ನವದೆಹಲಿ: ಮಾಸಿಕ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯೂಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರ ದರವು ಕಳೆದ ವರ್ಷ ಮೇ ತಿಂಗಳಿಗೆ ಹೋಲಿಸಿದರೆ, ಈ ವರ್ಷದ ಮೇ ತಿಂಗಳಲ್ಲಿ ಶೇ-0.87ರಷ್ಟು ಇಳಿದಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಹಣದುಬ್ಬರ ಸೂಚ್ಯಂಕ ಶೇ 2.79 ರಷ್ಟಿತ್ತು. ಅದೀಗ ಶೇ -3.21ಕ್ಕೆ (ತಾತ್ಕಾಲಿಕ) ಇಳಿಕೆ ಕಂಡಿದೆ.
ಸೋಮವಾರ ಬಿಡುಗಡೆಯಾದ ಸರ್ಕಾರದ ಮಾಹಿತಿಯ ಪ್ರಕಾರ, ಪ್ರಾಥಮಿಕ ವರದಿಗಳ ಸೂಚ್ಯಂಕವು ಈ ವರ್ಷದ ಮಾರ್ಚ್ನಿಂದ ಮೇ ತಿಂಗಳ ಕೊನೆಯವರೆಗೆ 137.4-136.2ಕ್ಕೆ (-0.87)ಇಳಿದಿದೆ.
ಮಾರ್ಚ್ ಹೋಲಿಸಿದರೆ, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಶೇ -23.18 ಮತ್ತು ಆಹಾರೇತರ ದರಗಳು ಶೇ -1.44 ರಷ್ಟು ಇಳಿಮುಖವಾಗಿವೆ. ಆಹಾರ ದರಗಳು ಶೇ 0.73 ರಷ್ಟು ಏರಿದೆ.
'ಆಹಾರ ಉತ್ಪನ್ನ' ಒಳಗೊಂಡಿರುವ ಆಹಾರ ಸೂಚ್ಯಂಕವು ತಾತ್ಕಾಲಿಕವಾಗಿ ಮಾರ್ಚ್ನಿಂದ ಮೇವರೆಗೆ 145.7-146.1ಕ್ಕೆ ಏರಿದೆ. ಡಬ್ಲ್ಯೂಪಿಐ ಆಹಾರ ಸೂಚ್ಯಂಕದ ಆಧಾರದ ಮೇಲೆ ವಾರ್ಷಿಕ ಹಣದುಬ್ಬರ ದರ ಕಡಿಮೆಯಾಗಿದೆ.
ಇಂಧನ ಮತ್ತು ವಿದ್ಯುತ್ ಸೂಚ್ಯಂಕವು 99.5 ರಿಂದ 83.7ಕ್ಕೆ (-15.88%) ಇಳಿದಿದೆ. ಅಲ್ಲದೆ, ಖನಿಜ ತೈಲಗಳು -30.10% ರಷ್ಟು ಬೆಲೆಗಳು ಇಳಿಮುಖವಾಗಿವೆ. ಕಲ್ಲಿದ್ದಲು ಮತ್ತು ವಿದ್ಯುತ್ ಬೆಲೆಗಳು ಯಾವುದೇ ರೀತಿ ಬದಲಾವಣೆಗೊಂಡಿಲ್ಲ.