ಬೀಜಿಂಗ್: ಚೀನಾದ ತಂತ್ರಜ್ಞಾನ ದೈತ್ಯ ಹುವಾಯ್ ಕನ್ಸುಮರ್ ಬ್ಯುಸಿನೆಸ್ ಗ್ರೂಪ್, ಮುಂಬರಲಿರುವ 5ಜಿ ಶ್ರೇಣಿಯ ಉತ್ಪನ್ನಗಳ ಸಾಫ್ಟ್ವೇರ್ ಹಾಗೂ ಹಾರ್ಡ್ವೇರ್ ಉತ್ಪನ್ನಗಳನ್ನು ಘೋಷಿಸಿದೆ.
ಅವುಗಳಲ್ಲಿ ಕೆಲವು ಇಂತಿವೆ..
- ಹುವಾಯ್ ಮೆಟೆ ಎಕ್ಸ್ಎಸ್ ಫೋಲ್ಡೆಬಲ್ ಸ್ಮಾರ್ಟ್ಫೋನ್
- ಹುವಾಯ್ ಮೆಟೆಲ್ ಪ್ಯಾಡ್ ಪ್ರೋ 5ಜಿ
- ಹುವಾಯ್ ವೈ-ಫೈ ಎಎಕ್ಸ್3 ಅಂಡ್ ಹುವಾಯ್ 5ಜಿ ಸಿಪಿಇ ಪ್ರೋ 2+
- ಎರಡು ವೈಫೈ- 6+ ಹೈಸ್ಪೀಡ್ ಸಂಪರ್ಕ ಸಾಧನ
ಮೊಬೈಲ್ ಆಫೀಸ್ ಅನುಭವವನ್ನು ಪರಿವರ್ತಿಸಲು ಟೆಕ್ ದೈತ್ಯ ಹುವಾಯ್, 10ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್ ಮತ್ತು ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಚಾಲಿತ ಹೊಸ ಹುವಾಯ್ ಮೇಟ್‌ಬುಕ್ ಲ್ಯಾಪ್‌ಟಾಪ್‌ಗಳನ್ನು ಅನಾವರಣಗೊಳಿಸಿತು. ಉತ್ಪಾದಕತೆಯ ವೈಶಿಷ್ಟ್ಯಗಳಾದ ಹುವಾಯ್ ಶೇರ್ ಮತ್ತು ಮಲ್ಟಿ-ಸ್ಕ್ರೀನ್ನಂತಹ ಲಕ್ಷಣಗಳನ್ನು ಇದು ಒಳಗೊಂಡಿದೆ.
ಕಡಿಮೆ ಬೆಲೆಯ 5ಜಿ ಸಂವಹನ ಸಾಧನಗಳು, ಮೊಬೈಲ್ ಎಐ, ಆಪರೇಟಿಂಗ್ ಸಿಸ್ಟಮ್ಸ್ (ಓಎಸ್), ಕ್ಯಾಮೆರಾ ಮತ್ತು ಆಡಿಯೋ-ದೃಶ್ಯ ಪರಿಕರಗಳನ್ನು ನೂತನ ಫೀಚರ್ ಜತೆಗೆ ಪರಿಚಯಿಸಲಿದೆ.
ಎಲ್ಲ ಸನ್ನಿವೇಶಗಳಲ್ಲೂ ಬೆಳವಣಿಗೆ ವೇಗವರ್ಧಿಸುದುತ್ತಾ ಜಾಗತಿಕ ಡೆವಲಪರ್‌ಗಳ ಜತೆಗೆ ಕೆಲಸ ಮಾಡಲು ನಾವು ಉತ್ಸುಕರಾಗಿದ್ದೇವೆ. ತಂತ್ರಜ್ಞಾನವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೇವೆ ಎಂದು ಹುವಾಯ್ ಸಿಇಒ ರಿಚರ್ಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.