ETV Bharat / business

ESIC-SBI ಒಪ್ಪಂದ: ಚಿಕಿತ್ಸಾ ವೆಚ್ಚ ಮಧ್ಯಸ್ಥಗಾರ, ಫಲಾನುಭವಿ ಖಾತೆಗೆ ನೇರ ವರ್ಗ... ಉಳಿದ ಬ್ಯಾಂಕ್​ಗಳು​ ಹೇಗೆ?

ಮಂಗಳವಾರ ಐಎಸ್​ಐಸಿ- ಎಸ್​ಬಿಐ ಸಹಿ ಹಾಕಿದ ಒಪ್ಪಂದದ ಅನ್ವಯ, ಎಸ್‌ಬಿಐ ಇ- ಪಾವತಿ ಸೇವೆಯನ್ನು ಎಲ್ಲ ಇಎಸ್‌ಐಸಿ ಫಲಾನುಭವಿಗಳಿಗೆ ಮತ್ತು ಬ್ಯಾಂಕ್​ ಖಾತೆಗಳಿಗೆ ಯಾವುದೇ ಹಸ್ತಕ್ಷೇಪವಿಲ್ಲದೆ ಏಕೀಕೃತ ಮತ್ತು ಸ್ವಯಂಚಾಲಿತ ಪ್ರಕ್ರಿಯೆ ಅಡಿ ನೇರ ಹಣ ವರ್ಗಾವಣೆ ಆಗಲಿದೆ ಎಂದು ಇಎಸ್‌ಐಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಸಾಂದರ್ಭಿಕ ಚಿತ್ರ
author img

By

Published : Sep 4, 2019, 12:55 PM IST

ನವದೆಹಲಿ: ರಾಜ್ಯ ನೌಕರರ ವಿಮಾ ನಿಗಮವು (ಇಎಸ್​ಐಸಿ) ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ (ಎಸ್​ಬಿಐ) ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಇಎಸ್​ಐ ಫಲಾನುಭಾವಿಯ ಚಿಕಿತ್ಸಾ ವೆಚ್ಚವು ಮಧ್ಯಸ್ಥಗಾರರ ಹಾಗೂ ಫಲಾನುಭವಿಗಳ ಬ್ಯಾಂಕ್​ ಖಾತೆಗಳಿಗೆ ನೇರ ಹಣ ವರ್ಗಾಯಿಸುವ ಒಮ್ಮತವನ್ನು ತೆಗೆದುಕೊಂಡಿವೆ.

ಮಂಗಳವಾರ ಐಎಸ್​ಐಸಿ- ಎಸ್​ಬಿಐ ಸಹಿ ಹಾಕಿದ ಒಪ್ಪಂದದ ಅನ್ವಯ, ಎಸ್‌ಬಿಐ ಇ- ಪಾವತಿ ಸೇವೆಯನ್ನು ಎಲ್ಲ ಇಎಸ್‌ಐಸಿ ಫಲಾನುಭವಿಗಳಿಗೆ ಮತ್ತು ಬ್ಯಾಂಕ್​ ಖಾತೆಗಳಿಗೆ ಯಾವುದೇ ಹಸ್ತಕ್ಷೇಪವಿಲ್ಲದೆ ಏಕೀಕೃತ ಮತ್ತು ಸ್ವಯಂಚಾಲಿತ ಪ್ರಕ್ರಿಯೆ ಅಡಿ ನೇರ ಹಣ ವರ್ಗಾವಣೆ ಆಗಲಿದೆ ಎಂದು ಇಎಸ್‌ಐಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ನಗದು ನಿರ್ವಹಣಾ ಪ್ರಕ್ರಿಯೆಯನ್ನು ಇ- ಪಾವತಿ ತಂತ್ರಜ್ಞಾನ ಮುಖೇನ ಬ್ಯಾಂಕ್ ಮತ್ತು ಇಎಸ್ಐಸಿ ಯೋಜನಾ ನಿರ್ವಹಣೆಯ ನಡುವೆ ನಡೆಯಲಿದೆ. ಏಕಮುಖ ಇ- ಪಾವತಿಯು ಇಎಸ್ಐಸಿ ಫಲಾನುಭವಿಗಳಿಗೆ ಹಾಗೂ ಪಾವತಿದಾರರಿಗೆ ಕಾನೂನು ಬದ್ಧವಾದ ಲಾಭ ಪಡೆಯಲು ನೆರವಾಗಲಿದೆ. ನೈಜ ಸಮಯದ ಆಧಾರದ ಮೇಲೆ ಸೇವೆ ಲಭ್ಯವಾಗುವುದರಿಂದ ಸಮಯದ ವಿಳಂಬ ತಪ್ಪಿಸಲಿದೆ. ಪುನರಾವರ್ತಿತ ಮತ್ತು ಹಸ್ತಚಾಲಿತ ಡೇಟಾ ಭರ್ತಿಯಿಂದ ಉಂಟಾಗುವ ತಪ್ಪು ಹಾಗೂ ದೋಷಗಳನ್ನು ತೆಗೆದುಹಾಕಲು ನೆರವಿಗೆ ಬರಲಿದೆ.

ನೌಕರನಿಗೆ ಏನು ಲಾಭ?

ಈ ಮೊದಲು 'ಇಎಸ್​ಐ ಕಾಯ್ದೆ 1948'ರ ಅನ್ವಯ, ಮಾಸಿಕ 21,000 ರೂ.ಗಿಂತ ಕಡಿಮೆ ವೇತನ ಪಡಿಯುವ ಉದ್ಯೋಗಿಯ ಸಂಬಳದಲ್ಲಿ ಶೇ 3.25ರಷ್ಟು ಹಾಗೂ ಸಂಸ್ಥೆ/ ಕಂಪನಿಯ ವತಿಯಿಂದ ಶೇ 75ರಷ್ಟು ಕಡಿತಗೊಂಡು ಒಟ್ಟು ಶೇ 4ರಷ್ಟು ಹಣವನ್ನು ಇಎಸ್​ಐ ಕಾರ್ಪೊರೇಷನ್​ ನಿರ್ವಹಿಸುತ್ತಿತ್ತು. ಚಿಕಿತ್ಸೆಗೆ ಒಳಗಾದ ಉದ್ಯೋಗಿಗಳಿಗೆ ಇಎಸ್​ಐ ಕಾರ್ಪೊರೇಷನ್​ ಔಷಧಿ ಹಾಗೂ ಚಿಕಿತ್ಸಾ ವೆಚ್ಚವನ್ನು ಪಾವತಿಸುತ್ತಿತ್ತು. ಎಸ್​ಬಿಐ ಮತ್ತು ಇಎಸ್​ಐಸಿ ನಡುವಿನ ಈ ಒಪ್ಪಂದದಿಂದ ಮಧ್ಯಸ್ಥಗಾರರ ಹಾಗೂ ಫಲಾನುಭಾವಿಗಳ ಬ್ಯಾಂಕ್​ ಖಾತೆಗೆ ನೇರವಾಗಿ ಹಣ ವರ್ಗಾವಣೆ ಆಗಲಿದೆ. ಇದರಿಂದ ಸಮಯದ ಉಳಿತಾಯ ಹಾಗೂ ಅನಾಗತ್ಯ ಅಲೆದಾಟ ತಪ್ಪಲಿದೆ.

ಉಳಿದ ಬ್ಯಾಂಕ್​ಗಳು ಹೇಗೆ?

ಸರಳೀಕೃತ ಪಾವತಿಯ ಉದ್ದೇಶಿತ ಒಪ್ಪಂದವು ಎಸ್​ಬಿಐ ಮತ್ತು ಇಎಸ್​ಐ ನಡುವೆ ಏರ್ಪಟ್ಟಿದ್ದು, ಇತರೆ ಬ್ಯಾಂಕ್​ಗಳ ಸೇರ್ಪಡೆ ಹೇಗೆ ಎಂಬುದು ಪ್ರಶ್ನಾರ್ಹವಾಗಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.