ಮುಂಬೈ: ಭಾರತದಲ್ಲಿ ಮಾರಾಟ ವಿಸ್ತರಿಸುವ ಉದ್ದೇಶದಿಂದ ಆ್ಯಪಲ್ ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿದ ಐಫೋನ್ 10ಆರ್ ಸ್ಮಾರ್ಟ್ಫೋನ್ ಬೆಲೆಯನ್ನು ಕಡಿಮೆ ಮಾಡಿದ ಎಂದು ಮೂಲಗಳು ತಿಳಿಸಿವೆ.
ಕಂಪನಿಯು ಭಾರತದ ಜಾಲತಾಣದಲ್ಲಿ ಬೆಲೆಯಲ್ಲಿ ಯಾವುದೇ ಬದಲಾಬಣೆ ಆಗಿಲ್ಲ. ಆದರೆ, ಮಳಿಗೆಗಳಲ್ಲಿ ₹ 59 ಸಾವಿರಕ್ಕಿಂತ ಕಡಿಮೆ ಬೆಲಗೆ ಸಿಗುತ್ತದೆ ಎಂದು ಗ್ರಾಹಕರು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಹೇಳಿಕೊಂಡಿದೆ. ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ನಲ್ಲಿ ₹ 69,999ರಲ್ಲಿ ಮಾರಾಟ ಆಗುತ್ತಿದೆ.
ಕೆಲವು ಮಳಿಗೆಗಳಲ್ಲಿ ಸೀಮಿತ ಅವಧಿಯ ಕೊಡುಗೆ ಮೂಲಕ ಗ್ರಾಹಕರನ್ನು ಸೇಳೆಯುತ್ತಿವೆ. ಎಚ್ಡಿಎಫ್ಸಿಯ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ದಾರರು ಐಫೋನ್ ಎಕ್ಸ್ಆರ್ ಖರೀದಿಯ ಮೇಲೆ ಶೇ 10ರಷ್ಟು ಕ್ಯಾಶ್ಬ್ಯಾಕ್ ಪಡೆಯಲಿದ್ದಾರೆ. ಈ ಶ್ರೇಣಿಯಡಿ ಮೂರು ಮಾದರಿ ಫೋನ್ಗಳು ಮಾರಾಟ ಆಗುತ್ತಿವೆ.
ಐಫೋನ್ ಮಾದರಿ | ದರ (ಎಂಆರ್ಪಿ) | ಎಚ್ಡಿಎಫ್ಸಿ ರಹಿತ | ಎಚ್ಡಿಎಫ್ಸಿ ಗ್ರಾಹಕ |
ಐಫೋನ್ ಎಕ್ಸ್ಆರ್ 64ಜಿಬಿ | ₹ 76,900 | ₹ 59,900 | ₹ 53,900 |
ಐಫೋನ್ ಎಕ್ಸ್ಆರ್ 128ಜಿಬಿ | ₹ 81,900 | ₹ 64,900 | ₹ 58,400 |
ಐಫೋನ್ ಎಕ್ಸ್ಆರ್ 256ಜಿಬಿ | ₹ 91,900 | ₹ 74,900 | ₹ 67,400 |