ನವದೆಹಲಿ: ಹುರುನ್ 2020ರ ಜಾಗತಿಕ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅಗ್ರ ಸ್ಥಾನದಲ್ಲಿದ್ದಾರೆ.
ನಿಧಾನಗತಿಯ ಜಾಗತಿಕ ಆರ್ಥಿಕತೆಯ ಮಧ್ಯೆಯೂ ಭಾರತದ ಕೋಟ್ಯಧೀಶರ ಸಂಖ್ಯೆ ಹಾಗೂ ಅವರ ಸಂಪತ್ತು ಹೆಚ್ಚಳವಾಗುತ್ತಲ್ಲೇ ಇದೆ. ವಿಶ್ವದ 2,817 ಶ್ರೀಮಂತರ ವೈಯಕ್ತಿಕ ಆದಾಯ 1 ಬಿಲಿಯನ್ ಡಾಲರ್ ಅಥವಾ ಅದಕ್ಕೂ ಅಧಿಕವಾಗಿದೆ ಎಂದು ಹುರುನ್ ತಿಳಿಸಿದೆ.
ಜೆಫ್ ಬೆಜೋಸ್, ಹುರುನ್ ಪಟ್ಟಿಯಲ್ಲಿ ಸತತ ಮೂರನೇ ವರ್ಷವೂ ಅಗ್ರ ಸ್ಥಾನದಲ್ಲಿ ಇದ್ದಾರೆ. ಇವರ ಬಳಿ ಅಂದಾಜು 140 ಬಿಲಿಯನ್ ಡಾಲರ್ನಷ್ಟು ಸಂಪತ್ತು ಇದ್ದು, ಕಳೆದ ವರ್ಷಕ್ಕಿಂತ 7 ಬಿಲಿಯನ್ ಡಾಲರ್ನಷ್ಟು ಇಳಿಕೆ ಆಗಿದೆ.
ಅಗ್ರ 10ರಲ್ಲಿ ಬೆಜೋಸ್‌ನ, ಎಲ್‌ಎಂಹೆಚ್‌ವಿಯ ಬರ್ನಾರ್ಡ್ ಅರ್ನಾಲ್ಟ್ ಅವರು 107 ಬಿಲಿಯನ್ ಡಾಲರ್, ಮೈಕ್ರೋಸಾಫ್ಟ್ನ ಬಿಲ್ ಗೇಟ್ಸ್ 106 ಬಿಲಿಯನ್ ಡಾಲರ್, ಬರ್ಕ್‌ಷೈರ್ ಹ್ಯಾಥ್‌ವೇನ ವಾರೆನ್ ಬಫೆಟ್ 102 ಬಿಲಿಯನ್ ಡಾಲರ್, ಫೇಸ್ಬುಕ್ನ ಮಾರ್ಕ್ ಜುಕರ್‌ಬರ್ಗ್ 84 ಬಿಲಿಯನ್ ಡಾಲರ್, ಜರಾ ಕಂಪನಿಯ ಅರ್ಮಾನ್ಸಿಯೋ ಒರ್ಟೆಗಾ 81 ಬಿಲಿಯನ್ ಡಾಲರ್, ಅಮೆರಿಕ ಮೊವಿಲ್ ಸಂಸ್ಥೆಯ ಕಾರ್ಲೋಸ್ ಸ್ಲಿಮ್ ಮತ್ತು ಕುಟುಂಬ 72 ಬಿಲಿಯನ್ ಡಾಲರ್, ಗೂಗಲ್ನ ಸೆರ್ಗೆ ಬ್ರಿನ್ ಮತ್ತು ಲ್ಯಾರಿ ಪೇಜ್ 68 ಬಿಲಿಯನ್ ಡಾಲರ್, ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಹಾಗೂ ಮೈಕ್ರೋಸಾಫ್ಟ್ನ ಸ್ಟೀವ್ ಬಾಲ್ಮರ್ ಜಂಟಿಯಾಗಿ 67 ಬಿಲಿಯನ್ ಡಾಲರ್ ಸಂಪತ್ತಿನ ಮೂಲಕ ನಂತರದ ಸ್ಥಾನದಲ್ಲಿ ಇದ್ದಾರೆ.