ನವದೆಹಲಿ: ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಜ್ ಇಂಡಿಯಾ ಗುರುವಾರ 'ಮೇಡ್ ಇನ್ ಇಂಡಿಯಾ' ಎಸ್-ಕ್ಲಾಸ್ (Made In India S-Class) ಕಾರುಗಳನ್ನು ಬಿಡುಗಡೆ ಮಾಡಿತು.
ಎಸ್ 250 ಡಿ (S 250 D) ಮತ್ತು ಎಸ್ 450 4ಮ್ಯಾಟಿಕ್ (S 450 4MATIC) ಎಂಬ ಎರಡು ಕಾರುಗಳನ್ನು ಬಿಡುಗಡೆ ಮಾಡಲಾಗಿದೆ. ಇವುಗಳ ಬೆಲೆ ಕ್ರಮವಾಗಿ 1.57 ಕೋಟಿ ರೂ ಮತ್ತು 1.62 ಕೋಟಿ ರೂಪಾಯಿ ಇರಲಿದೆ ಎಂದು ಕಂಪನಿ ಹೇಳಿದೆ. ಈ ಹೊಸ ಎಸ್ ಕ್ಲಾಸ್ ಕಾರುಗಳನ್ನು ಪುಣೆಯ ಚಕನ್ನಲ್ಲಿರುವ ಬೆಂಜ್ ಯುನಿಟ್ನಿಂದ ಹೊರತರಲಾಗಿದೆ.
'ಹೊಸ ತಲೆಮಾರಿಗಾಗಿ ಎಸ್ ಕ್ಲಾಸ್ ಕಾರುಗಳನ್ನು ವಿಶೇಷವಾಗಿ ತಯಾರಿಸಲಾಗಿದೆ. ಹೆಚ್ಚಿನ ಬೇಡಿಕೆಯನ್ನು ಪೂರೈಸುವ ಸಲುವಾಗಿ ಈಗಾಗಲೇ ಸ್ಥಳೀಯವಾಗಿ ಕಾರುಗಳ ಉತ್ಪಾದನೆಯನ್ನು ಆರಂಭಿಸಲಾಗಿದೆ' ಎಂದು ಮರ್ಸಿಡಿಸ್ ಬೆಂಜ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಾರ್ಟಿನ್ ಶ್ವೆಂಕ್ ಮಾಹಿತಿ ನೀಡಿದ್ದಾರೆ.
ಇದರ ಜೊತೆಗೆ, ಈಗ ತಯಾರಿಸಿರುವ ಎಸ್ ಕ್ಲಾಸ್ ಕಾರು ಭಾರತದಲ್ಲಿನ ನಮ್ಮ ಗ್ರಾಹಕರ ಆಕಾಂಕ್ಷೆಗಳನ್ನು ಪೂರೈಸುವುದು ಮಾತ್ರವಲ್ಲದೇ, ಗ್ರಾಹಕರೊಂದಿಗಿನ ನಿಷ್ಠೆಯನ್ನು ಉಳಿಸಿಕೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಮಾರ್ಟಿನ್ ಶ್ವೆಂಕ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಗುಜರಾತ್ನ ಸೂರತ್ನಲ್ಲಿ ವಿಶ್ವದ ಅತಿದೊಡ್ಡ 'ಡೈಮಂಡ್ ಬೌರ್ಸ್'.. ಉದ್ಘಾಟನಾ ಕಾರ್ಯಕ್ರಮದಲ್ಲಿ ರಷ್ಯಾ ಅಧ್ಯಕ್ಷ?