ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಹಿನ್ನೆಲೆಯಲ್ಲಿ ಜೂನ್ 30ರವರೆಗೆ ಭಾರತದಲ್ಲಿ ತನ್ನ ಗ್ರಾಹಕರಿಗೆ ವಾರಂಟಿ ಮತ್ತು ಸೇವಾ ಯೋಜನೆಗಳನ್ನು ವಿಸ್ತರಿಸಿದೆ ಎಂದು ಜರ್ಮನ್ ಐಷಾರಾಮಿ ಕಾರು ತಯಾರಕ ಆಡಿ ತಿಳಿಸಿದೆ.
ಏಪ್ರಿಲ್ ಮತ್ತು ಮೇ ಲಾಕ್‌ಡೌನ್ ತಿಂಗಳುಗಳಲ್ಲಿ ಯೋಜನೆಗಳು ಕಳೆದುಹೋಗುವ ಗ್ರಾಹಕರಿಗೆ ಪ್ರಮಾಣಿತ ಮತ್ತು ವಿಸ್ತೃತ ವಾರಂಟಿ ಹಾಗೂ ಸೇವಾ ಯೋಜನೆಗಳ ವಿಸ್ತರಣೆ ಅನ್ವಯಿಸುತ್ತದೆ ಎಂದು ಆಡಿ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.
ಲಾಕ್‌ಡೌನ್ ಕಾರಣದಿಂದಾಗಿ ಸವಾಲುಗಳನ್ನು ಎದುರಿಸುತ್ತಿರುವ ಗ್ರಾಹಕರು ಈ ವಿಸ್ತೃತ ಯೋಜನೆಗಳಿಂದ ಪ್ರಯೋಜನ ಪಡೆಯುತ್ತಾರೆ ಎಂದಿದೆ.
ಇದನ್ನೂ ಓದಿ: ಹೊಸ ಗೌಪ್ಯತೆ ನೀತಿ ಹಿಂಪಡೆಯಲು ವಾಟ್ಸ್ಆ್ಯಪ್ಗೆ ಐಟಿ ಸಚಿವಾಲಯ ನಿರ್ದೇಶನ - ಮೂಲಗಳು
ಹೆಜ್ಜೆಯ ಬಗ್ಗೆ ಪ್ರತಿಕ್ರಿಯಿಸಿದ ಆಡಿ ಇಂಡಿಯಾ ಮುಖ್ಯಸ್ಥ ಬಲ್ಬೀರ್ ಸಿಂಗ್, ಮನೆಯಲ್ಲೇ ಇರುವುದು ಮತ್ತು ಸುರಕ್ಷಿತವಾಗಿರಲು ಸಮಯದ ಅಗತ್ಯಕ್ಕೆ ಅನುಗುಣವಾಗಿ, ನಾವು 2021ರ ಜೂನ್ 30ರವರೆಗೆ ಅಸ್ತಿತ್ವದಲ್ಲಿರುವ ಆಡಿ ಗ್ರಾಹಕರಿಗೆ ಪ್ರಮಾಣಿತ ಖಾತರಿ, ವಿಸ್ತೃತ ವಾರಂಟಿ ಮತ್ತು ಸೇವಾ ಯೋಜನೆಗಳ ವಿಸ್ತರಣೆಗಳನ್ನು ಹೊರತರುತ್ತಿದ್ದೇವೆ ಎಂದರು.
ಗ್ರಾಹಕರು ತಮ್ಮ ಆಡಿ ಕಾರುಗಳಿಗೆ ಸೇವೆಗಳನ್ನು ಸ್ವೀಕರಿಸುವ ಯೋಜನೆಗಳನ್ನು ವಿಸ್ತರಿಸಲು ಅವಕಾಶವಿದೆ ಎಂದು ಭರವಸೆ ನೀಡಿದರು.