ನವದೆಹಲಿ: ಹಣಕಾಸು ಬಿಕ್ಕಟ್ಟಿಗೆ ಸಿಲುಕಿರುವ ಖಾಸಗಿ ವಲಯದ ಯೆಸ್ ಬ್ಯಾಂಕ್‌ನ ನಿರ್ದೇಶಕ ಮಂಡಳಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ ತೀರ್ಮಾನದಿಂದ ಗ್ರಾಹಕರು ಆತಂಕಗೊಂಡಿದ್ದಾರೆ.
ಇದರ ನಡುವೆ ಕೇಂದ್ರ ಸರ್ಕಾರ ಕೂಡ ಏಪ್ರಿಲ್ 3ರವರೆಗೆ ಬ್ಯಾಂಕ್ ವಹಿವಾಟಿಗೆ ತಡೆಯಾಜ್ಞೆ ನೀಡಿದೆ. ವಸೂಲಾಗದ ಸಾಲದ ಪ್ರಮಾಣ(NPA) ದ ಏರಿಕೆಯಿಂದ ಬ್ಯಾಂಕ್ ಬಿಕ್ಕಟ್ಟಿಗೆ ಸಿಲುಕಿದೆ. ಅನಿರೀಕ್ಷಿತ ಬಿಕ್ಕಟ್ಟಿನಿಂದ ಲಕ್ಷಾಂತರ ಹೂಡಿಕೆದಾರರು ಹಾಗೂ ಸಾವಿರಾರು ಉದ್ಯೋಗಿಗಳು ತಮ್ಮ ಉಳಿಕೆ, ಸಾಲದ ಬಗ್ಗೆ ತೀವ್ರ ಆತಂಕಗೊಂಡಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ನಡೆಗಳು ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಕೆಲವು ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಹಾಗೂ ಹಣಕಾಸು ಸಚಿವಾಲಯ ಉತ್ತರಗಳನ್ನು ನೀಡಿದೆ.
ನಿರ್ಬಂಧ ಸಮಯ:
ಠೇವಣಿದಾರರು ಯಾವುದೇ ವಿಧದ ಹೂಡಿಕೆಯ ಮೇಲಿಂದ ₹ 50,000 ಅಧಿಕ ಹಣ ಡ್ರಾ ಮಾಡಿಕೊಳ್ಳುವಂತಿಲ್ಲ. ಗ್ರಾಹಕ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿದ್ದರೂ ಬ್ಯಾಂಕ್ಗಳು ಪಾವತಿ ಜವಾಬ್ದಾರಿ ₹ 50,000 ಮೀರುವಂತಿಲ್ಲ.
50,000 ರೂ. ಗರಿಷ್ಠ ನಗದು ಮಿತಿ ವಿನಾಯ್ತಿ:
* ಠೇವಣಿದಾರರ ಅಥವಾ ಅವನ ಮೇಲೆ ಅವಲಂಬಿತವಾಗಿರುವ ಯಾವುದೇ ವ್ಯಕ್ತಿಯ ವೈದ್ಯಕೀಯ ಚಿಕಿತ್ಸೆಗೆ
* ಠೇವಣಿದಾರರನ್ನು ಅವಲಂಬಿಸಿದ ಯಾವುದೇ ವ್ಯಕ್ತಿಯು ಉನ್ನತ ಶಿಕ್ಷಣದ ವೆಚ್ಚ (ಭಾರತ ಅಥವಾ ಭಾರತದ ಹೊರಗೆ)
* ಠೇವಣಿದಾರರ ಕುಟುಂಬಸ್ಥರ ಮದುವೆ ಅಥವಾ ಖಾತೆದಾರರ ಅವಲಂಬಿಸಿದ ಯಾವುದೇ ವ್ಯಕ್ತಿಯ ಸಮಾರಂಭಗಳಿಗೆ ವೆಚ್ಚಗ ಪಾವತಿ.
* ಯಾವುದೇ ಇತರ ಅನಿವಾರ್ಯ ತುರ್ತು ಪರಿಸ್ಥಿತಿಗಳಿಗೆ
ಈ ಮೇಲೆ ತಿಳಿಸಿದ ನಾಲ್ಕು ಸಮರ್ಪಕ ಕಾರಣಗಳಿಗೆ ಠೇವಣಿದಾರರು ₹ 5 ಲಕ್ಷದವರೆಗೆ ಡ್ರಾ ಮಾಡಿಕೊಳ್ಳಬಹುದು. ಸರ್ಕಾರವು ಈ ಬಗ್ಗೆ ಸ್ಪಷ್ಟನೆಯನ್ನು ಆರ್ಬಿಗೆ ಕೊಟ್ಟಿದ್ದು, ಆರ್ಬಿಐ ಮೇಲೆ ಸೂಚಿತ ಹಣವನ್ನು ಯೆಸ್ ಬ್ಯಾಂಕ್ ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ ನೀಡುವಂತೆ ಸೂಚಿಸಿದೆ.
ಯೆಸ್ ಬ್ಯಾಂಕ್ ಈ ನಿರ್ಬಂಧಿತ ಅವಧಿಯಲ್ಲಿ ಸಾಲ ಮಂಜೂರಾತಿ ಅಥವಾ ಸಾಲ ಪರಿಷ್ಕರಣೆ ಅಥವಾ ಸಾಲ ನೀಡಿಕೆ ಅಥವಾ ಮುಂಗಡ, ಯಾವುದೇ ಹೂಡಿಕೆ, ಪಾವತಿ ಮಾಡುವಂತಿಲ್ಲ.
ವಿನಾಯ್ತಿ:
ಉದ್ಯೋಗಿಗಳ ವೇತನ, ಬಾಡಿಗೆ, ದರ ಮತ್ತು ತೆರಿಗೆ, ಮುದ್ರಣ, ಟೆಲಿಗ್ರಾ, ಸ್ಟೇಷನರಿ ಇತರೆ ಹಣ ಪಾವತಿಗೆ ಬಿಲ್ ಒದಗಿಸಿ ಹಣ ಪಾವತಿಸಬಹುದು.