ನವದೆಹಲಿ: ಭಾರತದ ಪ್ರಮುಖ ಬೆಂಚ್‌ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಎಸ್ & ಪಿ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ 50 ಕಳೆದ ಒಂದು ವಾರದಿಂದ ನಷ್ಟದಲ್ಲಿದ್ದು, ಸೋಮವಾರ ಆರಂಭಿಕ ವಹಿವಾಟಿನಲ್ಲಿ ಸ್ವಲ್ಪಮಟ್ಟಿಗೆ ಕೆಂಪು ಬಣ್ಣದಲ್ಲಿ ವಹಿವಾಟು ನಡೆಸುತ್ತಿದೆ.
ಬೆಳಗ್ಗೆ 9.38 ಕ್ಕೆ ಸೆನ್ಸೆಕ್ಸ್ 58,508 ಪಾಯಿಂಟ್‌ಗಳಲ್ಲಿ ವಹಿವಾಟು ನಡೆಸಿತು. ಈ ಹಿಂದೆ 58,645 ಪಾಯಿಂಟ್‌ಗಳಿಂದ ಅಂತ್ಯಗೊಂಡಿದ್ದು, ಇದು ಇಂದು ಶೇ. 0.2 ಅಥವಾ 137 ಪಾಯಿಂಟ್ ಇಳಿಕೆಯಾಗಿದೆ. 58,550 ಅಂಕಗಳಲ್ಲಿ ಆರಂಭವಾಯಿತು.
ನಿಫ್ಟಿ 17,438 ಪಾಯಿಂಟ್‌ಗಳಲ್ಲಿ ವಹಿವಾಟು ನಡೆಸಿತು. ಹಿಂದೆ 17,516 ಪಾಯಿಂಟ್ ವಹಿವಾಟು ನಡೆಸಿದ್ದು, ಇದು ಇಂದಿನ ದಿನಕ್ಕೆ ಶೇ. 0.5 ಅಥವಾ 78 ಪಾಯಿಂಟ್ ಇಳಿಕೆಯಾಗಿದೆ.
ಇದನ್ನೂ ಓದಿ: ಭಾರತದ ಮುಖ್ಯಸ್ಥರಾಗಿ ರಾಜೇಶ್ ರೇಗೆ ನೇಮಕ ಮಾಡುವುದಾಗಿ ಘೋಷಿಸಿದ ಹನಿವೆಲ್
ಹೀರೋ ಮೋಟೋಕಾರ್ಪ್, ಎಸ್‌ಬಿಐ, ಮಹೀಂದ್ರಾ ಮತ್ತು ಮಹೀಂದ್ರಾ, ಎನ್‌ಟಿಪಿಸಿ ಮತ್ತು ಐಷರ್ ಮೋಟಾರ್ಸ್ ಬೆಳಗಿನ ವಹಿವಾಟಿನಲ್ಲಿ ಅಗ್ರ ಐದು ಲೂಸರ್‌ಗಳಾಗಿದ್ದರೆ, ಹಿಂಡಾಲ್ಕೊ, ಒಎನ್‌ಜಿಸಿ, ಸನ್ ಫಾರ್ಮಾ, ಏಷ್ಯನ್ ಪೇಂಟ್ಸ್ ಮತ್ತು ಡಿವಿಸ್ ಲ್ಯಾಬ್ಸ್ ಟಾಪ್ ಗೇನರ್‌ಗಳಾಗಿವೆ.
ಎಫ್‌ಐಐ ಮಾರಾಟವು ಅಲ್ಪಾವಧಿಯಲ್ಲಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿದೆ. ಆದರೆ, ಮಧ್ಯಮವಾಧಿಯ ಮೇಲಲ್ಲ. ಅಕ್ಟೋಬರ್ 2021 ರಿಂದ ಎಫ್‌ಐಐ ರೂ. 114,100 ಕೋಟಿ ಮೌಲ್ಯದ ಈಕ್ವಿಟಿಯನ್ನು ಮಾರಾಟ ಮಾಡಿದೆ.
ಆದರೆ, ನಿಫ್ಟಿ ಈಗ ಅಕ್ಟೋಬರ್ 2021 ರ ಆರಂಭದಲ್ಲಿ ಇದ್ದ ಸ್ಥಳದಲ್ಲಿಯೇ ಉಳಿದಿದೆ. ಎಫ್‌ಐಐ ಮಾರಾಟವು ಅಲ್ಪಾವಧಿ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿದೆಯೇ ಹೊರತು, ಮಧ್ಯಮ ಅವಧಿಯಲ್ಲಿ ಪರಿಣಾಮ ಬೀರುತ್ತಿಲ್ಲ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿಜಯಕುಮಾರ್ ಹೇಳಿದ್ದಾರೆ.