ETV Bharat / business

ಜಾಗತಿಕ ರಿಯಲ್ ಎಸ್ಟೇಟ್ ಪಾರದರ್ಶಕ ಸೂಚ್ಯಂಕದಲ್ಲಿ ಭಾರತಕ್ಕೆ 34ನೇ ಸ್ಥಾನ: ಜಿಗಿದ ಅಂಕವೆಷ್ಟು ಗೊತ್ತೆ?

ಭಾರತವು ಗ್ಲೋಬಲ್ ರಿಯಲ್ ಎಸ್ಟೇಟ್ ಪಾರದರ್ಶಕತೆ ಸೂಚ್ಯಂಕದಲ್ಲಿ ಜಾಗತಿಕವಾಗಿ 34ನೇ ಸ್ಥಾನದಲ್ಲಿದೆ. ನಿಯಂತ್ರಕ ಸುಧಾರಣೆಗಳು, ವರ್ಧಿತ ಮಾರುಕಟ್ಟೆಯ ದತ್ತಾಂಶ ಮತ್ತು ಸುಸ್ಥಿರ ಉಪಕ್ರಮಗಳಿಂದ ಹೆಚ್ಚಿನ ಮಟ್ಟದ ಪಾರದರ್ಶಕತೆ ಕಂಡುಬಂದಿದೆ ಎಂದು ಜೆಎಲ್ಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

author img

By

Published : Jul 7, 2020, 5:43 PM IST

India ranks
ಇಂಡಿಯಾ ರ್ಯಾಂಕ್

ಮುಂಬೈ: ಜೆಎಲ್‌ಎಲ್‌ನ ಗ್ಲೋಬಲ್ ರಿಯಲ್ ಎಸ್ಟೇಟ್ ಪಾರದರ್ಶಕತೆ ಸೂಚ್ಯಂಕದಲ್ಲಿ (ಜಿಆರ್‌ಇಟಿಐ) ಭಾರತವು 34ನೇ ಸ್ಥಾನದಲ್ಲಿದ್ದು, ಹೆಚ್ಚಿನ ನಿಯಂತ್ರಣ ಸುಧಾರಣೆ ಹಾಗೂ ಇತರೆ ಉಪಕ್ರಮಗಳಿಂದಾಗಿ ಶ್ರೇಣಿಯಲ್ಲಿ ಸುಧಾರಣೆ ಕಂಡಿದೆ.

ಈ ಹಿಂದೆ 2018ರಲ್ಲಿ ಪ್ರಾರಂಭಿಸಲಾದ ಸೂಚ್ಯಂಕದಲ್ಲಿ ಭಾರತಕ್ಕೆ 35ನೇ ಸ್ಥಾನ ಲಭಿಸಿತ್ತು. ಈ ವರ್ಷ ಒಂದು ಅಂಕ ಮೇಲೇರಿ 34ನೇ ಸ್ಥಾನಕ್ಕೆ ಬಂದಿದೆ.

ಭಾರತವು ಸೂಚ್ಯಂಕದಲ್ಲಿ ಜಾಗತಿಕವಾಗಿ 34ನೇ ಸ್ಥಾನದಲ್ಲಿದೆ. ನಿಯಂತ್ರಕ ಸುಧಾರಣೆಗಳು, ವರ್ಧಿತ ಮಾರುಕಟ್ಟೆಯ ದತ್ತಾಂಶ ಮತ್ತು ಸುಸ್ಥಿರ ಉಪಕ್ರಮಗಳಿಂದ ಹೆಚ್ಚಿನ ಮಟ್ಟದ ಪಾರದರ್ಶಕತೆ ಕಂಡುಬಂದಿದೆ ಎಂದು ಜೆಎಲ್ಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಸುಧಾರಣೆಗಳು ಸೂಚ್ಯಂಕದಲ್ಲಿ ಭಾರತ, ಇಂಡೋನೇಷ್ಯಾ, ಫಿಲಿಪೈನ್ಸ್ ಮತ್ತು ವಿಯೆಟ್ನಾಂ ಉತ್ತಮ ಶ್ರೇಣಿ ಕಂಡಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಾಂಸ್ಥಿಕ ಹೂಡಿಕೆದಾರರಿಂದ ಹೆಚ್ಚಿನ ಆಸಕ್ತಿ ಸೆಳೆಯುವ ದೇಶದ ರಿಯಲ್ ಎಸ್ಟೇಟ್ ಹೂಡಿಕೆ ಟ್ರಸ್ಟ್(ಆರ್ ಇಐಟಿ) ಚೌಕಟ್ಟಿನ ಪ್ರಗತಿಯಿಂದಾಗಿ ಸುಧಾರಣೆ ಎರವಾಗಿದೆ. 'ಸುಸ್ಥಿರತೆ ಪಾರದರ್ಶಕತೆ'ಯಲ್ಲಿ ಭಾರತವು ಅಗ್ರ 20ರಲ್ಲಿ ಸ್ಥಾನ ಪಡೆದಿದೆ. ಭಾರತವು ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಪಾರದರ್ಶಕತೆ ಸೂಚ್ಯಂಕದಲ್ಲಿ ಸ್ಥಿರವಾದ ಸುಧಾರಣೆ ಕಂಡಿದೆ ಎಂದು ತಿಳಿಸಿದೆ.

ಜಾಗತಿಕವಾಗಿ ಅಮೆರಿಕದ ರಿಯಲ್ ಎಸ್ಟೇಟ್ ಮಾರುಕಟ್ಟೆಗಿಂತ ಯುನೈಟೆಡ್ ಕಿಂಗ್‌ಡಮ್ (ಇಂಗ್ಲೆಂಡ್​) ಅತ್ಯಂತ ಪಾರದರ್ಶಕ ದೇಶವಾಗಿದೆ. 32ನೇ ಸ್ಥಾನದಲ್ಲಿರುವ ಚೀನಾ ಮತ್ತು 33ನೇ ಸ್ಥಾನದಲ್ಲಿರುವ ಥೈಲ್ಯಾಂಡ್ ಭಾರತಕ್ಕಿಂತ ಸ್ವಲ್ಪ ಮೇಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.