ETV Bharat / business

ದೀಪಾವಳಿ ಬಳಿಕ ಷೇರುಪೇಟೆ ಕುಸಿತ: ಸೆನ್ಸೆಕ್​ 100 ಅಂಕ, 17,891ಕ್ಕೆ ಕುಸಿದ ನಿಫ್ಟಿ

ಕಳೆದೊಂದು ತಿಂಗಳ ಹಿಂದೆ ಏರುಗತಿಯಲ್ಲಿದ್ದ ಷೇರು ಮಾರುಕಟ್ಟೆ ಸಾರ್ವಕಾಲಿಕ ದಾಖಲೆ ಬರೆದಿತ್ತು. ಆದರೆ ಕಳೆದೆರಡು ವಹಿವಾಟಿನಲ್ಲಿ ಇಳಿಕೆ ಕಾಣುತ್ತಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿಯೂ ಇಳಿಕೆ ಕಂಡಿದೆ.

sensex-tumbles-over-100-pts
ದೀಪಾವಳಿ ಬಳಿಕ ಷೇರುಪೇಟೆ ಕುಸಿತ
author img

By

Published : Nov 8, 2021, 11:52 AM IST

ಮುಂಬೈ: ಕಳೆದ ಕೆಲದಿನಗಳ ಹಿಂದೆಯಷ್ಟೇ ಸಾರ್ವಕಾಲಿಕ ದಾಖಲೆ ಬರೆದಿದ್ದ ಮುಂಬೈ ಷೇರುಪೇಟೆ ಕಳೆದೆರಡು ವಹಿವಾಟಿನಿಂದ ಕುಸಿತ ಅನುಭವಿಸುತ್ತಿದೆ. ಇಂದೂ ಸಹ ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ 100 ಅಂಕ ಹಾಗೂ ಬಿಎಸ್‌ಇ ಸೆನ್ಸೆಕ್ಸ್ ಕುಸಿತಕಂಡಿದೆ.

ಏಷ್ಯನ್ ಮಾರ್ಕೆಟ್​​ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ಇಂಡಸ್​​ಇಂಡ್ ಬ್ಯಾಂಕ್ ಮತ್ತು ಹೆಚ್​​​ಡಿಎಫ್​​ಸಿ ನೆಗೆಟಿವ್ ಟ್ರೆಂಡ್​​ನಲ್ಲಿವೆ. ಹೀಗಾಗಿ ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಸೂಚ್ಯಂಕವು 130.18 ಅಥವಾ ಶೇ.0.22ರಷ್ಟು ಕುಸಿತ ಕಂಡು 59,937.44 ಅಂಕಗೊಳೊಂದಿಗೆ ವಹಿವಾಟು ನಡೆಸುತ್ತಿದೆ. ಜೊತೆಗೆ ನಿಫ್ಟಿ 25.80 ಅಂಕ ಅಥವಾ ಶೇ.0.14ರಷ್ಟು ಕುಸಿತ ಕಂಡು 17,891ರಷ್ಟಕ್ಕೆ ತಲುಪಿದೆ.

ವಹಿವಾಟು ಆರಂಭದಲ್ಲಿ ಇಂಡಸ್​​​​​ಇಂಡ್ ಬ್ಯಾಂಕ್ ಅತೀ ಹೆಚ್ಚಿನ ನಷ್ಟ ಅನುಭವಿಸಿದೆ. ಸುಮಾರು ಶೇ.9ರಷ್ಟು ಒಟ್ಟಾರೆ ನಷ್ಟದಲ್ಲಿ ಭಾಗಿಯಾಗಿದೆ. ಇದಾದ ಬಳಿಕ ನಷ್ಟದ ಸಾಲಿನಲ್ಲಿ ಏಷ್ಯನ್ ಪೇಯಿಂಟ್ಸ್, ಸನ್ ಫಾರ್ಮಾ, ಎಂ&ಎಂ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಹೆಚ್​ಡಿಎಫ್​​ಸಿ ಬ್ಯಾಂಕ್​​ ಸ್ಥಾನ ಪಡೆದಿವೆ.

ಷೇರುಪೇಟೆಯಲ್ಲಿ ಆರಂಭಿಕ ವಹಿವಾಟಿನಲ್ಲಿ ಕೆಲ ಸಂಸ್ಥೆಗಳು ಉತ್ತಮ ಆರಂಭ ಪಡೆದಿವೆ. ಭಾರತಿ ಏರ್​​​​ಟೆಲ್​, ಟೈಟನ್, ಅಲ್ಟ್ರಾಟೆಕ್ ಸಿಮೆಂಟ್ ಮತ್ತ ಎಲ್​​&ಟಿ ಲಾಭ ಗಳಿಸಿವೆ. ದೀಪಾವಳಿ ಹಬ್ಬದ ಕಾರಣದಿಂದಾಗಿ ಶುಕ್ರವಾರದಿಂದಲೂ ಬಿಎಸ್​​ಇ ಮತ್ತು ಎನ್​ಎಸ್​​​ಇ ಮಾರುಕಟ್ಟೆ ಮುಚ್ಚಲ್ಪಟ್ಟಿತ್ತು.

ಏಷ್ಯಾದ ಇತರೆಡೆಗಳಲ್ಲಿ ಹಾಂಗ್ ಕಾಂಗ್, ಟೋಕಿಯೊ ಮತ್ತು ಸಿಯೋಲ್‌ನಲ್ಲಿನ ಷೇರುಗಳು ಮಿಡ್-ಸೆಶನ್ ಡೀಲ್‌ಗಳಲ್ಲಿ ನಷ್ಟದೊಂದಿಗೆ ವಹಿವಾಟು ನಡೆಸುತ್ತಿದ್ದರೆ, ಶಾಂಘೈ ಸಕಾರಾತ್ಮಕವಾಗಿತ್ತು. ಈ ನಡುವೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ ಶೇ.1.04 ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್​ ತೈಲವು 83.59 ಯುಎಸ್​ ಡಾಲರ್​​​ಗೆ ತಲುಪಿದೆ.

ಇದನ್ನೂ ಓದಿ: ನೋಟ್​ ಬ್ಯಾನ್​ಗೆ 5 ವರ್ಷ: ದೇಶದಲ್ಲಿ ನಗದು ವ್ಯವಹಾರದ ಜೊತೆಗೆ ಡಿಜಿಟಲ್ ಪೇಮೆಂಟ್​​ ಹೆಚ್ಚಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.