ETV Bharat / business

ಇ-ಕಾಮರ್ಸ್​ ದೈತ್ಯ ಅಮೆಜಾನ್​, ಫ್ಲಿಪ್​ಕಾರ್ಟ್​ಗೆ ಕಡಿವಾಣ ಹಾಕಿದ ಕೇಂದ್ರ ಸರ್ಕಾರ - ಎಫ್​ಡಿಐ ನಿಯಮಗಳು

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಫೆಮಾ) ಸೆಕ್ಷನ್ 15ರ ಅಡಿ ಇ-ಕಾಮರ್ಸ್ ಕಂಪನಿಗಳು ವ್ಯವಹರಿಸುತ್ತವೆ. ಎಫ್​​ಡಿಐ ನಿಯಮಗಳನ್ನು ಪಾಲನೆ ಬಗ್ಗೆ ತಿಳಿಯಲು ಕಂಪನಿಗಳು, ಹಿಂದಿನ ಹಣಕಾಸು ವರ್ಷದ ಸೆಪ್ಟೆಂಬರ್ ಅಂತ್ಯದ ವೇಳೆಗೆ ಲೆಕ್ಕಪರಿಶೋಧಕರಿಂದ ವರದಿ ಪಡೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

e commerce
ಇ ಕಾಮರ್ಸ್​
author img

By

Published : Dec 6, 2019, 7:05 PM IST

ನವದೆಹಲಿ: ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್ ಕಂಪೆನಿಗಳು ಪ್ರತಿವರ್ಷ ಸೆಪ್ಟೆಂಬರ್ 30ರೊಳಗೆ ಲೆಕ್ಕಪರಿಶೋಧಕರಿಂದ ಎಫ್‌ಡಿಐ ನೀತಿ ಅನುಸರಣೆಯ ವರದಿ ಸಲ್ಲಿಸುವುದು ಕಡ್ಡಾಯವೆಂದು ಕೇಂದ್ರ ಸರ್ಕಾರ ಸೂಚಿಸಿದೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಫೆಮಾ) ಸೆಕ್ಷನ್ 15ರ ಅಡಿ ಇ-ಕಾಮರ್ಸ್ ಕಂಪನಿಗಳು ವ್ಯವಹರಿಸುತ್ತವೆ. ಎಫ್​​ಡಿಐ ನಿಯಮಗಳನ್ನು ಪಾಲಿಸುತ್ತಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕಂಪನಿಗಳು ಹಿಂದಿನ ಹಣಕಾಸು ವರ್ಷದ ಸೆಪ್ಟೆಂಬರ್ ಅಂತ್ಯದ ವೇಳೆಗೆ ಲೆಕ್ಕಪರಿಶೋಧಕರಿಂದ ವರದಿ ಪಡೆದುಕೊಳ್ಳಬೇಕು ಎಂದು ಹೇಳಿದೆ.

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಮಾನದಂಡಗಳ ಉಲ್ಲಂಘನೆಯ ಬಗ್ಗೆ ವ್ಯಾಪಾರಿ ಸಂಸ್ಥೆಗಳ ಒಕ್ಕೂಟಗಳು ಕಳವಳ ವ್ಯಕ್ತಪಡಿಸಿದ್ದವು. ಜಾಗತಿಕ ಇ-ಕಾಮರ್ಸ್ ಮತ್ತು ಅಮೆರಿಕದ ಕೈಗಾರಿಕೆಗಳ ಬೇಡಿಕೆಗಳಿಗೆ ಸಹಕಾರಿ ಆಗುವಂತೆ ತಿದ್ದುಪಡಿ ಮಾಡಬಾರದು ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟವು ಈ ಹಿಂದೆಯೇ ಸರ್ಕಾರಕ್ಕೆ ಮನವರಿಕೆ ಮಾಡಿಕೊಂಡಿತ್ತು.

ಎಫ್‌ಡಿಐ ನಿಯಮಗಳನ್ನು ಉಲ್ಲಂಘಿಸಿ ಸ್ಪರ್ಧಾತ್ಮಕ ಬೆಲೆಗಳ ಮಾರಾಟದ ನೀತಿಗೆ ವಿರುದ್ಧವಾಗಿ ನಡೆದುಕೊಂಡರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಎಚ್ಚರಿಸಿದ್ದರು. ನವೆಂಬರ್ 5ರಂದು ಅಮೆಜಾನ್ ಇಂಡಿಯಾ ಮುಖ್ಯಸ್ಥ ಅಮಿತ್ ಅಗರ್‌ವಾಲ್ ಅವರೊಂದಿಗೆ ಗೋಯಲ್ ನಡೆಸಿದ ಮಾತುಕತೆಯ ವೇಳೆ ಎಚ್ಚರಿಸಿದ್ದರು ಎಂದು ಮೂಲಗಳು ತಿಳಿಸಿವೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.