ETV Bharat / business

ಮುಂಬೈನಲ್ಲಿ ವೊಡಾಫೋನ್ ಐಡಿಯಾ 4ಜಿ ಸೇವೆಗಾಗಿ 3ಜಿ ಸ್ಪೆಕ್ಟ್ರಮ್ ನಿಯೋಜನೆ

ಮುಂಬೈನಲ್ಲಿ ಗ್ರಾಹಕರಿಗೆ 4ಜಿ ಸೇವೆ ಒದಗಿಸುವ ನಿಟ್ಟಿನಲ್ಲಿ 3ಜಿ ಸ್ಪೆಕ್ಟ್ರಮ್ ಬಳಕೆ ಮಾಡಲಾಗಿದ್ದು, ಡೇಟಾ ವೇಗ ಹೆಚ್ಚಲಿದೆ, ಉತ್ತಮ ನೆಟ್​​ವರ್ಕ್​​​​ ಸಮಸ್ಯೆ ನೀಗಲಿದೆ ಎಂದು ವಿಐ ಹೇಳಿದೆ.

Vodafone Idea
ವೊಡಾಫೋನ್ ಐಡಿಯಾ
author img

By

Published : Dec 26, 2020, 8:50 PM IST

ನವದೆಹಲಿ: ಮೆಟ್ರೊ ಸಿಟಿ ಮುಂಬೈನಲ್ಲಿ ಗ್ರಾಹಕರಿಗೆ 4ಜಿ ಸೇವೆ ಒದಗಿಸುವ ಸಲುವಾಗಿ 3ಜಿ ಸ್ಪೆಕ್ಟ್ರಮ್ ಅನ್ನು ಬಳಸಲಾಗಿದೆ ಎಂದು ಟೆಲಿಕಾಂ ಆಪರೇಟರ್ ವೊಡಾಫೋನ್ ಐಡಿಯಾ (ವಿಐ) ಶನಿವಾರ ಹೇಳಿದೆ. ಈ ಮೂಲಕ ಸ್ಪೆಕ್ಟ್ರಮ್ ಸುಧಾರಣೆ ನಂತರ ಗ್ರಾಹಕರು ಬಳಸುವ ಡೇಟಾ ಹೆಚ್ಚಿನ ವೇಗ ಪಡೆಯಲಿದೆ ಎಂದು ಹೇಳಿದೆ.

ವಿಐ 2,100 ಮೆಗಾಹರ್ಟ್ಜ್​​​​​​​ ಬ್ಯಾಂಡ್‌ನಲ್ಲಿ 5 ಮೆಗಾಹೆರ್ಟ್ಜ್ ಸ್ಪೆಕ್ಟ್ರಮ್ ಅನ್ನು ಹೊಂದಿದ್ದು, ಅದನ್ನು 3ಜಿ ಸೇವೆಗಳಿಗೆ ಬಳಸಲಾಗುತ್ತಿದೆ. ಸದ್ಯ ಅಸ್ತಿತ್ವದಲ್ಲಿ ಇರುವ 4ಜಿ ಸೇವೆಯನ್ನು 2,100 ಮೆಗಾಹರ್ಟ್ಜ್​​​​​​​ ಪದರದ ವಿಸ್ತರಣೆಯಿಂದ ಗ್ರಾಹಕರಿಗೆ ಪೂರಕವಾಗಲಿದೆ. ಇದರಿಂದ ಡೇಟಾ ವೇಗ ಹೆಚ್ಚಲಿದೆ, ಉತ್ತಮ ನೆಟ್ವರ್ಕ್​​ ಸಮಸ್ಯೆ ನೀಗಲಿದೆ ಎಂದು ತಿಳಿಸಿದೆ.

ಈವರೆಗೂ 3ಜಿ ಸೇವೆಯಲ್ಲಿಯೇ ಮುಂದುವರೆಯುತ್ತಿರುವ ಗ್ರಾಹಕರು ಸಮೀಪದ ವಿಐ ಕೇಂದ್ರಕ್ಕೆ ತೆರಳಿ ಅಪ್​​ಗ್ರೇಡ್​​ 4ಜಿ ಸಿಮ್​ ಅನ್ನು ಪಡೆಯಿರಿ. ಅದಕ್ಕಾಗಿ ಯಾವುದೇ ಶುಲ್ಕ ಭರಿಸುವಂತಿಲ್ಲ. ಈ ಮೂಲಕ ಪೂರ್ಣ ಸಾಮರ್ಥ್ಯದ ಜಿಜಾನೆಟ್​​ 4ಜಿ ಸೇವೆ ಪಡೆಯಲಿದ್ದೀರಿ. ಕೂಡಲೇ ಗ್ರಾಹಕರು ಸಂಪರ್ಕಿಸಿ ಎಂದು ಮುಂಬೈನ ವಿಐ ಕಾರ್ಯಾಚರಣಾ ನಿರ್ದೇಶಕ ರಾಜೇಂದ್ರ ಚೌರಾಸಿಯಾ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

3ಜಿ ಸೇವೆಯಲ್ಲೇ ಮುಂದುವರೆದಿರುವ ಗ್ರಾಹಕರು ಇನ್ಮುಂದೆ 4ಜಿ ಹ್ಯಾಂಡ್‌ಸೆಟ್​​​ಗಳಲ್ಲಿ 4ಜಿ ಸಿಮ್ ಬಳಸಿ, 4ಜಿ ಸೇವೆ ಅನುಭವ ಪಡೆಯಬಹುದು. ಗುಣಮಟ್ಟ ದತ್ತಾಂಶಗಳ ಡೌನ್​ಲೋಡ್​ ಮತ್ತು ಅಪ್ಲೋಡ್​​ ವೇಗ ಹೆಚ್ಚಲಿದೆ. ಜಿಜಾನೆಟ್​​ 4ಜಿ ಸೇವೆ ಡೇಟಾ ವೇಗ ಹೆಚ್ಚಳ, ನೆಟ್ವರ್ಕ್​ ಸಮಸ್ಯೆಗೆ ಪರಿಹಾರ, ವ್ಯಾಪಕ ವಿಸ್ತರಣೆ ಮೂರು ಅನುಕೂಲಗಳನ್ನು ಒದಗಿಸಿದೆ. ಹಾಗೆಯೇ 2ಜಿ ಸೇವೆಯೂ ಮುಂದುವರೆಯಲಿದೆ ಎಂದೂ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.