ETV Bharat / business

ಒನ್‌ಪ್ಲಸ್ 8 ಸಿರೀಸ್ ಸ್ಮಾರ್ಟ್​ಫೋನ್ ಬಿಡುಗಡೆ... ಶೀಘ್ರ ಭಾರತಕ್ಕೆ ಬರಲಿದೆ 5ಜಿ ಫೋನ್

ವಿನೂತನ 5ಜಿ ಒನ್‌ಪ್ಲಸ್ 8 ಪ್ರೊ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಶೀಘ್ರದಲ್ಲೇ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ.

author img

By

Published : Apr 15, 2020, 10:19 AM IST

5G-powered OnePlus 8 series
ಒನ್‌ಪ್ಲಸ್ 8 ಸಿರೀಸ್ ಸ್ಮಾರ್ಟ್​ಫೋನ್ ಬಿಡುಗಡೆ

ನವದೆಹಲಿ: ಚೀನಾದ ಸ್ಮಾರ್ಟ್‌ಫೋನ್ ಬ್ರಾಂಡ್ ಒನ್‌ಪ್ಲಸ್ ಹೊಸ 5 ಜಿ ಶ್ರೇಣಿಯ ಒನ್‌ಪ್ಲಸ್ 8 ಪ್ರೊ ಮತ್ತು ಕಾಂಪ್ಯಾಕ್ಟ್ ಫ್ಲ್ಯಾಗ್‌ಶಿಪ್ ಒನ್‌ಪ್ಲಸ್ 8 ಸ್ಮಾರ್ಟ್​ಫೋನ್​ ಬಿಡುಗಡೆ ಮಾಡಿದ್ದು, ಶೀಘ್ರವೇ ಭಾರತದಲ್ಲಿ ಈ ಸ್ಮಾರ್ಟ್‌ಫೋನ್‌ಗಳು ಲಭ್ಯವಾಗಲಿವೆ.

  • The #OnePlus8 combines an incredible display, powerful hardware, and burdenless software for a smooth user experience.

    With a never-before-seen 120 Hz QHD+ AMOLED Display, the #OnePlus8Pro sets a new standard for what a flagship can be.

    — OnePlus (@oneplus) April 14, 2020 " class="align-text-top noRightClick twitterSection" data=" ">

ಅಮೆರಿಕದಲ್ಲಿ ಒನ್‌ಪ್ಲಸ್ 8 (8 ಜಿಬಿ+128 ಜಿಬಿ) ಸ್ಮಾರ್ಟ್‌ಫೋನ್ ಬೆಲೆ 53 ಸಾವಿರ ರೂಪಾಯಿ ಇದ್ದರೆ, 12 ಜಿಬಿ + 265 ಜಿಬಿ ಆವೃತ್ತಿಯ ಫೋನ್​ಗಳು 60 ಸಾವಿರ ರೂಪಾಯಿ ಬೆಲೆ ಇವೆ.

ಇದೇ ಬೇಸಿಗೆಯಿಂದ ಭಾರತದಲ್ಲಿ ಲಭ್ಯವಾಗುವ ಈ ಸ್ಮಾರ್ಟ್‌ಫೋನ್‌ಗಳ ಸ್ಥಳೀಯ ಬೆಲೆಯನ್ನು ಸದ್ಯದಲ್ಲೇ ತಿಳಿಸಲಾಗುತ್ತದೆ.

ಒನ್‌ಪ್ಲಸ್ 8 ಪ್ರೊ(OnePlus 8 Pro) ವೈಶಿಷ್ಟ್ಯಗಳು:

  • ಒನ್‌ಪ್ಲಸ್ 8 ಪ್ರೊ 6.78-ಇಂಚಿನ 120 ಹರ್ಟ್ಜ್ QHD ಫ್ಲೂಯಿಡ್ ಡಿಸ್ಪ್ಲೇ ಹೊಂದಿದೆ. ಡಿಸ್ಪ್ಲೇ ವಿಮರ್ಶೆ ಸಂಸ್ಥೆಯಾದ ಡಿಸ್ಪ್ಲೇಮೇಟ್‌ನಿಂದ A+ ರೇಟಿಂಗ್ ಗಳಿಸಿದೆ.
  • ಈ ಫೋನ್​ 12 ಜಿಬಿ RAM ಮತ್ತು 256 ಜಿಬಿ ಮೆಮೊರಿ ಹೊಂದಿದೆ.
  • ಕ್ವಾಲ್ಕಾಮ್ ಸ್ನ್ಯಾಪ್​ಡ್ರ್ಯಾಗನ್​ x55 5ಜಿ ಮೋಡೆಮ್-ಆರ್​ಎಫ್ ಸಿಸ್ಟಮ್​ನೊಂದಿಗೆ ಈ ಸ್ಮಾರ್ಟ್​ ಫೋನ್​ ಸ್ನ್ಯಾಪ್​ಡ್ರ್ಯಾಗನ್ 865 ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಮಲ್ಟಿ-ಗಿಗಾಬೈಟ್ 5ಜಿ ಸಂಪರ್ಕ ಮತ್ತು ಸುಧಾರಿತ ವೈ-ಫೈ 6 ಕಾರ್ಯಕ್ಷಮತೆಯನ್ನು ಹೊಂದಿದೆ.
    • The #OnePlus8Pro has a 48 MP main camera with a custom-made Sony sensor. A 48 MP ultra-wide lens with a full 120-degree field of view. A telephoto lens with 3X lossless and 30X digital zoom. And a unique colour filter camera.
      The first-ever quad-camera set-up on a OnePlus phone. pic.twitter.com/JxlkDMWXgN

  • ಈ ಸ್ಮಾರ್ಟ್​ ಫೋನ್​ ಕ್ವಾಡ್-ಕ್ಯಾಮರಾ ವ್ಯವಸ್ಥೆಯನ್ನು ಹೊಂದಿದೆ, 48 ಎಂಪಿ ಮುಖ್ಯ ಕ್ಯಾಮರಾವನ್ನು ಹೊಂದಿದೆ. ಮತ್ತೊಂದು 48 ಎಂಪಿ ಅಲ್ಟ್ರಾ-ವೈಡ್ ಲೆನ್ಸ್, 120 ಡಿಗ್ರಿಯಲ್ಲಿ ವಿಡಿಯೋ ಸೆರೆಹಿಡಿಯಬಹುದು. 5 ಎಂಪಿ ವಿಶಿಷ್ಟ ಕಲರ್ ಫಿಲ್ಟರ್ ಕ್ಯಾಮರಾವನ್ನು ಹೊಂದಿದ್ದು, ಕ್ಯಾಮರಾದಲ್ಲಿ ಸೋನಿಯ ಸೆನ್ಸಾರ್ ಬಳಸಲಾಗಿದೆ.
  • ಕ್ಯಾಮರಾ ಸೆಟಪ್ ಹೈಬ್ರಿಡ್ ಇಮೇಜ್ ಸ್ಟೆಬಿಲೈಸೇಶನ್ ಹೊಂದಿದ್ದು, ಹೆಚ್ಚು ಸ್ಥಿರವಾದ ವಿಡಿಯೋಗಳಿಗಾಗಿ ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಷನ್ ಇದೆ.
  • 16 ಎಂಪಿ ಫ್ರಂಟ್ ಕ್ಯಾಮರಾವನ್ನು ಸಹ ಒಳಗೊಂಡಿದೆ.
  • ಒನ್‌ಪ್ಲಸ್ 8 ಪ್ರೊ ಸ್ಮಾರ್ಟ್​ಫೋನ್ 4510 ಎಂಎಹೆಚ್ ಬ್ಯಾಟರಿಯನ್ನು ಹೊಂದಿದೆ. ವೈರ್​ಲೆಸ್​ ಚಾರ್ಜಿಂಗ್ ಸೌಲಭ್ಯವಿದ್ದು, ಇದು ಕೇವಲ 30 ನಿಮಿಷಗಳಲ್ಲಿ 50 ರಷ್ಟು ಚಾರ್ಜ್​ ಮಾಡಬಲ್ಲದು.
  • ಆಕರ್ಷಕವಾದ ಕಪ್ಪು, ನೀಲಿ ಮತ್ತು ತಿಳಿ ಹಸಿರು ಬಣ್ಣಗಳಲ್ಲಿ ಈ ಫೋನ್​ ಲಭ್ಯವಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.