ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪರಿಹಾರ ನಿಧಿ ನೀಡುವುದಾಗಿ ಹ್ಯುಂಡೈ ಮೋಟಾರ್ ಇಂಡಿಯಾದ ಸಿಎಸ್ಆರ್ ವಿಭಾಗ ಹ್ಯುಂಡೈ ಮೋಟರ್ ಇಂಡಿಯಾ ಫೌಂಡೇಷನ್ (ಎಚ್‌ಎಂಐಎಫ್) ಹೇಳಿದೆ.
ಹ್ಯುಂಡೈ ಮೋಟರ್ ಇಂಡಿಯಾ ಫೌಂಡೇಷನ್ ಭಾರತೀಯ ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚು ಅಗತ್ಯವಿರುವ ರಕ್ಷಣಾತ್ಮಕ ಮತ್ತು ರೋಗಿಗಳ ಆರೈಕೆ ಸಾಧನಗಳನ್ನು ಒದಗಿಸಲು ಸಿದ್ಧತೆ ನಡೆಸುತ್ತಿದೆ ಎಂದು ಹೇಳಿದೆ.
ಈ ಸವಾಲಿನ ಕಾಲದಲ್ಲಿ ನಮ್ಮ ಜಾಗತಿಕ ದೃಷ್ಟಿಯಿಂದ 'ಮಾನವೀಯತೆಯ ಪ್ರಗತಿ' ಸಮುದಾಯ ಸೇವೆಯ ಎಂಬುದನ್ನು ಈ ಮೂಲಕ ದೃಢಪಡಿಸುತ್ತೇವೆ ಎಂದು ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (ಎಚ್‌ಎಂಐಎಲ್) ಎಂಡಿ/ ಸಿಇಒ ಎಸ್.ಎಸ್. ಕಿಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತವನ್ನು ಬೆಂಬಲಿಸಲು ಕಂಪನಿ ಬದ್ಧವಾಗಿದೆ. ಕೋವಿಡ್ -19 ಬಿಕ್ಕಟ್ಟಿನ ವಿರುದ್ಧದ ಈ ಹೋರಾಟದಲ್ಲಿ ಸಮಾಜ ಮತ್ತು ಸಮುದಾಯಗಳಿಗೆ ಬೆಂಬಲವಾಗಿ ನಿಲ್ಲುತ್ತೇವೆ. ಜನತೆಯ ಕಾಳಜಿಯ ಗುರಿಯನ್ನು ಸಿಎಸ್ಆರ್ ಉಪಕ್ರಮಗಳ ಮುಖೇನ ಮುಂದುವರಿಸುತ್ತೇವೆ ಎಂದಿದ್ದಾರೆ.
ಆಟೋ ತಯಾರಿಕ ಹ್ಯುಂಡೈ, ಪಿಎಂ ಕೇರ್ಸ್ ಫಂಡ್ ಮತ್ತು ತಮಿಳುನಾಡು ಮುಖ್ಯಮಂತ್ರಿಗಳ ಸಾರ್ವಜನಿಕ ಪರಿಹಾರ ನಿಧಿಗೆ ದೇಣಿಗೆ ನೀಡಲಿದ್ದಾರೆ.
ದಕ್ಷಿಣ ಕೊರಿಯಾದಿಂದ ಆಮದು ಮಾಡಿಕೊಳ್ಳುವ ಸುಧಾರಿತ ಕೋವಿಡ್ -19 ಡಯಾಗ್ನೋಸ್ಟಿಕ್ ಕಿಟ್‌ಗಳನ್ನು ಸಹ ಒದಗಿಸುತ್ತದೆ. ತಮಿಳುನಾಡು ಮತ್ತು ಇತರ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ವೆಂಟಿಲೇಟರ್‌ಗಳ ಉತ್ಪಾದನೆಯನ್ನು ಹೆಚ್ಚಿಸಲು ಸ್ಥಳೀಯ ಉತ್ಪಾದಕರೊಂದಿಗೆ ಕೈಜೋಡಿಸುವುದಾಗಿ ಎಚ್‌ಎಂಐಎಫ್ ಹೇಳಿದೆ.
ಮೂಲ ಮಾದರಿಯ ವೆಂಟಿಲೇಟರ್‌ನ ಆಂತರಿಕ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದು, ಇದನ್ನು ಈಗಾಗಲೇ ತಮಿಳುನಾಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಾಹನ ತಯಾರಕರು ತಿಳಿಸಿದ್ದಾರೆ.