ಶ್ರೀನಗರ : ದಟ್ಟವಾಗಿ ಬೀಳುತ್ತಿರುವ ಹಿಮಪಾತವು ಶ್ರೀನಗರ ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ವಾಹನ ಮತ್ತು ವಿಮಾನ ಕಾರ್ಯಾಚರಣೆಗೆ ಅಡ್ಡಿಪಡಿಸುತ್ತಿದೆ. ಆದರೆ, ಅಮೆಜಾನ್ ಡಿಲಿವರಿ ಬಾಯ್, ಗ್ರಾಹಕರ ಆರ್ಡರ್ ಕೊಡಲು ಕುದುರೆ ಸವಾರಿ ಏರಿ ಬಂದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಶ್ರೀನಗರದಲ್ಲಿ ಕುದುರೆಯ ಮೇಲೆ ಪಾರ್ಸೆಲ್‌ಗಳನ್ನು ತಲುಪಿಸುತ್ತಿರುವ ಅಮೆಜಾನ್ ಡಿಲಿವರ್ ಬಾಯ್ ವಿಡಿಯೋ ಉಮರ್ ಗನೈ ಎಂಬುವರು ಹಂಚಿಕೊಂಡಿದ್ದು, ಅಮೆಜಾನ್ ಡಿಲಿವರಿಯ ನಾವೀನ್ಯತೆ ಎಂದು ಬರೆದುಕೊಂಡಿದ್ದಾರೆ.
-
Amazon delivery innovation 🐎#Srinagar #Kashmir #snow pic.twitter.com/oeGIBajeQN
— Umar Ganie (@UmarGanie1) January 12, 2021 " class="align-text-top noRightClick twitterSection" data="
">Amazon delivery innovation 🐎#Srinagar #Kashmir #snow pic.twitter.com/oeGIBajeQN
— Umar Ganie (@UmarGanie1) January 12, 2021Amazon delivery innovation 🐎#Srinagar #Kashmir #snow pic.twitter.com/oeGIBajeQN
— Umar Ganie (@UmarGanie1) January 12, 2021
ಡಿಲಿವರಿಯ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಸಾವಿರಾರು ಬಾರಿ ವೀಕ್ಷಣೆ ಕಂಡಿದೆ. ವಿಡಿಯೋದಲ್ಲಿ ಅಮೆಜಾನ್ ವಿತರಣಾ ವ್ಯಕ್ತಿಯು ಹಿಮದಿಂದ ಆವೃತವಾದ ಬೀದಿಯ ಮೇಲೆ ತನ್ನ ಕುದುರೆ ಮೇಲೆ ಗ್ರಾಹಕರಿಗೆ ಪಾರ್ಸೆಲ್ ಹಸ್ತಾಂತರಿಸುವುದು, ಇಳಿಯುವುದನ್ನು ಕಾಣಬಹುದು.
ಇದನ್ನೂ ಓದಿ: ಕೊರೊನಾ ಮೆಟ್ಟಿ ನಿಂತ ಐಟಿ ದಿಗ್ಗಜ ವಿಪ್ರೋ: ಡಿಸೆಂಬರ್ ತ್ರೈಮಾಸಿಕದ ಗಳಿಕೆ ಎಷ್ಟು ಗೊತ್ತಾ?
ಹಿಮಚ್ಛಾದಿತ ಕಣಿವೆಯಲ್ಲಿ ವಾಹನಗಳು ಓಡಾಡಲು ಕಷ್ಟಪಡುತ್ತಿರುವ ಸಂದರ್ಭದಲ್ಲಿ ಮೈಲಿ ದೂರದವರೆಗೂ ಕುದುರೆ ಸವಾರಿ ಮಾಡಿ ಗ್ರಾಹಕರಿಗೆ ಸಕಾಲದಲ್ಲಿ ಸರಕುಗಳನ್ನು ತಲುಪಿಸುತ್ತಿರುವ ವಿತರಣೆ ಕಾರ್ಯವನ್ನು ಸಾವಿರಾರು ನೆಟ್ಟಿಗರು ಪ್ರಶಂಸಿಸಿದ್ದಾರೆ. ಕ್ಲಿಪ್‌ಗೆ ಪ್ರತಿಕ್ರಿಯೆಯಾಗಿ ಕಂಪನಿಯ ಗ್ರಾಹಕ ಸೇವಾ ಖಾತೆ ಟ್ವೀಟ್ ಕೂಡ ಮಾಡಿದೆ.
ಹಿಮಪಾತ ಇದ್ದರೂ ಡಿಲಿವರಿ ಸಹಾಯಕರಿಂದ ಉತ್ಪನ್ನ ಸುರಕ್ಷಿತವಾಗಿ ತಲುಪಿದೆ. ಭರವಸೆಯಂತೆ ವಿತರಣೆ ಇನ್ನೂ ನಡೆಯುತ್ತದೆ. ಹೇಗೆ ಅಂದ್ರೇ, ಅದು ಕುದುರೆ ಮೂಲಕ ಎಂದು ಅಮೆಜಾನ್ ಸಹಾಯಕ ಕೇಂದ್ರ ಟ್ವೀಟ್ ಮಾಡಿದೆ.