ನವದೆಹಲಿ: ವಿಶ್ವದ ಅತಿದೊಡ್ಡ ಲಸಿಕೆ ತಯಾರಿಕಾ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್‌ಐಐ) ಸಿಇಒ ಅದಾರ್ ಪೂನವಾಲ್ಲಾ ಅವರು, 'ಕೊವೊವಾಕ್ಸ್' ಲಸಿಕೆ ಪ್ರಯೋಗವನ್ನು ಎಸ್‌ಐಐ ಮತ್ತು ಅಮೆರಿಕ ಮೂಲದ ಜೈವಿಕ ತಂತ್ರಜ್ಞಾನ ಕಂಪನಿ ನೊವಾವಾಕ್ಸ್ ಜಂಟಿಯಾಗಿ ಅಭಿವೃದ್ಧಿಪಡಿಸಲಿರುವ ಲಸಿಕೆಯನ್ನು ಅಂತಿಮವಾಗಿ ಭಾರತದಲ್ಲಿ ಪ್ರಾರಂಭಿಸಿದೆ ಎಂದು ಘೋಷಿಸಿದ್ದಾರೆ.
ಕೋವಿಡ್-19ರ ಆಫ್ರಿಕನ್ ಮತ್ತು ಇಂಗ್ಲೆಂಡ್ ರೂಪಾಂತರಗಳ ವಿರುದ್ಧ ಲಸಿಕೆ ಪರೀಕ್ಷಿಸಲಾಗಿದೆ. ಒಟ್ಟಾರೆ ಶೇ 89ರಷ್ಟು ಪರಿಣಾಮಕಾರಿತ್ವ ಹೊಂದಿದೆ. 2021ರ ಸೆಪ್ಟೆಂಬರ್ ಒಳಗೆ ಲಸಿಕೆ ಬಿಡುಗಡೆ ಮಾಡಬಹುದೆಂದು ಆಶಿಸುತ್ತೇನೆ ಎಂದು ಅದಾರ್ ಹೇಳಿದ್ದಾರೆ.
ಕೊವೊವಾಕ್ಸ್ ಪ್ರಯೋಗಗಳು ಅಂತಿಮವಾಗಿ ಭಾರತದಲ್ಲಿ ಪ್ರಾರಂಭವಾಗುತ್ತವೆ. ಲಸಿಕೆಯನ್ನು ನೊವಾವಾಕ್ಸ್ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಹಭಾಗಿತ್ವದ ಮೂಲಕ ತಯಾರಿಸಲಾಗುತ್ತದೆ. ಇದನ್ನು ಕೋವಿಡ್-19ನ ಆಫ್ರಿಕನ್ ಮತ್ತು ಇಂಗ್ಲೆಂಡ್ ರೂಪಾಂತರಗಳ ವಿರುದ್ಧ ಪರೀಕ್ಷಿಸಲಾಗಿದೆ. ಒಟ್ಟಾರೆ ಶೇ 89ರಷ್ಟು ಪರಿಣಾಮಕಾರಿತ್ವ ಹೊಂದಿದೆ. 2021ರ ಸೆಪ್ಟೆಂಬರ್ ಒಳಗೆ ಪ್ರಾರಂಭಿಸಲು ಆಶಿಸುತ್ತೇವೆ! ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರುವವರಿಂದ ಕಚ್ಚಾ ತೈಲ ಖರೀದಿ : ಧರ್ಮೇಂದ್ರ ಪ್ರಧಾನ್
ಭಾರತದಲ್ಲಿ 'ಕೊವೊವಾಕ್ಸ್' ಹೆಸರಿನ ಲಸಿಕೆ ತಯಾರಿಸಲು ಎಸ್‌ಐಐ ನೋವಾವಾಕ್ಸ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ನೊವಾವಾಕ್ಸ್ ಇಂಕ್ ಮಾರ್ಚ್ 11ರಂದು ಇಂಗ್ಲೆಂಡ್ನಲ್ಲಿ ತನ್ನ ಲಸಿಕೆ ಮೆಂಮಬರ್ ಎನ್ವುಎಕ್ಸ್-ಕೋವಿ 2373ರ 3ನೇ ಹಂತದ ಪ್ರಯೋಗಗಳಲ್ಲಿ ಮೂಲ ಕೋವಿಡ್ -19 ವೈರಸ್ನಿಂದ ಉಂಟಾದ ಸೌಮ್ಯ, ಮಧ್ಯಮ ಮತ್ತು ತೀವ್ರ ರೋಗದ ವಿರುದ್ಧ ಶೇ 96.4ರಷ್ಟು ಅಂತಿಮ ಪರಿಣಾಮಕಾರಿತ್ವ ಘೋಷಿಸಿತು.
ಎನ್ವುಎಕ್ಸ್-ಕೋವಿ 2373 ಅನ್ನು ಎರಡು ಪ್ರಮುಖ ಹಂತ 3 ಪ್ರಯೋಗಗಳಲ್ಲಿ ಮೌಲ್ಯಮಾಪನ ಮಾಡಲಾಗುತ್ತಿದೆ. ಇದು ಯುಕೆಯಲ್ಲಿ ನಡೆದ ಪ್ರಯೋಗವಾಗಿದ್ದು, ಮೂಲ ವೈರಸ್ ತಳಿ ವಿರುದ್ಧ ಶೇ 96.4 ರಷ್ಟು ಮತ್ತು ಒಟ್ಟಾರೆ ಶೇ 89.7ರಷ್ಟು ಪರಿಣಾಮಕಾರಿತ್ವ ತೋರಿಸಿದೆ. ಯುಎಸ್ ಮತ್ತು ಮೆಕ್ಸಿಕೊದಲ್ಲಿ ಪ್ರಾರಂಭವಾದ ಪ್ರಿವೆಂಟ್ -19 ಪ್ರಯೋಗ 2020 ಡಿಸೆಂಬರ್ನಲ್ಲಿ ನಡೆದಿತ್ತು ಎಂದು ಕಂಪನಿ ಹೇಳಿದೆ.