ETV Bharat / business

ಹಾಸ್ಪಿಟಾಲಿಟಿ, ವಿಮಾನಯಾನ, ಪ್ರವಾಸೋದ್ಯಮಕ್ಕೆ ದೀರ್ಘಕಾಲದ ತನಕ ಕೊರೊನಾ ಸಿಡಿಲಾಘಾತ!!

ಮಾನಯಾನ ಕಂಪನಿಗಳ ಹೆಚ್ಚಿನ ವಿಮಾನಗಳನ್ನು ಜಾಗತಿಕ ಹೂಡಿಕೆ ಬ್ಯಾಂಕ್​ಗಳ ಮುಖೇನ ಗುತ್ತಿಗೆಗೆ ಪಡೆದಿವೆ. ಈ ಗುತ್ತಿಗೆದಾರರು ಗುತ್ತಿಗೆ ಪಾವತಿಗಳನ್ನು ಮುಂದೂಡಲು ನಿರ್ಧರಿಸದಿದ್ದರೆ, ವಿಮಾನಯಾನ ಸಂಸ್ಥೆಗಳು ದೊಡ್ಡ ಬಿಕ್ಕಟ್ಟುಗಳನ್ನು ಎದುರಿಸಬೇಕಾಗುತ್ತದೆ ಎಂದು ಎಸ್​ಬಿಐ ಅಧಿಕಾರಿ ಹೇಳಿದ್ದಾರೆ.

aviation Sector
ವಿಮಾನಯಾನ
author img

By

Published : Jun 10, 2020, 7:50 PM IST

ನವದೆಹಲಿ: ಕೊರೊನಾ ಸಾಂಕ್ರಾಮಿಕ ಮತ್ತು ರಾಷ್ಟ್ರವ್ಯಾಪಿ ಲಾಕ್​ಡೌನ್​ನಿಂದ ದೇಶದ ಆರ್ಥಿಕ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಆತಿಥ್ಯ (ಹಾಸ್ಪಿಟಾಲಿಟಿ), ಪ್ರವಾಸೋದ್ಯಮ ಮತ್ತು ವಾಯುಯಾನ ಕ್ಷೇತ್ರಗಳಲ್ಲಿನ ಆರ್ಥಿಕ ಬಿಕ್ಕಟ್ಟು ಇತರೆ ವಲಯಗಳಿಗಿಂತ ದೀರ್ಘ ಅವಧಿವರೆಗೆ ಇರುತ್ತವೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪಿಹೆಚ್‌ಡಿ ಚೇಂಬರ್ ಆಫ್ ಕಾಮರ್ಸ್ ಅಂಡ್​ ಇಂಡಸ್ಟ್ರಿ ಆಯೋಜಿಸಿದ್ದ ವೆಬ್‌ನಾರ್‌ನಲ್ಲಿ ಮಾತನಾಡಿದ ಅವರು, ಎಸ್​ಬಿಐ ಕಾರ್ಪೊರೇಟ್ ಅಕೌಂಟ್ಸ್ ಗ್ರೂಪ್‌ನ ಉಪ ವ್ಯವಸ್ಥಾಪಕ ನಿರ್ದೇಶಕ ಸುಜಿತ್ ವರ್ಮಾ, ಲಾಕ್‌ಡೌನ್ ಕಂಪೆನಿಗಳ ಹಣದ ಹರಿವಿನ ಮೇಲೆ ತೀವ್ರವಾಗಿ ಪರಿಣಾಮ ಬೀರಿದೆ. ಬಂಡವಾಳದ ಅಗತ್ಯತೆ ಹೆಚ್ಚಾಗಿದ್ದು, ಬೇಡಿಕೆಯ ತೀವ್ರ ಪ್ರಮಾಣದಲ್ಲಿ ಕುಸಿದಿದೆ ಎಂದು ಹೇಳಿದರು.

ಹೋಟೆಲ್‌, ವಾಯುಯಾನ ಮತ್ತು ಪ್ರವಾಸೋದ್ಯಮದಲ್ಲಿ ಆರ್ಥಿಕ ಬಿಕ್ಕಟ್ಟು ಹೆಚ್ಚು ದೀರ್ಘವಾಗಿ ಇರಲಿವೆ. ನಾವು ಇಲ್ಲಿ ಹೆಚ್ಚು ಸಂಕೀರ್ಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ ಎಂದರು. ವಾಯುಯಾನ ಕ್ಷೇತ್ರದ ಪರಿಸ್ಥಿತಿಯ ಕುರಿತು ಮಾತನಾಡಿದ ವರ್ಮಾ, ವಿಮಾನಯಾನ ಕಂಪನಿಗಳ ಹೆಚ್ಚಿನ ವಿಮಾನಗಳನ್ನು ಜಾಗತಿಕ ಹೂಡಿಕೆ ಬ್ಯಾಂಕ್​ಗಳ ಮುಖೇನ ಗುತ್ತಿಗೆಗೆ ಪಡೆದಿವೆ. ಈ ಗುತ್ತಿಗೆದಾರರು ಗುತ್ತಿಗೆ ಪಾವತಿಗಳನ್ನು ಮುಂದೂಡಲು ನಿರ್ಧರಿಸದಿದ್ರೆ, ವಿಮಾನಯಾನ ಸಂಸ್ಥೆಗಳು ದೊಡ್ಡ ಬಿಕ್ಕಟ್ಟುಗಳನ್ನು ಎದುರಿಸಬೇಕಾಗುತ್ತದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.