ETV Bharat / business

ನಿನ್ನೆವರೆಗೂ ಕಿತ್ತಾಡುತ್ತಿದ್ದ ಅಮೆರಿಕ - ಚೀನಾ ಈಗ ಭಾಯಿ- ಭಾಯಿ ಎನ್ನುತ್ತಿರುವುದೇಕೆ? - ಡೊನಾಲ್ಡ್​ ಟ್ರಂಪ್​

ವಾಣಿಜ್ಯ ಸಮರದ ಹೆಚ್ಚಿನ ದರದ ಸುಂಕ ಪ್ರಮಾಣ ಹೇರುವ ಅವಧಿ ಇನ್ನೂ ಎಂಟು ದಿನಗಳು ಬಾಕಿ ಇರುವಾಗ, ಬೀಜಿಂಗ್‌ನ ಉನ್ನತ ವ್ಯಾಪಾರ ರಾಯಭಾರಿ ಲಿಯೂ ಅವರು ಅಮೆರಿಕದ ವ್ಯಾಪಾರ ಪ್ರತಿನಿಧಿ ರಾಬರ್ಟ್ ಲೈಟ್‌ಜೈಜರ್ ಮತ್ತು ಖಜಾನೆ ಕಾರ್ಯದರ್ಶಿ ಸ್ಟೀವನ್ ಮ್ಯೂಚಿನ್ ಅವರನ್ನು ಭೇಟಿಯಾಗಲಿದ್ದಾರೆ. ಇದರ ಮಧ್ಯೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾದೊಂದಿಗೆ ಸಮಗ್ರ ವ್ಯಾಪಾರ ವಹಿವಾಟು ನಡೆಸಲು ಆದ್ಯತೆ ನೀಡುವುದಾಗಿ ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Oct 8, 2019, 1:13 PM IST

ವಾಷಿಂಗ್ಟನ್​: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾದೊಂದಿಗೆ ಸಮಗ್ರ ವ್ಯಾಪಾರ ವಹಿವಾಟು ನಡೆಸಲು ಆದ್ಯತೆ ನೀಡುವುದಾಗಿ ಹೇಳಿದ್ದಾರೆ. ಅಮೆರಿಕ ಮತ್ತು ಚೀನಾದ ಉನ್ನತ ಅಧಿಕಾರಿಗಳು ವಾಷಿಂಗ್ಟನ್‌ನಲ್ಲಿ ವ್ಯಾಪಾರ ಮಾತುಕತೆಗಳು ಆರಂಭವಾಗುವ ಮುನ್ನ ಸಕಾರಾತ್ಮಕ ಮಾತುಗಳನ್ನು ಟ್ರಂಪ್​ ಆಡಿದ್ದಾರೆ.

ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯ ಅಂತರ ಕಡಿಮೆ ಆಗುತ್ತಿರುವುದು ಉತ್ತಮ ಬೆಳವಣಿಗೆ ಎನ್ನಲಾಗುತ್ತಿದೆ. 'ಇದು ನಾವು ಇಷ್ಟಪಡುವುದಿಲ್ಲ. ಒಂದು ದೊಡ್ಡ ಮಟ್ಟದ ವ್ಯವಹಾರ ಪಡೆಯುವುದು ನನ್ನ ಒಲವಾಗಿದೆ' ಎಂದು ಮಾಧ್ಯಮದವರು ಭಾಗಶಃ ಒಪ್ಪಂದ ಸ್ವೀಕರಿಸಬಹುದೇ ಎಂದು ಕೇಳಿದಾಗ ಮೇಲಿನಂತೆ ಹೇಳಿದರು.

ನಾವು ಇಲ್ಲಿಗೆ ಬಂದಿದ್ದೇವೆ. ನಾವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ನಾನು ದೊಡ್ಡ ವ್ಯವಹಾರ ಮಾಡಲು ಬಯಸುತ್ತೇನೆ ಮತ್ತು ಅದಕ್ಕಾಗಿ ನಾವು ದೃಷ್ಟಿ ನೆಟ್ಟಿದ್ದೇವೆ. ಆದರೆ, ಅವರು ತಮ್ಮ ಆದ್ಯತೆಯ ಫಲಿತಾಂಶವು ಖಚಿತವಾಗಿಲ್ಲ ಎಂದು ಒಪ್ಪಿಕೊಂಡರು.

ಏನಾದರೂ ಆಗಬಹುದೇ? ನಾನು ಊಹಿಸಬಲ್ಲೆ. ಇರಬಹುದು. ಯಾರಿಗೆ ಗೊತ್ತು. ಆದರೆ, ಇದು ಅಸಂಭವ ಎಂದು ನಾನು ಊಹಿಸುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದರು.

ಹೆಚ್ಚಿನ ದರದ ಸುಂಕ ಪ್ರಮಾಣ ಹೇರುವ ಅವಧಿ ಇನ್ನೂ ಎಂಟು ದಿನಗಳು ಬಾಕಿ ಇರುವಾಗ, ಬೀಜಿಂಗ್‌ನ ಉನ್ನತ ವ್ಯಾಪಾರ ರಾಯಭಾರಿ ಲಿಯೂ ಅವರು ಅಮೆರಿಕದ ವ್ಯಾಪಾರ ಪ್ರತಿನಿಧಿ ರಾಬರ್ಟ್ ಲೈಟ್‌ಜೈಜರ್ ಮತ್ತು ಖಜಾನೆ ಕಾರ್ಯದರ್ಶಿ ಸ್ಟೀವನ್ ಮ್ಯೂಚಿನ್ ಅವರನ್ನು ಗುರುವಾರ ಭೇಟಿಯಾಗಲಿದ್ದಾರೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.