ETV Bharat / business

TCS ಮಾರುಕಟ್ಟೆ ಮೌಲ್ಯ 12 ಲಕ್ಷ ಕೋಟಿ ರೂ.ಗೆ ಏರಿಕೆ: ಯಾರಿದ್ದಾರೆ ನಂ.​1? - ಟಿಸಿಎಸ್​ ಮಾರುಕಟ್ಟೆ ಬಂಡವಾಳ

ಷೇರು ಬೆಲೆಯಲ್ಲಿ ರ್ಯಾಲಿಯ ನಂತರ ಕಂಪನಿಯ ಮಾರುಕಟ್ಟೆ ಮೌಲ್ಯಮಾಪನವು ಬಿಎಸ್‌ಇಯ ವಹಿವಾಟಿನ ಮುಕ್ತಾಯದ ವೇಳೆಗೆ 12,19,581.32 ಕೋಟಿ ರೂ.ಗೆ ಏರಿತು. ಮಾರುಕಟ್ಟೆ ಮೌಲ್ಯಮಾಪನದಲ್ಲಿ 12 ಲಕ್ಷ ಕೋಟಿ ರೂ. ಮೈಲಿಗಲ್ಲು ಸಾಧಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಂತರದ ಎರಡನೇ ಸ್ಥಾನದಲ್ಲಿದೆ.

TCS
ಟಿಸಿಎಸ್​
author img

By

Published : Jan 14, 2021, 10:20 PM IST

ನವದೆಹಲಿ: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಮಾರುಕಟ್ಟೆ ಮೌಲ್ಯಮಾಪನವು ಗುರುವಾರ ವಹಿವಾಟಿನ ಮುಕ್ತಾಯದ ವೇಳೆಗೆ 12 ಲಕ್ಷ ಕೋಟಿ ರೂ. ದಾಟಿದೆ.

ಸೆನ್ಸೆಕ್ಸ್‌ನಲ್ಲಿ ಟಿಸಿಎಸ್ ಅಗ್ರಸ್ಥಾನದಲ್ಲಿದ್ದು, ಮಧ್ಯಂತರ ಅವಧಿಯಲ್ಲಿ ಶೇ 3.42ರಷ್ಟು ಜಿಗಿದು ದಾಖಲೆಯ ಗರಿಷ್ಠ 3,267 ರೂ.ಗೆ ತಲುಪಿದೆ. ದಿನದ ಅಂತ್ಯದ ವೇಳೆಗೆ ಶೇ 2.89ರಷ್ಟು ಏರಿಕೆ ಕಂಡು 3,250.15 ರೂ.ಯಲ್ಲಿ ಕೊನೆಗೊಂಡಿತು.

ಷೇರು ಬೆಲೆಯಲ್ಲಿ ರ್ಯಾಲಿಯ ನಂತರ ಕಂಪನಿಯ ಮಾರುಕಟ್ಟೆ ಮೌಲ್ಯಮಾಪನವು ಬಿಎಸ್‌ಇಯ ವಹಿವಾಟಿನ ಮುಕ್ತಾಯದ ವೇಳೆಗೆ 12,19,581.32 ಕೋಟಿ ರೂ.ಗೆ ಏರಿತು. ಮಾರುಕಟ್ಟೆ ಮೌಲ್ಯಮಾಪನದಲ್ಲಿ 12 ಲಕ್ಷ ಕೋಟಿ ರೂ. ಮೈಲಿಗಲ್ಲು ಸಾಧಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಂತರದ ಎರಡನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಬಜೆಟ್​ 2021: ಕೊರೊನಾ ಬಾಧಿತ ಪ್ರವಾಸೋದ್ಯಮದ ಈ ನಿರೀಕ್ಷೆಗಳನ್ನು ಈಡೇರಿಸುತ್ತಾರಾ ನಿರ್ಮಲಾ?

ಮಾರುಕಟ್ಟೆ ಬಂಡವಾಳೀಕರಣದ ದೃಷ್ಟಿಯಿಂದ ಟಿಸಿಎಸ್ ಎರಡನೇ ಅತ್ಯಮೂಲ್ಯ ದೇಶೀಯ ಸಂಸ್ಥೆಯಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ 12,42,910.75 ಕೋಟಿ ರೂ. ಮಾರುಕಟ್ಟೆ ಮೌಲ್ಯಮಾಪನ ಹೊಂದಿರುವ ದೇಶದ ಅತ್ಯಮೂಲ್ಯ ಸಂಸ್ಥೆಯಾಗಿದೆ.

ದೇಶದ ಅತಿದೊಡ್ಡ ಸಾಫ್ಟ್‌ವೇರ್ ಸೇವಾ ಸಂಸ್ಥೆ ಶುಕ್ರವಾರ 2020ರ ಡಿಸೆಂಬರ್ ತ್ರೈಮಾಸಿಕದಲ್ಲಿ ಒಟ್ಟು ನಿವ್ವಳ ಲಾಭದಲ್ಲಿ ಶೇ 7.2ರಷ್ಟು ಏರಿಕೆ ಕಂಡು 8,701 ಕೋಟಿ ರೂ.ಗೆ ತಲುಪಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.