ಸ್ಯಾನ್ ಸಾಲ್ವಡಾರ್(ಎಲ್ ಸಾಲ್ವಡಾರ್) : ಮಧ್ಯ ಅಮೆರಿಕಾದ ದೇಶದಲ್ಲಿ ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯನ್ನು ಕಾನೂನು ಟೆಂಡರ್ ಮಾಡುವ ಮಸೂದೆಗೆ ದೇಶವು ಅನುಮೋದನೆ ನೀಡಿದೆ ಎಂದು ಎಲ್ ಸಾಲ್ವಡಾರ್ ಅಧ್ಯಕ್ಷ ನಾಯ್ಬ್ ಬುಕೆಲೆ ಪ್ರಕಟಿಸಿದ್ದಾರೆ. ಮಧ್ಯ ಅಮೆರಿಕದ ಈ ದೇಶವು ಈಗ ಬಿಟ್‌ಕಾಯಿನ್ ಅನ್ನು ಕಾನೂನುಬದ್ಧಗೊಳಿಸಿದ ವಿಶ್ವದ ಮೊದಲ ದೇಶವಾಗಿದೆ.
"ಬಿಟ್‌ಕಾಯಿನ್ ಕಾನೂನನ್ನು ಸಾಲ್ವಡೊರನ್ ಕಾಂಗ್ರೆಸ್‌ನಲ್ಲಿ ಭಾರಿ ಬಹುಮತದಿಂದ ಅಂಗೀಕರಿಸಲಾಗಿದೆ. 84 ಮತಗಳಲ್ಲಿ 62 ಮತ ದೊರಕಿದ್ದು, ಇದು ಇತಿಹಾಸ ಸೃಷ್ಟಿಸಿದೆ" ಎಂದು ಬುಕೆಲೆ ಟ್ವೀಟ್ ಮಾಡಿದ್ದಾರೆ.
"ಅಲ್ಪಾವಧಿಯಲ್ಲಿ ಇದು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಔಪಚಾರಿಕ ಆರ್ಥಿಕತೆಯ ಹೊರಗಿನ ಸಾವಿರಾರು ಜನರಿಗೆ ಆರ್ಥಿಕ ಸೇರ್ಪಡೆ ಒದಗಿಸಲು ಸಹಾಯ ಮಾಡುತ್ತದೆ" ಎಂದು ಅವರು ಹೇಳಿದ್ದಾರೆ.
ಫ್ಲೋರಿಡಾದ ಮಿಯಾಮಿಯಲ್ಲಿ ಜೂನ್ 5ರಂದು ನಡೆದ ಬಿಟ್‌ಕಾಯಿನ್ 2021ರ ಸಮ್ಮೇಳನದಲ್ಲಿ ಬುಕೆಲೆ ಈ ಕ್ರಮವನ್ನು ಪ್ರಕಟಿಸಿದ್ದರು. ಇದೀಗ ಇದಕ್ಕೆ ಅನುಮೋದನೆ ಸಹ ದೊರಕಿದೆ.