾವತಿ

ಅಮೆರಿಕದ ವೈದ್ಯಕೀಯ ಸಾಫ್ಟ್‌ವೇರ್ ಸಂಸ್ಥೆ ಎಪಿಕ್ ಸಿಸ್ಟಮ್, ವ್ಯಾಪಾರದ ಮಾಹಿತಿ ಕದ್ದ ಆರೋಪದಡಿ ಕೋರ್ಟ್​ನಲ್ಲಿ ದಾವೆ ಹೂಡಿತ್ತು. ದೂರಿನ ಅನ್ವಯ 140 ಮಿಲಿಯನ್ ಡಾಲರ್​ (10,491 ಕೋಟಿ ರೂ.) ಪರಿಹಾರ ನಷ್ಟ ಪಾವತಿಸಬೇಕಿದೆ. ಶಿಕಾಗೋದ 7ನೇ ಸರ್ಕ್ಯೂಟ್‌ನ ಕೋರ್ಟ್ ಆಫ್ ಅಪೀಲ್ಸ್​ನಲ್ಲಿ 280 ಮಿಲಿಯನ್ ಡಾಲರ್ ದಂಡದ ಹಾನಿಗೆ ಎಪಿಕ್ ಸಿಸ್ಟಮ್​ ಮೊಕದ್ದಮೆ ಹಾಕಿತ್ತು.

TCS
ಟಿಸಿಎಸ್​
author img

By

Published : Aug 21, 2020, 9:27 PM IST

ಮುಂಬೈ: ಅಮೆರಿಕದ ಶಿಕಾಗೋ ನ್ಯಾಯಾಲಯವು ಭಾರತದ ಅತಿದೊಡ್ಡ ಐಟಿ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ವಿರುದ್ಧದ ವ್ಯಾಪಾರ ರಹಸ್ಯ ಕಳ್ಳತನದ ನಷ್ಟ ಪರಿಹಾರ ಪ್ರಕರಣದ ತೀರ್ಪನ್ನು ಎತ್ತಿಹಿಡಿದಿದೆ.

ಅಮೆರಿಕದ ವೈದ್ಯಕೀಯ ಸಾಫ್ಟ್‌ವೇರ್ ಸಂಸ್ಥೆ ಎಪಿಕ್ ಸಿಸ್ಟಮ್​, ವ್ಯಾಪಾರದ ಮಾಹಿತಿ ಕದ್ದ ಆರೋಪದಡಿ ಕೋರ್ಟ್​ನಲ್ಲಿ ದಾವೆ ಹೂಡಿತ್ತು. ದೂರಿನ ಅನ್ವಯ 140 ಮಿಲಿಯನ್ ಡಾಲರ್​ (10,491 ಕೋಟಿ ರೂ.) ಪರಿಹಾರ ನಷ್ಟ ಪಾವತಿಸಬೇಕಿದೆ. ಶಿಕಾಗೋದ 7ನೇ ಸರ್ಕ್ಯೂಟ್‌ನ ಕೋರ್ಟ್ ಆಫ್ ಅಪೀಲ್ಸ್​ನಲ್ಲಿ 280 ಮಿಲಿಯನ್ ಡಾಲರ್ ದಂಡದ ಹಾನಿಗೆ ಎಪಿಕ್ ಸಿಸ್ಟಮ್​ ಮೊಕದ್ದಮೆ ಹಾಕಿತ್ತು.

ಶಿಕಾಗೋದಲ್ಲಿನ ನ್ಯಾಯಾಲಯವು 140 ಮಿಲಿಯನ್ ಡಾಲರ್​ (10,491 ಕೋಟಿ ರೂ.) ಪರಿಹಾರ ನಷ್ಟ ಪಾವತಿಸಬೇಕಿದೆ ಎಂಬ ತೀರ್ಪು ನೀಡಿದೆ ಎಂದು ಟಿಸಿಎಸ್ ನಿಯಂತ್ರಕ ಫೈಲಿಂಗ್​ನಲ್ಲಿ ತಿಳಿಸಿದೆ.

ಟಿಸಿಎಸ್ ಇದರಿಂದ ಹೊರಬರಲು ಮಾರ್ಗಗಳನ್ನು ಅನ್ವೇಷಿಸುತ್ತಿದೆ. ಎಪಿಕ್ ಮಾಹಿತಿ ದುರುಪಯೋಗಪಡಿಸಿಕೊಂಡ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಸಂಬಂಧಿತ ನ್ಯಾಯಾಲಯದ ಮುಂದೆ ಟಿಸಿಎಸ್ ತನ್ನ ಸ್ಥಾನ ಕಾಪಾಡಿಕೊಳ್ಳಲಿದೆ ಎಂದು ಹೇಳಿದೆ.

ವರದಿಗಳ ಪ್ರಕಾರ, ಐಪಿ ಸೇವೆಗಳ ಕಂಪನಿ ತನ್ನ ಬೌದ್ಧಿಕ ಆಸ್ತಿಯನ್ನು ಕದ್ದಿದೆ ಎಂದು ಆರೋಪಿಸಿ ಎಪಿಕ್ 2014ರಲ್ಲಿ ಟಿಸಿಎಸ್ ವಿರುದ್ಧ ಮೊಕದ್ದಮೆ ಹೂಡಿತ್ತು. 940 ಮಿಲಿಯನ್​ ಡಾಲರ್ ನಷ್ಟ ಪರಿಹಾರ ನೀಡಬೇಕು ಎಂದು ಕೋರಿತ್ತು.

ಎಪಿಕ್ ಸಿಸ್ಟಮ್ಸ್ ತನ್ನ ಆರೋಗ್ಯ ನಿರ್ವಹಣಾ ವ್ಯವಸ್ಥೆ ಪರೀಕ್ಷೆಗೆ ಟಿಸಿಎಸ್ ನೇಮಿಸಿಕೊಂಡಿತ್ತು. ಟಿಸಿಎಸ್ ಸಿಬ್ಬಂದಿ ಕೆಪಿ ಉದ್ಯೋಗಿಯ ಮಾಹಿತಿಯನ್ನು ಒಳಗೊಂಡು 6,000ಕ್ಕೂ ಹೆಚ್ಚು ದಾಖಲೆಗಳನ್ನು ಕದಿದ್ದಾರೆ ಎಂದು ಎಪಿಕ್ ಸಿಸ್ಟಮ್ಸ್ ಆರೋಪಿಸಿದೆ. ಬೌದ್ಧಿಕ ಆಸ್ತಿಯ ಕಳ್ಳತನದ ಬಗ್ಗೆ ಟಿಸಿಎಸ್ ವಿರುದ್ಧ ಕೂಗುಮಲ್ಲ (ವಿಷಲ್​ ಬ್ಲೋವರ್​) ಕೆಪಿ ಮತ್ತು ಎಪಿಕ್ ಎಚ್ಚರಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.