ನವದೆಹಲಿ: ಟಾಟಾ ಸಮೂಹದ ಅಧ್ಯಕ್ಷ ಎನ್.ಚಂದ್ರಶೇಖರನ್ ಮತ್ತು ಲಾಕ್ಹೀಡ್ ಮಾರ್ಟಿನ್ ಸಿಇಒ ಜಿಮ್ ತೈಕ್ಲೆಟ್ ಅವರು ಪ್ರಸಕ್ತ ವರ್ಷದ ಯುಎಸ್ಐಬಿಸಿ ಗ್ಲೋಬಲ್ ಲೀಡರ್ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಎಂದು ವ್ಯಾಪಾರ ಸಲಹಾ ಗ್ರೂಪ್ ಯುಎಸ್ಐಬಿಸಿ ತಿಳಿಸಿದೆ.
ಪ್ರತಿ ವರ್ಷವು ಯುಎಸ್ಐಬಿಸಿ ಗ್ಲೋಬಲ್ ಲೀಡರ್ಶಿಪ್ ಪ್ರಶಸ್ತಿಗಳನ್ನು ಉದ್ಯಮಿಗಳ ಕಾರ್ಯನಿರ್ವಾಹಕರಿಗೆ ಅವರ ಅತ್ಯುತ್ತಮ ನಾಯಕತ್ವ ಗುರುತಿಸಿ ಮತ್ತು ಇಂಡೋ-ಅಮೆರಿಕ ವ್ಯಾಪಾರ ಮತ್ತು ವ್ಯವಹಾರ ಉತ್ತೇಜನೆಗೆ ನೀಡಲಾಗುತ್ತದೆ ಎಂದು ವಾಷಿಂಗ್ಟನ್ ಮೂಲದ ಯುಎಸ್-ಇಂಡಿಯಾ ಬಿಸಿನೆಸ್ ಕೌನ್ಸಿಲ್ (ಯುಎಸ್ಐಬಿಸಿ) ಹೇಳಿದೆ.
ಈ ವರ್ಷದ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿಯನ್ನು ಲಾಕ್ಹೀಡ್ ಮಾರ್ಟಿನ್ ಮುಖ್ಯ ಕಾರ್ಯನಿರ್ವಾಹಕ/ ಯುಎಸ್-ಇಂಡಿಯಾ ಸಿಇಒ ಫೋರಂನ ಸಹ ಅಧ್ಯಕ್ಷ ಜಿಮ್ ತೈಕ್ಲೆಟ್ ಮತ್ತು ಟಾಟಾ ಸಮೂಹದ ಅಧ್ಯಕ್ಷ ಮತ್ತು ಯುಎಸ್ ಸಹ-ಅಧ್ಯಕ್ಷ ನಟರಾಜನ್ ಚಂದ್ರಶೇಖರನ್ ಅವರಿಗೆ ನೀಡಲಾಗುವುದು ಎಂದು ಅದು ಹೇಳಿದೆ.
ಈ ಪ್ರಶಸ್ತಿಯನ್ನು ಇದಕ್ಕೂ ಮೊದಲು ಸ್ವೀಕರಿಸಿದವರು ಗೂಗಲ್ ಸಿಇಒ ಸುಂದರ್ ಪಿಚೈ, ಗೂಗಲ್ ಸಿಇಒ ಅಡೆನಾ ಫ್ರೀಡ್ಮನ್, ಅಮೆಜಾನ್ ಸಿಇಒ ಜೆಫ್ ಬೆಜೋಸ್ ಮತ್ತು ಸನ್ ಫಾರ್ಮಾಸ್ಯುಟಿಕಲ್ಸ್ ಸಂಸ್ಥಾಪಕ/ ವ್ಯವಸ್ಥಾಪಕ ನಿರ್ದೇಶಕ ದಿಲೀಪ್ ಶಾಂಘ್ವಿ.
ಯುಎಸ್ಐಬಿಸಿಯ ಗ್ಲೋಬಲ್ ಲೀಡರ್ ಪ್ರಶಸ್ತಿಗಳನ್ನು ಸ್ವೀಕರಿಸಲು ನನಗೆ ಗೌರವವಿದೆ. ಈ ವೇಳೆ ಅಮೆರಿಕ ಮತ್ತು ಭಾರತದಲ್ಲಿನ ಸರ್ಕಾರಗಳೊಂದಿಗೆ ವ್ಯವಹಾರವನ್ನು ಸಂಪರ್ಕಿಸುವ ಕೌನ್ಸಿಲ್ನ ಕಾರ್ಯವು ಹೆಚ್ಚು ವಿಮರ್ಶಾತ್ಮಕವಾಗಿಲ್ಲ ಎಂದು ಟೈಕ್ಲೆಟ್ ಹೇಳಿದರು.
ಜಾಗತಿಕ ಲೀಡರ್ ಪ್ರಶಸ್ತಿ ಪಡೆದಿರುವುದು ಒಂದು ದೊಡ್ಡ ಗೌರವ ಮತ್ತು ಅದೊಂದು ಸವಲತ್ತು. ಈ ಪ್ರಶಸ್ತಿಗಾಗಿ ಯುಎಸ್ಐಬಿಸಿಗೆ ಧನ್ಯವಾದಗಳು. ಈ ಸವಾಲಿನ ಕಾಲದಲ್ಲಿ ಭಾರತ-ಯುಎಸ್ ಸಹಭಾಗಿತ್ವಕ್ಕೆ ಉತ್ತಮ ಭವಿಷ್ಯವನ್ನು ನಿರ್ಮಿಸಲು ಅವರು ಮಾಡುತ್ತಿರುವ ಪ್ರಯತ್ನಗಳು ಶ್ಲಾಘನೀಯ ಎಂದು ಚಂದ್ರಶೇಖರನ್ ಹೇಳಿದರು.