ತಿರುವನಂತಪುರ: ಕೋವಿಡ್-19 ಲಸಿಕೆಗಳನ್ನು ರಾಜ್ಯದ ಪ್ರತಿಯೊಬ್ಬರಿಗೂ ಉಚಿತವಾಗಿ ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ. 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆಗಳಿಗಾಗಿ 1,000 ಕೋಟಿ ರೂ. ಮೀಸಲಿಟ್ಟಿದೆ. ಆರೋಗ್ಯ ಸಂಬಂಧಿತ ಉಪಕರಣಗಳ ಖರೀದಿಗೆ 500 ಕೋಟಿ ರೂ. ಮೊತ್ತವನ್ನು ನಿಗದಿಪಡಿಸಲಾಗಿದೆ ಎಂದು ಹಣಕಾಸು ಸಚಿವ ಕೆ ಎನ್ ಬಾಲಗೋಪಾಲ್ ಹೇಳಿದ್ದಾರೆ.
ಲಸಿಕೆ ಕೊರತೆಯು ರಾಜ್ಯದಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಪ್ರಮುಖ ಅಡಚಣೆಯಾಗಿದೆ. ಕೇರಳವು ಸ್ಥಳೀಯವಾಗಿ ಲಸಿಕೆ ಸಂಶೋಧನೆ ಮತ್ತು ತಯಾರಿಕೆಗೆ ದೀರ್ಘಕಾಲೀನ ಕ್ರಮಗಳನ್ನು ಪ್ರಸ್ತಾಪಿಸಿದೆ. ಕೇರಳ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಅಧೀನದಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ವೈರಾಲಜಿನಲ್ಲಿ (ಐಎವಿ) ಲಸಿಕೆ ಸಂಶೋಧನೆ ಪ್ರಾರಂಭವಾಗಲಿದೆ. ಲಸಿಕೆ ತಯಾರಕರನ್ನು ತಮ್ಮ ಘಟಕಗಳನ್ನು ಲೈಫ್ ಸೈನ್ಸಸ್ ಪಾರ್ಕ್‌ನಲ್ಲಿ ಸ್ಥಾಪಿಸಲು ಐಎವಿ ಮುಂದಾಗಲಿದೆ. ಇದಕ್ಕಾಗಿ ಬಜೆಟ್ನಲ್ಲಿ 10 ಕೋಟಿ ರೂ. ಮೀಸಲಿಟ್ಟಿದೆ.
ಇದನ್ನೂ ಓದಿ: ಹೆಚ್ಚೆಚ್ಚು 'ನೋಟು ಮುದ್ರಿಸಿ' ಜನರಿಗೆ ಕೊಡುವಂತೆ ವಿಪಕ್ಷ, ವಿತ್ತ ತಜ್ಞರ ವಾದಕ್ಕೆ RBI ಕೊಟ್ಟಿತು ಶಾಕಿಂಗ್ ಉತ್ತರ
ವೈದ್ಯಕೀಯ ಆರೈಕೆಗೆ ಸಂಬಂಧಿಸಿದ ಬಳಕೆಯ ಮತ್ತು ಸಲಕರಣೆಗಳ ಉತ್ಪಾದನೆಗೆ ರಾಜ್ಯವು ಅನುಕೂಲಕರ ಕೈಗಾರಿಕಾ ಪರಿಸರ ವ್ಯವಸ್ಥೆ ಹೊಂದಿದೆ. ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳಾದ ಶ್ರೀ ಚಿತ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆ್ಯಂಡ್ ಟೆಕ್ನಾಲಜಿ, ರಾಜೀವ್ ಗಾಂಧಿ ಸೆಂಟರ್ ಫಾರ್ ಬಯೋಟೆಕ್ನಾಲಜಿ, ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ವೈರಾಲಜಿ, ವಿಎಸ್ಎಸ್ಟಿ, ಎಲೆಕ್ಟ್ರಾನಿಕ್ಸ್ ಪ್ರಾದೇಶಿಕ ಪರೀಕ್ಷಾ ಪ್ರಯೋಗಾಲಯ, ವೈದ್ಯಕೀಯ ವಿಶ್ವವಿದ್ಯಾಲಯಗಳು ಮತ್ತು ಇತರ ಸಂಶೋಧನಾ ಸಂಸ್ಥೆಗಳು ಇದರಲ್ಲಿ ಮಹತ್ವದ ಪಾತ್ರ ವಹಿಸಲಿವೆ. 10 ಕೋಟಿ ರೂ.ಯನ್ನು ಅದರ ಆರಂಭಿಕ ವೆಚ್ಚಗಳಿಗಾಗಿ ಮೀಸಲಿಡಲಾಗಿದೆ. ಕೇಂದ್ರ ಸರ್ಕಾರದ ಕೋವಿಡ್ ಲಸಿಕೆ ನೀತಿ ಕೋವಿಡ್ ರಕ್ಷಣೆಗೆ ಹಿನ್ನಡೆಯಾಗಿದೆ ಎಂದು ಬಜೆಟ್ ಭಾಷಣದಲ್ಲಿ ಉಲ್ಲೇಖಿಸಿದರು.