ETV Bharat / business

ಆಕ್ಸೆಂಚರ್​ ಹಿಂದಿಕ್ಕಿ ಜಗತ್ತಿನ ಅತ್ಯಮೂಲ್ಯ ಐಟಿ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್! - ಕಂಪನಿ ನ್ಯೂಸ್

ಟಿಸಿಎಸ್ ಷೇರು ಗುರುವಾರದ ವಹಿವಾಟಿನಂದು ಶೇ 3ರಷ್ಟು ಏರಿಕೆಯಾಗಿ 2,825 ರೂ.ಗೆ ತಲುಪಿದ್ದು, ಸಂಸ್ಥೆಯ ಮಾರುಕಟ್ಟೆ ಕ್ಯಾಪಿಟಲ್​ 144.7 ಬಿಲಿಯನ್ ಡಾಲರ್​ಗೆ ತಲುಪಿದೆ. ಬ್ಲೂಮ್‌ಬರ್ಗ್‌ನ ಮಾಹಿತಿಯ ಪ್ರಕಾರ, ಅಕ್ಸೆಂಚರ್‌ನ ಮಾರುಕಟ್ಟೆ ಕ್ಯಾಪ್ 143.74 ಬಿಲಿಯನ್ ಡಾಲರ್​​ನಷ್ಟಿದೆ.

TCS
ಟಿಸಿಎಸ್​
author img

By

Published : Oct 9, 2020, 7:20 PM IST

ಮುಂಬೈ: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಲಿಮಿಟೆಡ್ (ಟಿಸಿಎಸ್) ಗುರುವಾರ ಬಹುರಾಷ್ಟ್ರೀಯ ಟೆಕ್ ಕಂಪನಿ ಅಕ್ಸೆಂಚರ್ ಹಿಂದಿಕ್ಕಿ ಮೊದಲ ಬಾರಿಗೆ ವಿಶ್ವದ ಅತ್ಯಮೂಲ್ಯ ಐಟಿ ಸಂಸ್ಥೆಯಾಗಿದೆ.

ಟಿಸಿಎಸ್ ಷೇರು ಗುರುವಾರದ ವಹಿವಾಟಿನಂದು ಶೇ 3ರಷ್ಟು ಏರಿಕೆಯಾಗಿ 2,825 ರೂ.ಗೆ ತಲುಪಿದ್ದು, ಸಂಸ್ಥೆಯ ಮಾರುಕಟ್ಟೆ ಕ್ಯಾಪಿಟಲ್​ 144.7 ಬಿಲಿಯನ್ ಡಾಲರ್​ಗೆ ತಲುಪಿದೆ. ಬ್ಲೂಮ್‌ಬರ್ಗ್‌ನ ಮಾಹಿತಿಯ ಪ್ರಕಾರ, ಅಕ್ಸೆಂಚರ್‌ನ ಮಾರುಕಟ್ಟೆ ಕ್ಯಾಪ್ 143.74 ಬಿಲಿಯನ್ ಡಾಲರ್​​ನಷ್ಟಿದೆ.

ಟಿಸಿಎಸ್ ಷೇರು ಮೌಲ್ಯ ಶುಕ್ರವಾರದಂದು ಸ್ವಲ್ಪ ಕುಸಿದಿದ್ದರೂ, ಹಿಂದಿನ ಕ್ಲೋಸ್‌ಗಿಂತ ಶೇ 0.45ರಷ್ಟು ಕಡಿಮೆಯಾಗಿದೆ. ಆದರೆ ಕಂಪನಿಯ ಮಾರುಕಟ್ಟೆ ಕ್ಯಾಪ್ ಈಗಲೂ ಅಕ್ಸೆಂಚರ್‌ಗಿಂತ ತುಸು ಅಧಿಕವಾಗಿದೆ.

ಬ್ಲೂಮ್ಬರ್ಗ್ ಪ್ರಕಾರ, ಭಾರತದಲ್ಲಿ ಟಿಸಿಎಸ್ 202 ಬಿಲಿಯನ್ ಡಾಲರ್​ ಮಾರುಕಟ್ಟೆ ಕ್ಯಾಪ್ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ (ಆರ್​ಐಎಲ್) ಬಳಿಕ ಎರಡನೇ ಸ್ಥಾನದಲ್ಲಿದೆ.

ಕಳೆದ ಒಂದು ವರ್ಷದಲ್ಲಿ ಟಿಸಿಎಸ್ ಷೇರು ಮೌಲ್ಯದಲ್ಲಿ ಶೇ 40ಕ್ಕಿಂತ ಅಧಿಕ ಏರಿಕೆ ದಾಖಲಾಗಿದೆ. ಕಂಪನಿಯು 16,000 ಕೋಟಿ ರೂ. ಷೇರುಗಳನ್ನು ತಲಾ 3,000 ರೂ. ಬೈಬ್ಯಾಕ್​​ ಯೋಜನೆ ಘೋಷಷಿಸಿದೆ. ಈ ವಾರದಲ್ಲಿ ಷೇರುಗಳ ಬೆಲೆ ಏರಿಕೆಗೆ ಪ್ರಮುಖ ಉತ್ತೇಜನ ಸಿಕ್ಕಂತಾಯಿತು.

2020ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಒಟ್ಟು ನಿವ್ವಳ ಲಾಭ ಶೇ. 4.9ರಷ್ಟು ಏರಿಕೆಯಾಗಿ 8,433 ಕೋಟಿ ರೂ.ಗೆ ತಲುಪಿದೆ. ನಿವ್ವಳ ಲಾಭವು 1,218 ಕೋಟಿ ರೂ. ಒಳಗೊಂಡಂತೆ, ನಿವ್ವಳ ಲಾಭ 7,475 ಕೋಟಿ ರೂ.ನಷ್ಟಾಗಿದೆ. ಟಿಸಿಎಸ್ 2019ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 8,042 ಕೋಟಿ ರೂ.ಯಷ್ಟು ಲಾಭ ಮಾಡಿಕೊಂಡಿತ್ತು ಎಂದು ನಿಯಂತ್ರಕ ಫೈಲಿಂಗ್​ನಲ್ಲಿ ತಿಳಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.