ಮುಂಬೈ: ಬಜಾಜ್ ಆಟೋದ ಬಹುನಿರೀಕ್ಷಿತ ಚೇತಕ್ ಎಲೆಕ್ಟ್ರಾನಿಕ್ ಸ್ಕೂಟರ್ ಬುಕ್ಕಿಂಗ್ ಜನವರಿ 15ರಿಂದ ಆರಂಭವಾಗಲಿದೆ.
2019ರ ಅಕ್ಟೋಬರ್ನಲ್ಲಿ ಬಜಾಜ್ ಆಟೋ ಹೊಸ ಚೇತಕ್ ಅನಾವರಣಗೊಳಿಸಿತ್ತು. ಅರ್ಬೇನ್ ಹಾಗೂ ಪ್ರೀಮಿಯಂ ಎರಡು ಮಾದರಿಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಿರಲಿದೆ. ಸ್ಕೂಟರ್ನೊಂದಿಗೆ ಹೋಂ-ಚಾರ್ಜಿಂಗ್ ಸ್ಟೇಷನ್ ಸಿಗಲಿದೆ.
ಚೇತಕ್ನ ಅಧಿಕೃತ ವೆಬ್ಸೈಟ್ನಲ್ಲಿ ಆರಂಭಿಕ ಮೊತ್ತ ₹ 2,000 ನೀಡಿ ಗ್ರಾಹಕರು ಸ್ಕೂಟರ್ ಬುಕ್ ಮಾಡಬಹುದು. ಡ್ರಮ್ ಬ್ರೇಕ್ಗಳನ್ನು ಹೊಂದಿರುವ ಅರ್ಬೇನ್ ಮಾದರಿ ಸ್ಕೂಟರ್ಗೆ ₹ 1 ಲಕ್ಷ, ಡಿಸ್ಕ್ ಬ್ರೇಕ್ಗಳು ಹಾಗೂ ಲಕ್ಸುರಿ ಫಿನಿಷ್ ಹೊಂದಿರುವ ಚೇತಕ್ ಪ್ರೀಮಿಯಂ ಎಡಿಷನ್ಗೆ ₹ 1.15 ಲಕ್ಷ (ಎಕ್ಸ್ ಷೋರೂಂ) ನಿಗದಿಯಾಗಿದೆ.
4 ಕಿ.ವ್ಯಾಟ್ ಎಲೆಕ್ಟ್ರಿಕ್ ಮೋಟರ್ ಹೊಂದಿದ್ದು ಲಿಥಿಯಮ್-ಅಯಾನ್ ಬ್ಯಾಟರಿ ಒಳಗೊಂಡಿದೆ. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ ಇಕೊ ಮೋಡ್ನಲ್ಲಿ 95 ಕಿ.ಮೀ. ಕ್ರಮಿಸಬಹುದು. ಸ್ಪೋರ್ಟ್ ಮೋಡ್ನಲ್ಲಿ ಸ್ಕೂಟರ್ಗೆ 85 ಕಿ.ಮೀ ದೂರ ಸಂಚರಿಸುವ ಸಾಮರ್ಥ್ಯವಿದೆ. 3 ವರ್ಷ ಮತ್ತು 50,000 ಕಿ.ಮೀ.ವರೆಗೂ ಬ್ಯಾಟರಿಗೆ ವಾಯ್ದೆ ನೀಡಲಾಗಿದೆ. ಬೈಕ್ನ ಪ್ರಾರಂಭಿಕ ಬೆಲೆ ₹ 1 ಲಕ್ಷ ಇರಲಿದೆ ಎಂದು ಕಂಪನಿ ತಿಳಿಸಿದೆ.