ವಾಷಿಂಗ್ಟನ್: ಔಷಧಗಳ ಗುಣಮಟ್ಟ ಹಾಗೂ ಪರಿಶುದ್ಧತೆಯ ಒಪ್ಪಿಗೆ ನೀಡುವ ಅಂತಾರಾಷ್ಟ್ರೀಯ ಮಾನದಂಡದ ಅಮೆರಿಕ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಯುಎಸ್ಎಫ್ಡಿಎ), ಅಬಾಟ್ ಲ್ಯಾಬೋರೆಟರೀಸ್ ಅಭಿವೃದ್ಧಿ ಪಡಿಸಿದ ನೂತನ ಕೋವಿಡ್-19 ಪರೀಕ್ಷಾ ಸಾಧನದ ಬಳಕೆಗೆ ಅನುಮೋದನೆ ನೀಡಿದೆ.
ಈ ಕಿಟ್ನಿಂದ ಕೊರೊನಾ ಸೋಂಕಿತರನ್ನು ಕೇವಲ ಐದು ನಿಮಷದಲ್ಲಿ ಪತ್ತೆ ಹಚ್ಚಬಹುದಾಗಿದೆ. ಅಮೆರಿಕದ ಫ್ಯುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಒಪ್ಪಿಗೆ ನೀಡಿದೆ ಎಂದು ಅಬಾಟ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದೆ.
ವೈದ್ಯಕೀಯ ಸಾಧನ ತಯಾರಕಾ ಮತ್ತು ಔಷಧಗಳ ಉತ್ಪನ್ನ ಕಂಪನಿಯಾದ ಅಬಾಟ್, ಶುಕ್ರವಾರ ತಡ ರಾತ್ರಿ ತನ್ನ ಕಾರ್ಟ್ರಿಡ್ಜ್ ಆಧಾರಿತ ಪರೀಕ್ಷೆಯ ತುರ್ತು ಅನುಮತಿಯನ್ನು ಪ್ರಕಟಿಸಿದೆ.
-
BREAKING: We’re launching a test that can detect COVID-19 in as little as 5 minutes—bringing rapid testing to the frontlines. https://t.co/LqnRpPpqMM pic.twitter.com/W8jyN2az8G
— Abbott (@AbbottNews) March 27, 2020 " class="align-text-top noRightClick twitterSection" data="
">BREAKING: We’re launching a test that can detect COVID-19 in as little as 5 minutes—bringing rapid testing to the frontlines. https://t.co/LqnRpPpqMM pic.twitter.com/W8jyN2az8G
— Abbott (@AbbottNews) March 27, 2020BREAKING: We’re launching a test that can detect COVID-19 in as little as 5 minutes—bringing rapid testing to the frontlines. https://t.co/LqnRpPpqMM pic.twitter.com/W8jyN2az8G
— Abbott (@AbbottNews) March 27, 2020
ಆರಂಭಿಕವಾಗಿ ವಿನ್ಯಾಸಗೊಳಿಸಿದ ಪರೀಕ್ಷೆಯಲ್ಲಿ ಹಲವಾರು ಸಮಸ್ಯೆಗಳ ನಂತರ ಸುಧಾರಿತ ಕಿಟ್ ಅಭಿವೃದ್ಧಿ ಪಡಿಸಿದ್ದೇವೆ. ಅಮೆರಿಕ ಕೊರೊನಾ ವೈರಸ್ ಸೋಂಕಿತರನ್ನು ವೇಗವಾಗಿ ಪತ್ತೆಹಚ್ಚುವ ಪರೀಕ್ಷಾ ವಿಧಾನಗಳನ್ನು ಕಳೆದ ವಾರಗಳಿಂದ ಪ್ರಯತ್ನಿಸುತ್ತಿದೆ. ದೊಡ್ಡ ಮಟ್ಟದ ಪ್ರಯೋಗಾಲಯಗಳನ್ನು ಪರೀಕ್ಷೆಗಳನ್ನು ಅಭಿವೃದ್ಧಿಪಡಿಸಿರುವುದರಿಂದ ದೈನಂದಿನ ಪರೀಕ್ಷಾ ಸಾಮರ್ಥ್ಯ ಹೆಚ್ಚುತ್ತಿದೆ ಎಂದು ಹೇಳಿದೆ.
ಈ ಕಿಟ್ ಅನ್ನು ಆಸ್ಪತ್ರೆಗೆ, ಚಿಕಿತ್ಸಾಲಯ ಮತ್ತು ವೈದ್ಯರ ಸಮಾಲೋಚನಾ ಬಳಸಲಾಗುತ್ತದೆ. ತುರ್ತು ಆರೈಕೆ ನೀಡುವ ಆರೋಗ್ಯ ಸೌಲಭ್ಯಗಳನ್ನು ಆಯ್ಕೆ ಮಾಡಲು ಮುಂದಿನ ವಾರ ಪರೀಕ್ಷೆಯನ್ನು ಆರಂಭಿಸುವುದಾಗಿ ಕಂಪನಿ ತಿಳಿಸಿದೆ.
ಈ ಹಿಂದೆ ಅಭಿವೃದ್ಧಿಪಡಿಸಿದ ಪರೀಕ್ಷಾ ಸಾಧನ ತನ್ನ ಫಲಿತಾಂಶ ನೀಡಲು 4 ರಿಂದ 8 ಗಂಟೆ ತೆಗೆದುಕೊಳ್ಳುತ್ತಿತ್ತು. ವೈರಸ್ ಅನ್ನು ಪತ್ತೆಹಚ್ಚಲು ಅಮೆರಿಕ ದಿನಕ್ಕೆ 1,00,000 ರಿಂದ 1,50,000 ಜನರನ್ನು ಪರೀಕ್ಷಿಸಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅಧಿಕೃತವಾಗಿ ರಾಷ್ಟ್ರವ್ಯಾಪಿ ಪರೀಕ್ಷಾ ಮಾಪನಗಳಿಲ್ಲ. ಆದರೆ, ಖಾಸಗಿ ಮತ್ತು ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳು ದಿನಕ್ಕೆ 80,000 ರಿಂದ 90,000 ರೋಗಿಗಳನ್ನು ಪರೀಕ್ಷಿಸುತ್ತಿವೆ ಎಂದು ವರದಿ ಹೇಳುತ್ತಿವೆ.