ETV Bharat / business

Omicron concerns: ರಿವರ್ಸ್ ರೆಪೋದರದಲ್ಲಿ ಯಥಾಸ್ಥಿತಿ ಮುಂದುವರಿಸಲಿದೆ ಆರ್​ಬಿಐ

ದೇಶದಲ್ಲಿ ಕೋವಿಡ್ ಹರಡುವಿಕೆ ಗಮನದಲ್ಲಿಟ್ಟುಕೊಂಡು ಆರ್​​ಬಿಐ ರಿವರ್ಸ್ ರೆಪೋ ದರದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಲು ನಿರ್ಧರಿಸಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆರ್ಥಿಕ ಸಂಶೋಧನಾ ವಿಭಾಗದ ಸಂಶೋಧನಾ ತಂಡ ವರದಿ ಮಾಡಿದೆ.

RBI
ಆರ್​ಬಿಐ
author img

By

Published : Dec 4, 2021, 7:32 PM IST

ಮುಂಬೈ: ಕೋವಿಡ್ ರೂಪಾಂತರಿ ಹರಡುತ್ತಿರುವ ನಡುವೆ ರಿವರ್ಸ್​ ರೆಪೋ ದರದಲ್ಲಿ ಯಥಾಸ್ಥಿತಿ ಕಾಪಾಡಲು ಆರ್​​ಬಿಐ ನಿರ್ಧರಿಸಿದೆ ಎಂದುಎಸ್​ಬಿಐ ಇಕೋವ್ರಾಪ್ ವರದಿ ಮಾಡಿದೆ.

ಇತ್ತೀಚೆಗೆ ಒಮಿಕ್ರಾನ್ ವೈರಸ್ ಹರಡುವಿಕೆ ಕಳವಳಕ್ಕೆ ಕಾರಣವಾಗಿದೆ. ಹಣಕಾಸು ನೀತಿ ಪರಾಮರ್ಶೆಯನ್ನು ಡಿಸೆಂಬರ್ 6-8ಕ್ಕೆ ನಿಗದಿಪಡಿಸಲಾಗಿದೆ. ಹಣಕಾಸು ನೀತಿ ಸಮಿತಿಯು (MPC)ಸಾಲ ದರಗಳನ್ನು ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಪ್ರಸ್ತುತ, ಕೇಂದ್ರೀಯ ಬ್ಯಾಂಕ್‌ನ MPC ವಾಣಿಜ್ಯ ಬ್ಯಾಂಕುಗಳಿಗೆ ರೆಪೋ ದರ ಅಥವಾ ಅಲ್ಪಾವಧಿಯ ಸಾಲ ದರವನ್ನು ಶೇ.4ಕ್ಕೆ ಕಾಯ್ದುಕೊಂಡಿದೆ. ಪರಿಣಾಮವಾಗಿ, ರಿವರ್ಸ್ ರೆಪೋ ದರವನ್ನು ಈ ಹಿಂದೆ ಇದ್ದ ಶೇ. 3.35ರಷ್ಟೇ ನಿಗದಿ ಮಾಡಲಾಗಿದೆ.

ಆರ್‌ಬಿಐ ಅಕ್ಟೋಬರ್ ಪಾಲಿಸಿಯಿಂದ ಲಿಕ್ವಿಡಿಟಿ ಸಾಮಾನ್ಯೀಕರಣಕ್ಕೆ ಮುಂದಾಗಿದ್ದು, ಅಕ್ಟೋಬರ್ ಮೊದಲಿನ ನಿಗದಿತ ರೆಪೋ ದರವು 3.4 ಲಕ್ಷ ಕೋಟಿ ರೂಪಾಯಿಯಿಂದ 2.6 ಲಕ್ಷ ಕೋಟಿ ರೂಪಾಯಿಗೆ ಇಳಿಕೆ ಕಂಡಿದೆ. ಹೀಗಾಗಿ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ರೆಪೋ ದರ ಏರಿಕೆ ಕುರಿತಂತೆ ಯಾವುದೇ ಮಾತುಕತೆ ನಡೆಯದೇ ಇರಬಹುದು ಎಂದು ನಿರೀಕ್ಷಿಸಲಾಗಿದೆ.

ಹಣದುಬ್ಬರ ನಿಯಂತ್ರಣಕ್ಕಾಗಿ ಆರ್​ಬಿಐ ಆಗಾಗ ರೆಪೋ ದರ ಹಾಗೂ ರಿವರ್ಸ್ ರೆಪೋ ದರ ಬದಲಾವಣೆಯಲ್ಲಿ ತೊಡಗುತ್ತದೆ. ಒಂದು ವೇಳೆ ರಿವರ್ಸ್ ರೆಪೋ ದರದಲ್ಲಿನ ಹೆಚ್ಚಳವಾದರೆ ಹಣದ ಪೂರೈಕೆ ಕಡಿಮೆಯಾಗಲಿದೆ. ರಿವರ್ಸ್ ರೆಪೋ ದರದಲ್ಲಿ ಹೆಚ್ಚಳ ಎಂದರೆ ವಾಣಿಜ್ಯ ಬ್ಯಾಂಕ್‌ಗಳು ತಮ್ಮ ಹಣವನ್ನು ಆರ್‌ಬಿಐನಲ್ಲಿ ಇಡಲು ಹೆಚ್ಚಿನ ಉತ್ಸಾಹ ತೋರುತ್ತವೆ. ಈ ಹಣಕ್ಕೆ ಆರ್​​​ಬಿಐ ಬಡ್ಡಿ ನೀಡಬೇಕಾಗಿರುವುದರಿಂದ ಮಾರುಕಟ್ಟೆಯಲ್ಲಿ ಹಣದ ಹರಿವು ನಿಯಂತ್ರಣಕ್ಕೆ ಬರಲಿದೆ.

ಇದನ್ನೂ ಓದಿ: Tips to Home Loan Management: ಗೃಹಸಾಲದ ಇಎಂಐ ಹೊರೆಯನ್ನು ಇಳಿಸಿಕೊಳ್ಳಲು ಇಲ್ಲಿವೆ ಟಿಪ್ಸ್​​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.