ETV Bharat / business

ಏರ್​ ಇಂಡಿಯಾ ಭರ್ಜರಿ ಆಫರ್​:ವಿಮಾನ ಟಿಕೆಟ್ ಮೇಲೆ ಶೇ 50ರಷ್ಟು ರಿಯಾಯಿತಿ..!

ಏರ್ ಇಂಡಿಯಾ ಅಧಿಕೃತ ವೆಬ್‌ಸೈಟ್‌ ಪ್ರಕಾರ, ಅರ್ಹ ಪ್ರಯಾಣಿಕರಿಗೆ ಮಾತ್ರವೇ ಶೇ 50ರಷ್ಟು ರಿಯಾಯಿತಿ ಕೊಡುಗೆ ಲಭ್ಯವಾಗಲಿದೆ. ಭಾರತದಲ್ಲಿ ಶಾಶ್ವತವಾಗಿ ನೆಲೆಸಿರುವ ಹಿರಿಯ ನಾಗರಿಕರು ಮತ್ತು ಪ್ರಯಾಣ ಪ್ರಾರಂಭವಾದ ದಿನಾಂಕದಂದು 60 ವರ್ಷ ವಯಸ್ಸು ದಾಟ್ಟಿರಬೇಕು ಎಂದು ಉಲ್ಲೇಖಿಸಿದೆ.

author img

By

Published : Dec 17, 2020, 4:40 PM IST

air india
ಏರ್​ ಇಂಡಿಯಾ

ನವದೆಹಲಿ: ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ, ಹಿರಿಯ ನಾಗರಿಕರಿಗೆ ಮೂಲ ಶುಲ್ಕದಲ್ಲಿ ಶೇ 50ರಷ್ಟು ವಿಶೇಷ ರಿಯಾಯಿತಿ ನೀಡುವ ಯೋಜನೆಯನ್ನು ಘೋಷಿಸಿದೆ.

ಏರ್ ಇಂಡಿಯಾದ ಈ ಯೋಜನೆಯು ದೇಶೀಯ ವಿಮಾನಗಳಿಗೆ ಮಾತ್ರ ಅನ್ವಯಿಸುತ್ತದೆ. 60 ವರ್ಷಕ್ಕಿಂತ ಮೇಲ್ಪಟ್ಟ ಪ್ರಯಾಣಿಕರು ಮಾತ್ರವೇ ಈ ಯೋಜನೆ ಪಡೆಯಲು ಅರ್ಹರಾಗಿದ್ದಾರೆ.

ಏರ್ ಇಂಡಿಯಾ ಅಧಿಕೃತ ವೆಬ್‌ಸೈಟ್‌ ಪ್ರಕಾರ, ಅರ್ಹ ಪ್ರಯಾಣಿಕರಿಗೆ ಮಾತ್ರವೇ ಶೇ 50ರಷ್ಟು ರಿಯಾಯಿತಿ ಕೊಡುಗೆ ಲಭ್ಯವಾಗಲಿದೆ. ಭಾರತದಲ್ಲಿ ಶಾಶ್ವತವಾಗಿ ನೆಲೆಸಿರುವ ಹಿರಿಯ ನಾಗರಿಕರು ಮತ್ತು ಪ್ರಯಾಣ ಪ್ರಾರಂಭವಾದ ದಿನಾಂಕದಂದು 60 ವರ್ಷ ವಯಸ್ಸು ದಾಟ್ಟಿರಬೇಕು ಎಂದು ಉಲ್ಲೇಖಿಸಿದೆ.

ಎಕಾನಮಿ ಕ್ಯಾಬಿನ್‌ನಲ್ಲಿ ಆಯ್ದ ಬುಕ್ಕಿಂಗ್ ಕ್ಲಾಸ್​ಗಳ ಮೂಲ ಶುಲ್ಕದಲ್ಲಿ ಶೇ 50ರಷ್ಟು ರಿಯಾಯಿತಿ ಲಭ್ಯವಿದೆ. ಟಿಕೆಟ್‌ಗಳು ಪ್ರಯಾಣದ ದಿನಾಂಕಕ್ಕಿಂತ ಮೂರು ದಿನಗಳ ಮೊದಲು ಖರೀದಿಸಬೇಕಾಗುತ್ತದೆ. ಇದು ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ.

ಈ ಒಂದು ಐಡಿಯಾ ತಂದ್ರೆ ಸರ್ಕಾರಕ್ಕೆ 40,000 ಕೋಟಿ ರೂ. ಗಳಿಕೆ: ತಂಬಾಕು ವಿರುದ್ಧ ವೈದ್ಯರ ಮಾಸ್ಟರ್ ಸಲಹೆ

ಬುಕ್ಕಿಂಗ್ ಸಮಯದಲ್ಲಿ ಜನ್ಮ ದಿನಾಂಕದ ಜತೆಗೆ ಯಾವುದೇ ಮಾನ್ಯತ ಇರುವ ಫೋಟೋ ಐಡಿ, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಏರ್ ಇಂಡಿಯಾ ನೀಡುವ ಹಿರಿಯ ನಾಗರಿಕರ ಗುರುತಿನ ಚೀಟಿ ಇತ್ಯಾದಿಗಳನ್ನು ಟಿಕೆಟ್ ಕಾಯ್ದಿರಿಸುವಾಗ ಒದಗಿಸಬೇಕಾಗುತ್ತದೆ.

ಚೆಕ್ ಇನ್ ಸಮಯ ಅಥವಾ ಬೋರ್ಡಿಂಗ್ ಗೇಟ್‌ನಲ್ಲಿ ಸಂಬಂಧಿತ ಐಡಿ ಅಥವಾ ದಾಖಲೆಗಳನ್ನು ತೋರಿಸದಿದ್ದಲ್ಲಿ ಮೂಲ ಶುಲ್ಕ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಈ ಟಿಕೆಟ್‌ಗಳನ್ನು ಮರುಪಾವತಿಸಲಾಗುವುದಿಲ್ಲ. ತೆರಿಗೆ ಮತ್ತು ಸುಂಕ ಮಾತ್ರವೇ ಮರುಪಾವತಿ ಮಾಡಲಾಗುತ್ತದೆ ಎಂದು ಏರ್ ಇಂಡಿಯಾ ತನ್ನ ಜಾಲತಾಣದಲ್ಲಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.