ನವದೆಹಲಿ: ಚೀನಾದಲ್ಲಿ ಹರಡಿದ ನೊವೆಲ್ ಕೊರೊನಾ ವೈರಸ್ನಿಂದಾಗಿ ಬಹುತೇಕ ದೊಡ್ಡ ಉತ್ಪಾದನಾ ಕೇಂದ್ರಗಳು ಸ್ಥಗಿತವಾಗಿವೆ. ತಯಾರಿಕಾ ಆ್ಯಕ್ಟಿವ್ ಫಾರ್ಮಾಸ್ಯುಟಿಕಲ್ ಇನ್ಗ್ರಿಡಿಂಟ್ಸ್ (ಎಪಿಐ) ಹಾಗೂ ಇತರೆ ಕಚ್ಚಾ ಸರಕುಗಳ ಮೇಲೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಚೀನಾದ ಮೇಲೆ ಅವಲಂಬನೆಯಾಗಿವೆ.
ಚೀನಾದಲ್ಲಿ ಉದ್ಭವಿಸಿರುವ ಈಗಿನ ಬಿಕ್ಕಟ್ಟು ಭಾರತಕ್ಕೆ ತನ್ನ ದೇಶಿಯ ಉತ್ಪಾದನೆಯ ಸಮಸ್ಯೆಗೆ ದೀರ್ಘಾವಧಿಯ ಪರಿಹಾರವಾಗಿ ಬಲಪಡಿಸುವ ಅವಕಾಶವನ್ನು ಒದಗಿಸುತ್ತದೆ ಎಂದು ಭಾರತದ ಸಾರ್ವಜನಿಕ ಆರೋಗ್ಯ ಒಕ್ಕೂಟದ ಅಧ್ಯಕ್ಷ ಡಾ. ಕೆ. ಶ್ರೀನಾಥ್ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಚೀನಾ ಸ್ಥಗಿತಗೊಂಡಾಗಿನಿಂದ ಎಪಿಐ ಉತ್ಪಾದಿಸುವ ಪ್ರಾಂತ್ಯ ನಮಗೆ ಅಗತ್ಯವಾದಷ್ಟು ಸರಕುಗಳನ್ನು ಆಮದು ಮಾಡಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ನಮ್ಮಲ್ಲಿನ ಸ್ಟಾಕ್ ಖಾಲಿಯಾಗುವ ಅಪಾಯವಿದೆ. ನಾವು ಇತರೆ ರಾಷ್ಟ್ರಗಳಿಂದಲೂ ಆಮದು ಮಾಡಿಕೊಳ್ಳುತ್ತೇವೆ. ಆದರೆ, ಚೀನಾ ಪರಿಸ್ಥಿತಿಯಿಂದ ಎಲ್ಲಾ ಕಡೆಯೂ ಕೊರತೆ ಕಂಡು ಬರುತ್ತಿದೆ ಎಂದು 'ಈಟಿವಿ ಭಾರತ್'ಗೆ ತಿಳಿಸಿದರು.