ಹೈದರಾಬಾದ್: ಹಣಕಾಸು ವ್ಯವಹಾರವನ್ನು ನಿರ್ವಹಿಸುವುದು ಒಂದು ಕಲೆ. ಇದು ಬಲ್ಲವರು ಉತ್ತಮವಾದ ಜೀವನ ನಡೆಸಲು ಸಹಕಾರಿ ಎಂಬ ಮಾತುಗಳು ನಿಜವೂ ಹೌದು. ಇದಕ್ಕಾಗಿ ಬ್ಯಾಂಕ್ ಖಾತೆಗಳ ಹೊಂದಿರುವ ಬಗ್ಗೆಯೂ ತಿಳಿದುಕೊಳ್ಳುವುದು ಒಳ್ಳೆಯದು.
ಹೌದು, ಬ್ಯಾಂಕ್ ಖಾತೆಗಳ ತೆಗೆಯುವ ಬಗ್ಗೆ ಸಹಜವಾಗಿ ಕೆಲವೊಮ್ಮೆ ಗೊಂದಲ ಮೂಡುತ್ತಿದೆ. ಒಂದೇ ಬ್ಯಾಂಕ್ ಖ್ಯಾತೆ ಇದ್ದರೆ ಸಾಕಲ್ಲ ಎಂದೂ ಅನಿಸುತ್ತದೆ. ಆದರೆ, ನಿರಂತರವಾಗಿ ಹಣ ಗಳಿಕೆ ಮಾಡುವವರು ಮತ್ತು ಮಾಸಿಕ ಸಂಬಳ ಪಡೆಯುವವರು ಎರಡು ರೀತಿಯ ಖಾತೆಗಳನ್ನು ಹೊಂದುವುದು ಒಳ್ಳೆಯದು.
ಯಾಕೆಂದರೆ, ಒಂದೇ ಖಾತೆಗೆ ಗಳಿಕೆಯ ಹಣ ಬರುವುದು ಮತ್ತು ಅದೇ ಖಾತೆಯಿಂದ ಇಎಂಐ ಸೇರಿ ಇತರ ಖರ್ಚು-ವೆಚ್ಚಗಳಿಗೆ ಹಣ ಕಡಿತ ಮಾಡಬೇಕಾಗುತ್ತದೆ. ಆಗ ನಿಮಗೆ ಗಳಿಕೆ ಹಣ ಎಷ್ಟು ಬಂದಿತ್ತು?. ಅದರಲ್ಲಿ ಎಷ್ಟು ಕಡಿತವಾಯಿತು ಎಂಬ ಲೆಕ್ಕ ಹಾಕಬೇಕಾಗುತ್ತದೆ. ಅಲ್ಲದೇ, ಕೆಲ ಸಲ ನಾನು ಇಷ್ಟೊಂದು ಹಣ ಖರ್ಚು ಮಾಡಿಲ್ಲ ಎಂಬ ಗೊಂದಲ ಸಹ ಸೃಷ್ಟಿಯಾಗುತ್ತದೆ.
ಹೀಗಾಗಿ ನಿಮ್ಮ ಗಳಿಕೆ ಹಣದಲ್ಲಿ ನಿರ್ದಿಷ್ಟ ಮೊತ್ತವನ್ನು ಮತ್ತೊಂದು ಉಳಿತಾಯ ಖಾತೆಗೆ ವರ್ಗಾಯಿಸುವುದು ಉತ್ತಮ. ಇದರಿಂದ ಇಎಂಐ, ವಿಮೆ ಕಂತುಗಳು ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸುವ ಹಣವನ್ನು ಹೊಂದಿಸುವುದು ತುಂಬಾ ಸುಲಭವಾಗಲಿದೆ. ಅಲ್ಲದೇ, ನಿಮಗೆ ತಿಂಗಳಿಗೆ ಎಷ್ಟು ಖರ್ಚು ಆಗುತ್ತದೆ ಎಂಬುವುದು ತಿಳಿದುಕೊಳ್ಳಿ. ಇದರಿಂದ ಭವಿಷ್ಯಕ್ಕೆ ಹಣ ಉಳಿತಾಯ ಮಾಡಲು ಸಾಧ್ಯವಾಗಲಿದೆ.
ತಿಂಗಳ ಖರ್ಚಿನ ಹಣ ನಂತರ ಹೆಚ್ಚುವರಿ ಮೊತ್ತವನ್ನು ಮತ್ತೊಂದು ಖಾತೆಗೆ ವರ್ಗಾಯಿಸಿ ಅದರಲ್ಲೇ ಜಮೆ ಮಾಡಿ. ತುರ್ತು ಸಂದರ್ಭಕ್ಕೆ ಹೊರತು ಪಡಿಸಿ ಯಾವುದೇ ಕಾರಣಕ್ಕೆ ಈ ಉಳಿತಾಯದ ಮೊತ್ತವನ್ನು ಬಳಕೆ ಮಾಡುವ ಯೋಚನೆ ಮಾಡಬೇಡಿ. ಹಾಗೆ ಮಾಡುವುದರಿಂದ ಇದು ಪ್ರತಿ ತಿಂಗಳು ನಿಮ್ಮ ಉಳಿತಾಯದ ಹಣ ಹೆಚ್ಚುತ್ತಾ ಹೋಗುತ್ತದೆ.
ಕೆಲವೊಮ್ಮ ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸುವುದರಿಂದ ರಿವಾರ್ಡ್ ಪಾಯಿಂಟ್‌ಗಳು ಮತ್ತು ಕ್ಯಾಶ್‌ಬ್ಯಾಕ್ ಸಹ ಪಡೆಯಬಹುದು. ನಿಮ್ಮ ಯಾವ ಖಾತೆಯು ಅಂತಹ ಹೆಚ್ಚುವರಿ ಹಣವನ್ನು ಗಳಿಸುತ್ತಿದೆ ಎಂಬುದನ್ನು ಗಮನಿಸಿ. ಆ ಮಟ್ಟಿಗೆ ಹೆಚ್ಚಿನ ಪ್ರಯೋಜನಗಳನ್ನು ನೀಡುವ ಖಾತೆಯನ್ನು ಬಳಸಲು ಒತ್ತು ಸಹ ನೀಡಬಹುದು.
ಅನೇಕ ಬ್ಯಾಂಕ್‌ಗಳು ಹಣಕ್ಕೆ ಬಡ್ಡಿವನ್ನು ಪಾವತಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಕೆಲವು ಬ್ಯಾಂಕ್‌ಗಳು ಉಳಿತಾಯ ಖಾತೆಗೆ ಸ್ವಲ್ಪ ಹೆಚ್ಚಿನ ಬಡ್ಡಿಯನ್ನೇ ಪಾವತಿಸುತ್ತಿವೆ. ಅಂತಹ ಬ್ಯಾಂಕ್‌ಗಳನ್ನು ಆಯ್ಕೆ ಮಾಡಿ ಮತ್ತು ಉಳಿತಾಯ ಖಾತೆ ತೆರೆಯಿರಿ. ಜತೆಗೆ ತಿಂಗಳಾಂತ್ಯದೊಳಗೆ ಹಣ ಉಳಿದರೆ ಆ ಹಣವನ್ನು ಠೇವಣಿ ಮಾಡುವ ಒಳ್ಳೆಯದು.
ಇದನ್ನು ಓದಿ:ಉದ್ಯೋಗಿಗಳಿಗೆ ಕಹಿ ಸುದ್ದಿ.. EPF ಬಡ್ಡಿ ದರಕ್ಕೆ ಕತ್ತರಿ