ETV Bharat / business

100 ದಿನ ಸ್ಟಾರ್​ ಹೋಟೆಲಲ್ಲಿ ತಂಗಿ ₹ 12 ಲಕ್ಷ ಬಿಲ್ ಕೊಡದೆ ಪರಾರಿಯಾದ ಉದ್ಯಮಿ - ವಿಶಾಖಪಟ್ಟಣಂ

ತಾಜ್​ ಬಂಜಾರ ಹೋಟೆಲ್​ ನೀಡಿದ್ದ ದೂರಿನ ಆಧಾರದ ಮೇಲೆ ವಿಶಾಖಪಟ್ಟಣಂ ಮೂಲದ ಉದ್ಯಮಿ ಎ. ಶಂಕರ್​ ನಾರಾಯಣ ಅವರು 12.34 ಲಕ್ಷ ರೂ. ಬಿಲ್​ ಪಾವತಿಸದೆ ಪರಾರಿಯಾಗಿದ್ದಾರೆ. ಆರೋಪಿಯ ವಿರುದ್ಧ ವಂಚನೆ ಮತ್ತು ಅಪರಾಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Aug 11, 2019, 4:40 PM IST

ಹೈದರಾಬಾದ್​: ಸುಮಾರು ದಿನಗಳ ಕಾಲ ಪ್ರತಿಷ್ಠಿತ ತಾರಾ ಹೋಟೆಲ್​​ವೊಂದರಲ್ಲಿ ತಂಗಿದ್ದ ಉದ್ಯಮಿ ಅರ್ಧ ಬಿಲ್​ ಪಾವತಿಸದೆ ಪರಾರಿಯಾದ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

ತಾಜ್​ ಬಂಜಾರ ಹೋಟೆಲ್ ಸಿಬ್ಬಂದಿ​ ನೀಡಿದ್ದ ದೂರಿನನ್ವಯ ವಿಶಾಖಪಟ್ಟಣಂ ಮೂಲದ ಉದ್ಯಮಿ ಎ. ಶಂಕರ್​ ನಾರಾಯಣ ಅವರು 12.34 ಲಕ್ಷ ರೂ. ಬಿಲ್​ ಪಾವತಿಸದೆ ಕಾಲ್ಕಿತ್ತಿದ್ದಾರೆ. ಆರೋಪಿಯ ವಿರುದ್ಧ ವಂಚನೆ ಮತ್ತು ಅಪರಾಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಂಕರ್ ನಾರಾಯಣ ಎಂಬುವವರು ಐಷಾರಾಮಿ ಕೊಠಡಿಯಲ್ಲಿ 102 ದಿನಗಳ ಕಾಲ ಉಳಿದುಕೊಂಡಿದ್ದರು. 102 ದಿನಕ್ಕೆ ಒಟ್ಟು ₹ 25.96 ಲಕ್ಷ ಬಿಲ್​ ಆಗಿದ್ದು, ಇದರಲ್ಲಿ ₹ 13.62 ಲಕ್ಷ ಪಾವತಿಸಿದ್ದಾರೆ. ಉಳಿದ ₹ 12.34 ಲಕ್ಷ ಬಿಲ್​ ಪಾವತಿಸದೆ ಎಸ್ಕೇಪ್ ಆಗಿದ್ದಾರೆ ಎಂದು ಹೋಟೆಲ್​ ಸಿಬ್ಬಂದಿ ದೂರಿದ್ದಾರೆ.

ಉದ್ಯಮಿ ನಾರಾಯಣ ಅವರು ಹೋಟೆಲ್​ ಸಿಬ್ಬಂದಿಯ ಆರೋಪಕ್ಕೆ ಪ್ರತಿಕ್ರಿಯಿಸಿ, ಎಲ್ಲಾ ಬಿಲ್​ ಪಾವತಿ ಮಾಡಿಯೇ ಹೋಟೆಲ್​ ಖಾಲಿ ಮಾಡಿದ್ದೇನೆ. ಅವರ ಆರೋಪದಿಂದ ನನ್ನ ಗೌರವಕ್ಕೆ ಧಕ್ಕೆಯಾಗಿದೆ, ಅವರ ವಿರುದ್ಧ ಕಾನೂನಿನ ಹೋರಾಟ ನಡೆಸುತ್ತೇನೆ ಎಂದು ಹೇಳಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.