ETV Bharat / business

ಬ್ಯಾಂಕ್​ಗಳಿಗೆ ಲಿಕ್ವಿಡಿಟಿ ಸೌಲಭ್ಯ ಯೋಜನೆಯ ನಿಯಂತ್ರಕ ಪ್ರಯೋಜನ ವಿಸ್ತರಿಸಿದ RBI - Banks

ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಲಾಕ್​ಡೌನ್ ಹಿನ್ನೆಲೆಯಲ್ಲಿ ಹಣಕಾಸು ಮಾರುಕಟ್ಟೆಯಲ್ಲಿ ಉಂಟಾಗಿರುವ ತಲ್ಲಣವನ್ನು ಬಗೆಹರಿಸಲು ಮ್ಯೂಚುವಲ್ ಫಂಡ್​ಗಳ ಮೇಲಿನ ಲಿಕ್ವಿಡಿಟಿ ಒತ್ತಡ ಸುಗಮಗೊಳಿಸಲು ಆರ್​ಬಿಐ, ಕೆಲ ದಿನಗಳ ಹಿಂದೆಯಷ್ಟೇ 50 ಸಾವಿರ ಕೋಟಿ ರೂ. ವಿಶೇಷ ಲಿಕ್ವಿಡಿಟಿ ಸೌಲಭ್ಯ ಪ್ರಕಟಿಸಿತ್ತು.

Reserve Bank of India
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
author img

By

Published : Apr 30, 2020, 5:12 PM IST

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ), ಕೇಂದ್ರ ಬ್ಯಾಂಕ್​ನಿಂದ ಧನಸಹಾಯ ಪಡೆದುಕೊಳ್ಳದೇ ಅಥವಾ ಸ್ವಂತ ಸಂಪನ್ಮೂಲಗಳನ್ನು ನಿಯೋಜಿಸಿಕೊಳ್ಳುವಂತಹ ವಿಶೇಷ ಲಿಕ್ವಿಡಿಟಿ ಸೌಲಭ್ಯ (ಎಸ್​ಎಲ್ಎಫ್-ಎಂಎಫ್) ಯೋಜನೆಯ ನಿಯಂತ್ರಕ ಪ್ರಯೋಜನಗಳನ್ನು ತನ್ನ ಎಲ್ಲ ಅಧೀನ ಬ್ಯಾಂಕ್​ಗಳಿಗೆ ವಿಸ್ತರಿಸಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಲಾಕ್​ಡೌನ್ ಹಿನ್ನೆಲೆಯಲ್ಲಿ ಹಣಕಾಸು ಮಾರುಕಟ್ಟೆಯಲ್ಲಿ ಉಂಟಾಗಿರುವ ತಲ್ಲಣವನ್ನು ಬಗೆಹರಿಸಲು ಮ್ಯೂಚುವಲ್ ಫಂಡ್​ಗಳ ಮೇಲಿನ ಲಿಕ್ವಿಡಿಟಿ ಒತ್ತಡ ಸುಗಮಗೊಳಿಸಲು ಆರ್​ಬಿಐ, ಕೆಲ ದಿನಗಳ ಹಿಂದೆಯಷ್ಟೇ 50 ಸಾವಿರ ಕೋಟಿ ರೂ. ವಿಶೇಷ ಲಿಕ್ವಿಡಿಟಿ ಸೌಲಭ್ಯ ಪ್ರಕಟಿಸಿತ್ತು.

ಫ್ರಾಂಕ್ಲಿನ್ ಟೆಂಪಲ್ಟನ್ ಮ್ಯೂಚುವಲ್ ಫಂಡ್ ಕಂಪನಿ, ತನ್ನ ಸಾಲದ ಸಮಸ್ಯೆಗಳಿಂದಾಗಿ ಆರು ಆದಾಯ ಸಾಲದ ಯೋಜನೆಗಳನ್ನು ಸ್ಥಗಿತಗೊಳಿಸಿತ್ತು. ಮ್ಯೂಚುವಲ್​ ಫಂಡ್​ ಮಾರುಕಟ್ಟೆ ಸ್ಥಿರತೆಗಾಗಿ ಆರ್​ಬಿಐ, ಎಸ್​ಎಲ್ಎಫ್-ಎಂಎಫ್ ನಿಧಿ ಘೋಷಿಸಿತ್ತು.

ಸಾಲಗಳನ್ನು ವಿಸ್ತರಿಸುವ ಮೂಲಕ ಮ್ಯೂಚುವಲ್​ ಫಂಡ್​ಗಳ ದ್ರವ್ಯತೆಯ ಅವಶ್ಯಕತೆಗಳನ್ನು ಎಲ್ಲಾ ಬ್ಯಾಂಕ್​ಗಳು ಪೂರೈಸುತ್ತದೆ ಎಂಬುದನ್ನು ಈಗ ತೀರ್ಮಾನಿಸಲಾಗಿದೆ. ಹೂಡಿಕೆ ದರ್ಜೆಯ ಕಾರ್ಪೊರೇಟ್ ಬಾಂಡ್​, ವಾಣಿಜ್ಯ ಪೇಪರ್​ (ಸಿಪಿಎಸ್), ಡಿಬೆಂಚರ್​ ಮತ್ತು ಠೇವಣಿಯ ಪ್ರಮಾಣ ಪತ್ರಗಳು (ಸಿಡಿಎಸ್​) ಮೇಲಾಧಾರ (ಕೊಲ್ಯಾಟರಲ್) ವಿರುದ್ಧ ಎಂಎಫ್​ಗಳನ್ನು ಖರೀದಿಸಲು ಆರ್​ಬಿಐನಿಂದ ಮರಳಿ ಧನಸಹಾಯ ಪಡೆದುಕೊಳ್ಳುವ ಅಗತ್ಯವಿಲ್ಲ. ಎಸ್​ಎಲ್​ಎಫ್-ಎಂಎಫ್ ಯೋಜನೆಯಡಿಯಲ್ಲಿ ಲಭ್ಯವಿರುವ ಎಲ್ಲಾ ನಿಯಂತ್ರಕ ಪ್ರಯೋಜನಗಳನ್ನು ಕ್ಲೇಮ್ ಮಾಡಲು ಬ್ಯಾಂಕ್​ಗಳು ಅರ್ಹರಾಗಿರುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.