ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ನ ವಾರ್ಷಿಕ ಸಭೆಯಲ್ಲಿ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು ಜಿಯೋ ಫೈಬರ್ ಸೇವೆಯನ್ನು ಸೆಪ್ಟೆಂಬರ್ 5ರಿಂದ ಜಾರಿಗೆ ತರಲಾಗುವುದು ಎಂದು ಘೋಷಿಸಿದ್ದರು. ಅದರ ಆನ್ಲೈನ್ ನೋಂದಾವಣೆ ಆರಂಭವಾಗಿದೆ.
ಜಿಯೋ ತನ್ನ ಎಜಿಎಂ ಪ್ಲಾನಿನ ಬೆಲೆಯು ಮಾಸಿಕ ₹ 700 ರಿಂದ ಆರಂಭವಾಗಿ ₹1,000 ಶುಲ್ಕ ವಿಧಿಸಬಹುದು. ಜಾಗತಿಕವಾಗಿ ಬ್ರಾಡ್ ಬ್ಯಾಂಡ್ಗೆ ಹೊಲಿಸಿದರೆ ಇದರ ಬೆಲೆಯು ಕೇವಲ 1/10 ರಷ್ಟು ಇರಬಹುದು.
ಜಿಯೋ ಫೈಬರ್ ಸೇವೆ ಪಡೆಯುವುದು ಹೇಗೆ?
ಜಿಯೋ ಫೈಬರ್ ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಸಂಪರ್ಕ ಪಡೆಯಬಹುದಾಗಿದೆ.
1. ಜಿಯೋ ಫೈಬರ್ ವೆಬ್ಸೈಟ್ನಲ್ಲಿ (https://gigafiber.jio.com/registration) ನಿಮ್ಮ ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಭರ್ತಿ ಮಾಡಿ
2. ವಿವರ ತುಂಬಿದ ಬಳಿಕ ನಿಮ್ಮ ಮೊಬೈಲ್ ನಂಬರ್ಗೆ ಒಟಿಪಿ ಸಂಖ್ಯೆಗಳು ಬರುತ್ತವೆ. ಅವುಗಳನ್ನು ವೆಬ್ ಸೈಟ್ನಲ್ಲಿ ಎಂಟರ್ ಮಾಡಬೇಕು.
3 ಮತ್ತೆ ನಿಮ್ಮ ವಿಳಾಸವನ್ನು ನಮೂದಿಸಬೇಕು ಮತ್ತು ನೀವು ವಾಸವಿರುವ ಪ್ರದೇಶಕ್ಕೆ ಅನುಗುಣವಾಗಿ ನಿಖರವಾದ ಪಿನ್ ಸಂಖೆ ನೀಡಬೇಕು. ನೀವು ವಾಸಿಸುತ್ತಿರುವ ಸ್ಥಳದ ವಿವರ ಅಥವಾ ಫ್ಲ್ಯಾಟ್ ಅಥವಾ ಮನೆಯ ಅಥವಾ ಸೊಸೈಟಿ ಇತ್ಯಾದಿ ಮಾಹಿತಿ ಒದಗಿಸಬೇಕು
4. ನಿಮ್ಮ ನೋಂದಣಿ ಮಾನ್ಯವಾದರೆ ರಿಲಯನ್ಸ್ ಜಿಯೋ ಸಿಬ್ಬಂದಿ ನಿಮಗೆ ಕರೆ ಮಾಡಿ, ನೋಂದಣಿಯ ಸ್ಥಳದ ಮಾಹಿತಿ ನೀಡುತ್ತಾರೆ. ನಿಮ್ಮನ್ನು ಭೇಟಿಯಾಗುವ ದಿನಾಂಕದ ಬಗ್ಗೆ ತಿಳಿಸುತ್ತಾರೆ.
5. ಜಿಯೋ ಸಿಬ್ಬಂದಿ ಭೇಟಿ ನೀಡುವ ದಿನ ನಿಮ್ಮ ವಿಳಾಸದ ದಾಖಲಾತಿಯ ಮೂಲ ಪ್ರತಿಗಳನ್ನು ತೋರಿಸಬೇಕು. ನೋಂದಣಿಯ ಎಲ್ಲ ಹಂತಗಳು ಪೂರ್ಣಗೊಂಡ ಮೇಲೆ ಕಡಿಮೆ ಬೆಲೆಯಲ್ಲಿ ಜಿಯೋ ಬ್ರಾಡ್ ಬ್ಯಾಂಡ್ ಸೇವೆ ಪಡೆಯಬಹುದು.