ಲಾಸ್ ಏಂಜಲೀಸ್: ಟೆಸ್ಲಾ ಕಂಪನಿಯ ನೂತನ ಸೈಬರ್ಟ್ರಕ್ ಎಲೆಕ್ಟ್ರಿಕ್ ವಾಹನಕ್ಕೆ ಭಾರಿ ಬೇಡಿಕೆ ಕಂಡುಬಂದಿದೆ.
ಕಂಪನಿಯ ಬಹುನಿರೀಕ್ಷಿತ ಸೈಬರ್ಟ್ರಕ್ ಅನಾವರಣ ಕಾರ್ಯಕ್ರಮದಲ್ಲಿ ಕೊಂಚ ಯಡವಟ್ಟು ನಡೆದ ಹೊರತಾಗಿಯೂ, ಎರಡು ದಿನದ ಅಂತರದಲ್ಲಿ ಸುಮಾರು ಒಂದು ಲಕ್ಷದ ಎಂಭತ್ತು ಸಾವಿರ ಮಂದಿ ಸೈಬರ್ಟ್ರಕ್ ಬುಕ್ಕಿಂಗ್ ಮಾಡಿದ್ದಾರೆ. ಯಾವುದೇ ರೀತಿಯ ಜಾಹೀರಾತು ಇಲ್ಲದೇ ಇಷ್ಟೊಂದು ಬೇಡಿಕೆ ಬಂದಿದೆ ಎಂದು ಕಂಪನಿ ಸಿಇಒ ಎಲನ್ ಮಸ್ಕ್ ಹೇಳಿದ್ದಾರೆ.
-
187k
— Elon Musk (@elonmusk) November 24, 2019 " class="align-text-top noRightClick twitterSection" data="
">187k
— Elon Musk (@elonmusk) November 24, 2019187k
— Elon Musk (@elonmusk) November 24, 2019
ಸೈಬರ್ಟ್ರಕ್ ಅನಾವರಣದ ವೇಳೆ ಕಿಟಕಿ ಗ್ಲಾಸ್ ಬಲಿಷ್ಠತೆ ಪರೀಕ್ಷೆಯಲ್ಲಿ ವಿಫಲವಾಗಿತ್ತು. ಇದು ಸಾರ್ವಜನಿಕವಾಗಿ ಕಂಪನಿಗೆ ಭಾರಿ ಹಿನ್ನಡೆಯುಂಟು ಮಾಡಿತ್ತು. ಜೊತೆಗೆ ಎಲನ್ ಮಸ್ಕ್ ಆಸ್ತಿಮೌಲ್ಯ ಸಹ ಶೇ.6ರಷ್ಟು ಕುಸಿತ ಕಂಡಿತ್ತು.
ಜಸ್ಟ್ ಕಾರಿನ ಗ್ಲಾಸ್ ಬ್ರೇಕ್... ಎಲನ್ ಮಸ್ಕ್ಗೆ ಕೋಟ್ಯಂತರ ರೂ ನಷ್ಟ..!