ಭುವನೇಶ್ವರ(ಒಡಿಶಾ): ದೇಶದಲ್ಲಿ ಏಕಾಏಕಿ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಈಸ್ಟ್ ಕೋಸ್ಟ್ ರೈಲ್ವೆ ತನ್ನ 261 ಸ್ಲೀಪರ್ ಕೋಚ್ ಮತ್ತು ಜನರಲ್ ಬೋಗಿಗಳನ್ನು "ಕೋವಿಡ್ -19 ಐಸೊಲೇಷನ್ ಬೋಗಿಗಳಾಗಿ" ಪರಿವರ್ತಿಸುವ ಗುರಿಯನ್ನು ಪೂರೈಸಿದೆ.
ಭಾರತೀಯ ರೈಲ್ವೆಯು ತನ್ನ 5000 ಬೋಗಿಗಳನ್ನು ಕ್ಯಾರಂಟೈನ್ ಅಥವಾ ಐಸೊಲೇಷನ್ ಕೇಂದ್ರಗಳನ್ನಾಗಿ ಪರಿವರ್ತಿಸುವ ಉದ್ದೇಶ ಹೊಂದಿದ್ದು, ಇದು ಮೊದಲನೇ ಹೆಜ್ಜೆಯಾಗಿದೆ. ಇನ್ನೂ ಈ ಕೋವಿಡ್ -19 ಐಸೋಲೇಷನ್ ಬೋಗಿಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವ ಮೂಲಕ ಒಬ್ಬ ವ್ಯಕ್ತಿಗೆ ಬೇಕಾದ ಎಲ್ಲಾ ಸೌಲಭ್ಯವನ್ನು ಒದಗಿಸಲಾಗಿದೆ.
ಐಸೊಲೇಷನ್ ಬೋಗಿಗಳಲ್ಲಿನ ಸೌಲಭ್ಯಗಳು:
ಕಿಟಕಿಗಳಿಗೆ ಸೊಳ್ಳೆ ಪರದೆ, ಒಂದು ಕೋಣೆಯಲ್ಲಿ ಒಂದು ಸ್ನಾನಗೃಹ ಮತ್ತು ಮೂರು ಶೌಚಾಲಯಗಳು, ಪ್ರತಿ ಬೋಗಿಯಲ್ಲಿ ಆರು ಸೋಪು ನೀರಿನ ಬಾಟಲ್ಗಳು, ಪ್ರತಿ ಬೋಗಿಯಲ್ಲಿ ನಾಲ್ಕು ಬಾಟಲ್ ಇಡುವ ವ್ಯವಸ್ಥೆ ಮತ್ತು ಮೂರು ಡಸ್ಟ್‌ಬಿನ್‌ಗಳು, ಲ್ಯಾಪ್‌ಟಾಪ್ ಮತ್ತು ಮೊಬೈಲ್ ಚಾರ್ಜಿಂಗ್ ಸೌಲಭ್ಯಗಳು, ದಿಂಬು, ಬೆಡ್‌ಶೀಟ್‌ಗಳು, ಚೊಂಬು ಮತ್ತು ಇತರ ಸೌಲಭ್ಯಗಳ ನಡುವೆ ಸ್ನಾನಗೃಹಗಳಲ್ಲಿ ಬಕೆಟ್ ಒದಗಿಸಲಾಗಿದೆ. ಇವುಗಳಲ್ಲದೆ, ಆಮ್ಲಜನಕ ಸಿಲಿಂಡರ್‌ಗಳಂತಹ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಸಹ ಒದಗಿಸಲಾಗುವುದು.