ನವದೆಹಲಿ: ನಮ್ಮ ಸೈನಿಕರ ಯೋಗಕ್ಷೇಮ ಒದಗಿಸಲು ಸಶಸ್ತ್ರ ಪಡೆಗಳ ಯೋಧರಿಗೆ ಏಕಶ್ರೇಣಿ ಏಕ ಪಿಂಚಣಿ ಯೋಜನೆ ಒಂದು ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.
ಒಆರ್ಒಪಿ ಅನುಷ್ಠಾನದ ಐದನೇ ವಾರ್ಷಿಕೋತ್ಸವ ಸ್ವಾಗತಿಸಿ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ಐದು ವರ್ಷಗಳ ಹಿಂದೆ, ನಮ್ಮ ರಾಷ್ಟ್ರವನ್ನು ಧೈರ್ಯದಿಂದ ರಕ್ಷಿಸುವ ನಮ್ಮ ಮಹಾನ್ ಸೈನಿಕರ ಯೋಗಕ್ಷೇಮವನ್ನು ಖಾತ್ರಿಪಡಿಸಿಕೊಳ್ಳಲು ಭಾರತವು ಒಂದು ಐತಿಹಾಸಿಕ ಹೆಜ್ಜೆಯನ್ನು ತೆಗೆದುಕೊಂಡಿತು. 5 ವರ್ಷಗಳ ಒಆರ್ಒಪಿ ಒಂದು ಮಹತ್ವದ ನಿರ್ಧಾರವಾಗಿದೆ. ಭಾರತವು ಒಆರ್ಒಪಿಗಾಗಿ ದಶಕಗಳವರೆಗೆ ಕಾಯುತ್ತಿತ್ತು. ಅವರ ಸೇವೆ ಗಮನಾರ್ಹವಾದದ್ದು ಎಂದರು.
ಸರ್ಕಾರದ ಅಂಕಿ ಅಂಶಗಳ ಪ್ರಕಾರ, 20.60 ಲಕ್ಷ ನಿವೃತ್ತ ಸೈನಿಕರು ಮತ್ತು ಕುಟುಂಬಸ್ಥರ ಪಿಂಚಣಿದಾರರಲ್ಲಿ ಬಾಕಿ ಇರುವ 10,795.4 ಕೋಟಿ ರೂ. ವಿತರಿಸಲಾಗಿದೆ. ಇದರ ವಾರ್ಷಿಕ ಮೊತ್ತ ಸುಮಾರು 7,123.38 ಕೋಟಿ ರೂ.ನಷ್ಟಿದೆ.