ಮುಂಬೈ: ರಿಲಯನ್ಸ್ ಜಿಯೋ ಟೆಲಿಕಾಂ ಮಾರುಕಟ್ಟೆ ಲಗ್ಗೆ ಇಟ್ಟ ಬಳಿಕ ಭಾರತದಲ್ಲಿ ಡೇಟಾ ಬಳಕೆಯ ಪ್ರಮಾಣ ಹೆಚ್ಚಳವಾಗಿದ್ದು, ವಿಶ್ವದಲ್ಲೇ ಅತಿದೊಡ್ಡ ಡೇಟಾ ಮಾರುಕಟ್ಟೆಯನ್ನು ಭಾರತ ಹೊಂದಿದೆ.
2016ರಲ್ಲಿ ಜಿಯೋ ಗ್ರಾಹಕರು ತಿಂಗಳಿಗೆ 20 ಕೋಟಿ ಜಿಬಿಯಷ್ಟು ಡೇಟಾ ಬಳಕೆ ಮಾಡುತ್ತಿದ್ದರು. ಈಗ ಅದು 600 ಕೋಟಿ ಜಿಬಿಗೆ ಬಂದು ತಲುಪಿದೆ ಎಂದು ರಿಲಯನ್ಸ್ ಜಿಯೋ ತಿಳಿಸಿದೆ.
ಎಲ್ಲರಿಗೂ ಸುಲಭವಾದ ಸಂಪರ್ಕ ಒದಗಿಸುವ ಉದ್ದೇಶದಿಂದ ರಿಲಯನ್ಸ್ ಜಿಯೋ ಸಂಪೂರ್ಣ 4ಜಿ ಮೊಬೈಲ್ ಡೇಟಾ ಜಾಲವನ್ನು ವಿಶ್ವದಲ್ಲೇ ಅಗ್ರಗಣ್ಯವಾಗಿ ನೀಡುತ್ತಿದೆ. ಇತ್ತೀಚಿನ ತಂತ್ರಜ್ಞಾನಗಳಲ್ಲಿ ನಿರಂತರ ಹೂಡಿಕೆಯ ಮೂಲಕ ಜಿಯೋ ಭಾರತೀಯ ಬಳಕೆದಾರರಿಗೆ ಅತ್ಯುನ್ನತ ಸೇವೆಗಳನ್ನು ಕೈಗೆಟುಕುವ ದರದಲ್ಲಿ ನೀಡುತ್ತಿದೆ ಎಂದು ಜಿಯೋ ಸಂಸ್ಥೆ ತಿಳಿಸಿದೆ.
ಇತ್ತೀಚಿನ ಡೇಟಾ ಕೇಂದ್ರಿತ ತಂತ್ರಜ್ಞಾನಗಳ ಯುಗಕ್ಕೆ ಪ್ರವೇಶ ಮಾಡಿಸುವ ಮೂಲಕ ಜಿಯೋ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನು ಉಂಟು ಮಾಡುತ್ತಿದೆ. ಭಾರತವನ್ನು ಜಾಗತಿಕ ಡಿಜಿಟಲ್ ನಾಯಕತ್ವದ ಸ್ಥಾನಕ್ಕೆ ಕರೆದೊಯ್ಯುತ್ತಿದೆ ಎಂದು ಹೇಳಿದೆ.