ನವದೆಹಲಿ : ಲಾಕ್‌ಡೌನ್‌ನಿಂದಾಗಿ ರಿಯಲ್ ಎಸ್ಟೇಟ್ ಉದ್ಯಮ ತತ್ತರಿಸುತ್ತಿದೆ. ಆರ್ಥಿಕ ಪುನಶ್ಚೇತನವಾದ್ರೆ ಮಾತ್ರ ಚೇತರಿಕೆ ಕಾಣಲಿದೆ. ಇದರ ಮಧ್ಯೆ ಮತ್ತೊಂದು ಆತಂಕಕಾರಿ ವರದಿಯೊಂದು ಬೆಳಕಿಗೆ ಬಂದಿದೆ.
ರಿಯಲ್ ಎಸ್ಟೇಟ್ನ ಫ್ಲ್ಯಾಟ್ ಮತ್ತು ಸ್ಥಗಿತಗೊಂಡ ಯೋಜನೆಗಳು ಪೂರ್ಣವಾಗಲು ವಿಳಂಬ ಆಗುತ್ತಿವೆ. 2020ರ ಅಂತ್ಯದ ವೇಳೆಗೆ ದೇಶದ ಏಳು ಪ್ರಮುಖ ನಗರಗಳಲ್ಲಿ ಸುಮಾರು 4.66 ಲಕ್ಷ ಯೂನಿಟ್‌ಗಳು ಅಂತಿಮ ನಿರ್ಮಾಣದ ಗಡುವು ಮೀರಬಹುದು ಎಂದು ಅನರಾಕ್ ಪ್ರಾಪರ್ಟಿ ಕನ್ಸಲ್ಟೆಂಟ್ಸ್ ವರದಿ ಮಾಡಿದೆ.
ಕೋವಿಡ್-19 ಬಿಕ್ಕಟ್ಟು ಇಲ್ಲದಿದ್ದರೆ ಅಗ್ರ ಏಳು ನಗರಗಳಲ್ಲಿ 2020ರ ವೇಳೆಗೆ ಸುಮಾರು 4.66 ಲಕ್ಷ ಯುನಿಟ್‌ಗಳ ವಿತರಣೆ ಆಗುತ್ತಿತ್ತು. 2013ರ ನಂತರ ಆರಂಭವಾದ ಅನೇಕ ಯೋಜನೆಗಳು ಪೂರ್ಣಗೊಳ್ಳುವ ಅಂತಿಮ ಹಂತದಲ್ಲಿದ್ದವು. ಲಾಕ್‌ಡೌನ್ ಕಾರಣದಿಂದಾಗಿ ಕಳೆದ ಕೆಲವು ತಿಂಗಳಲ್ಲಿ ಬಹುತೇಕ ಶೂನ್ಯ ನಿರ್ಮಾಣ ಚಟುವಟಿಕೆಯೊಂದಿಗೆ ಈ ಎಲ್ಲಾ ಯೋಜನೆಗಳ ಪೂರ್ಣಗೊಳಿಸುವಿಕೆಯ ಗಡುವು ವಿಸ್ತರಿಸಲಾಗಿದೆ ಎಂದು ಹೇಳಿದೆ.
ವರದಿಯ ಪ್ರಕಾರ, ದೆಹಲಿಯ ಎನ್‌ಸಿಆರ್ ಮತ್ತು ಮುಂಬೈ ಮೆಟ್ರೋಪಾಲಿಟನ್ ವ್ಯಾಪ್ತಿಯಲ್ಲಿ 2020ರ ವೇಳೆಗೆ ತಲಾ ಒಂದು ಲಕ್ಷ ಯೂನಿಟ್‌ಗಳು ವಿತರಣೆ ಆಗಬೇಕಿತ್ತು. ಸಾಂಕ್ರಾಮಿಕ ರೋಗವು ಭಾರತವನ್ನು ಅಪ್ಪಳಿಸುವ ಮೊದಲು 2020ರ ವೇಳೆ ಪುಣೆಯಲ್ಲಿ 68,800 ಯುನಿಟ್‌ಗಳು, ಕೋಲ್ಕತ್ತಾದಲ್ಲಿ 33,850 ಯುನಿಟ್‌ಗಳು ಮತ್ತು ಹೈದರಾಬಾದ್‌ನಲ್ಲಿ ಸುಮಾರು 30,500 ಯುನಿಟ್‌ಗಳು ಪೂರ್ಣಗೊಂಡಿವೆ. ಚೆನ್ನೈನಲ್ಲಿ ಸುಮಾರು 24,650 ಯುನಿಟ್‌ಗಳ ಮೂಲಕ ಕನಿಷ್ಠ ವಿತರಣೆಯು ಬಾಕಿ ಉಳಿದಿದೆ.
ಬಹುತೇಕ ರಾಜ್ಯಗಳ ರೇರಾ ಡೆವಲಪರ್‌ಗಳಿಗೆ ಗಡುವನ್ನು ಆರು ತಿಂಗಳ ವಿಸ್ತರಣೆ ನೀಡಿದೆ. ವಸತಿ ಖರೀದಿದಾರರು ಇನ್ನಷ್ಟು ಸಮಯ ಕಾಯಬೇಕಿದೆ. ಅನರಾಕ್ ಅಂಕಿಅಂಶಗಳ ಪ್ರಕಾರ, 2021ರಲ್ಲಿ ಅಗ್ರ ಏಳು ನಗರಗಳಲ್ಲಿ ಸುಮಾರು 4.12 ಲಕ್ಷ ಯುನಿಟ್‌ಗಳು ಪೂರ್ಣಗೊಳ್ಳಬೇಕಿತ್ತು. ಕಾರ್ಮಿಕ ಕೊರತೆ ತಕ್ಷಣವೇ ಪರಿಹರಿಸಿದ್ದಲ್ಲಿ ಯೋಜನೆಯ ವಿತರಣೆಗಳು ಮುಂದೆ ಹೋಗುವುದನ್ನು ತಡೆಯುತ್ತದೆ. ವಿಳಂಬವಾದರೇ ಗೃಹ ಖರೀದಿದಾರರು ಹೊಸ ಯೂನಿಟ್ಗಳಿಗೆ ಹೊಂದಿಕೊಳ್ಳಬೇಕಾಗುತ್ತದೆ ಎಂದು ಅನರಾಕ್ ಪ್ರಾಪರ್ಟಿ ಕನ್ಸಲ್ಟೆಂಟ್ಸ್‌ನ ಅಧ್ಯಕ್ಷ ಅನುಜ್ ಪುರಿ ಹೇಳಿದರು.