ETV Bharat / business

ಚೀನಾದಿಂದ ಆಮದು ನಿಲ್ಲಿಸಿ ಪರ್ಯಾಯ ಮಾರ್ಗ ಕಂಡುಕೊಳ್ಳುವುದು ಸುಲಭದ ಕೆಲಸವಲ್ಲ.. ಎಂಸಿಸಿಐ ಅಧ್ಯಕ್ಷ - ಚೀನಾದಿಂದ ಆಮದು

ಚೀನಾ ವಸ್ತುಗಳ ಮೇಲೆ ವಿಶ್ವಾಸ ಕಳೆದುಕೊಂಡ ಜನರು, ವರ್ಷಗಳು ಅಥವಾ ಗಂಟೆಗಳವರೆಗೆ ಅಂತರ ಕಾಯ್ದುಕೊಳ್ಳಬಹುದು. ಕಡಿಮೆ ಬೆಲೆಗೆ ಪಡೆದು ಅಪಾಯ ಸ್ವೀಕರಿಸುವುದಕ್ಕೆ ಅವರು ಒಗ್ಗಿಕೊಂಡಿರುತ್ತಾರೆ. ಆಸ್ಟ್ರೇಲಿಯಾ, ವಿಯೆಟ್ನಾಂ ಅಥವಾ ಕಾಂಬೋಡಿಯಾದಿಂದ ವಸ್ತುಗಳನ್ನು ಆಮದು ಮಾಡಿಕೊಂಡರೆ ಅದು ಸಾಧ್ಯವಾಗುತ್ತದೆಯಾ ಎಂಬುದು ನಮ್ಮ ಮುಂದಿರುವ ಸವಾಲು ಎಂದು ಎಂಸಿಸಿಐ) ಅಧ್ಯಕ್ಷ ವಿವೇಕ್ ಗುಪ್ತಾ ಈಟಿವಿ ಭಾರತಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

China
ಚೀನಾ
author img

By

Published : Jun 27, 2020, 10:09 PM IST

ಕೋಲ್ಕತ್ತಾ: ಭಾವನೆಗಳು ಮತ್ತು ವ್ಯವಹಾರಗಳು ತನ್ನದೇ ಆದ ಸ್ಥಾನದಲ್ಲಿರುತ್ತವೆ. ಭಾರತಕ್ಕೆ ಪರ್ಯಾಯ ಆಮದು ಸುಲಭದ ಕೆಲಸವಲ್ಲ ಎಂದು ಮರ್ಚೆಂಟ್ಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್​ ಇಂಡಸ್ಟ್ರೀಸ್ (ಎಂಸಿಸಿಐ) ಅಧ್ಯಕ್ಷ ವಿವೇಕ್ ಗುಪ್ತಾ ಅವರು ಈಟಿವಿ ಭಾರತಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದರು.

ಭಾವನೆಗಳು ತನ್ನದೇ ಆದ ಸ್ಥಾನಲಿರುತ್ತವೆ, ವ್ಯವಹಾರಕ್ಕೂ ಕೂಡ ತನ್ನದೇ ಜಾಗವಿದೆ. ನಮ್ಮೊಳಗಿನ ಭಾವನೆಗಳೆಲ್ಲವೂ ಹುತಾತ್ಮರಾದ ಸೈನಿಕರಿಗೆ ಮಿಡಿದಿವೆ. ಇದರ ಬಗ್ಗೆ ಯಾವುದೇ ಅನುಮಾನ ಇಲ್ಲ. ಆದರೆ, ಆಮದು ಪರ್ಯಾಯವು ಅಷ್ಟು ಸುಲಭದ ಕೆಲಸವಲ್ಲ ಎಂದರು. ಬದಲಿ ಏನು, ಯಾವ ಪ್ರಮಾಣದಲ್ಲಿ ಎಂಬುದು ನಮ್ಮ ಮುಂದಿರುವ ದೊಡ್ಡ ಸಮಸ್ಯೆಯಾಗಿದೆ. ಚೀನಾದಿಂದ ದೂರ ಸರಿದು ಪರ್ಯಾಯ ಮಾರ್ಗ ಕಂಡುಕೊಳ್ಳುವುದು ವೆಚ್ಚ ಹೆಚ್ಚಳಕ್ಕೆ ಕಾರಣವಾಗಬಹುದು. ಖರೀದಿದಾರ ಸಿದ್ಧರಿದ್ದು ಹೆಚ್ಚಿನ ದರದಲ್ಲಿ ಖರೀದಿಸಲು ಯಾವುದೇ ಸಮಸ್ಯೆ ಇಲ್ಲ. ಆದರೆ, ಅದು ಅಷ್ಟು ಸುಲಭವೇ? ಜನರು ಹೆಚ್ಚಿನ ಬೆಲೆಗೆ ಖರೀದಿಸುತ್ತಾರೆಯೇ ಎಂದು ಪ್ರಶ್ನಿಸಿದರು.

ಚೀನಾ ವಸ್ತುಗಳ ಮೇಲೆ ವಿಶ್ವಾಸ ಕಳೆದುಕೊಂಡ ಜನರು, ವರ್ಷಗಳು ಅಥವಾ ಗಂಟೆಗಳವರೆಗೆ ಅಂತರ ಕಾಯ್ದುಕೊಳ್ಳಬಹುದು. ಕಡಿಮೆ ಬೆಲೆಗೆ ಪಡೆದು ಅಪಾಯ ಸ್ವೀಕರಿಸುವುದಕ್ಕೆ ಅವರು ಒಗ್ಗಿಕೊಂಡಿರುತ್ತಾರೆ. ಆಸ್ಟ್ರೇಲಿಯಾ, ವಿಯೆಟ್ನಾಂ ಅಥವಾ ಕಾಂಬೋಡಿಯಾದಿಂದ ವಸ್ತುಗಳನ್ನು ಆಮದು ಮಾಡಿಕೊಂಡರೆ ಅದು ಸಾಧ್ಯವಾಗುತ್ತದೆಯಾ ಎಂಬುದು ನಮ್ಮ ಮುಂದಿರುವ ಸವಾಲು ಎಂದರು.

ಭಾರತೀಯರು ವಿನ್ಯಾಸ​​ ಮತ್ತು ನಾವೀನ್ಯತೆಗಳಲ್ಲಿ ಎಂದಿಗೂ ಹೂಡಿಕೆ ಮಾಡಿಲ್ಲ. ಆಕರ್ಷಕವಾದ ವಿಭಿನ್ನ ವಿನ್ಯಾಸದಲ್ಲಿ ಪೆನ್ಸಿಲ್ ಅಥವಾ ಶಾರ್ಪನರ್ ಮಾಡಲು ಸಹ ನಮಗೆ ಸಾಧ್ಯವಾಗಲಿಲ್ಲ ಎಂದು ವ್ಯಂಗ್ಯವಾಡಿದರು.

ಚೀನಾ ಮೇಲೆ ಇಷ್ಟು ದೊಡ್ಡ ಅವಲಂಬನೆ ಏಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಗುಪ್ತಾ, ಚೀನಾವು ಭಾರತಕ್ಕಿಂತ ಉತ್ತಮ ಮೂಲಸೌಕರ್ಯಗಳನ್ನು ಹೊಂದಿದೆ. ಯಾವುದೇ ಸಮಯದಲ್ಲಿ ಉತ್ತಮವಾದ ಬೆಂಬಲದ ವ್ಯವಸ್ಥೆ ಪಡೆಯುತ್ತದೆ. ನಮ್ಮ ದೇಶದಲ್ಲಿ ನಮಗೆ ಪ್ರತಿಯೊಂದಕ್ಕೂ ಚೆಕ್‌ಪೋಸ್ಟ್‌ಗಳ ವ್ಯವಸ್ಥೆ ಇದೆ. ಉದ್ಯಮ ಸ್ಪರ್ಧೆಯ ಓಟದಲ್ಲಿ ಗೆಲ್ಲಲು ಭಾರತೀಯ ಉದ್ಯಮಿಯೊಬ್ಬರು ಏಕಾಂಗಿಯಾಗಿ ಹೋರಾಡಬೇಕಾಗುತ್ತದೆ. ಲಾಕ್​ಡೌನ್​ ನಂತರ ಬ್ಯಾಂಕ್​ಗಳು 8.5 ರಿಂದ 9.25ರಷ್ಟು ಬಡ್ಡಿದರಗಳನ್ನು ವಿಧಿಸುತ್ತವೆ ಎಂದು ಗುಪ್ತಾ ಉಲ್ಲೇಖಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.