ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ಕಟಾವು ಮಾಡಿದ ರೈತರ ಬೆಳೆ ನಷ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ, 'ಈ ರೀತಿ ವ್ಯರ್ಥ ಆಗುವುದನ್ನು ತಗ್ಗಿಸಲು ಆಹಾರಧಾನ್ಯಗಳ ಜೊತೆಗೆ ನಶಿಸುತ್ತಿರುವ ತರಕಾರಿ ಮತ್ತು ಹಣ್ಣುಗಳನ್ನು ಖರೀದಿಸಿ. ಕೋವಿಡ್-19 ಪ್ರೇರಿತ ಲಾಕ್ಡೌನ್ ಸಂಕಷ್ಟದ ರೈತರಿಗೆ ನೆರವಾಗಿ' ಎಂದು ಕೈಗಾರಿಕಾ ಉದ್ಯಮಿಗಳನ್ನು ಕೋರಿದೆ.
ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವ ಹರಸಿಮ್ರತ್ ಕೌರ್ ಬಾದಲ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಇಂಡಸ್ಟ್ರಿ ಚೇಂಬರ್ ಫಿಕ್ಕಿ ಸದಸ್ಯರು ಸೇರಿದಂತೆ ಇತರ ಉದ್ಯಮಿಗಳ ಜೊತೆಗಿನ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ದೇಶದ ವಿವಿಧ ಭಾಗಗಳಲ್ಲಿ ಕೊಯ್ಲು ಮಾಡಿದ ಬೆಳೆ ಮತ್ತು ಫಸಲು ಕೊಳೆಯುತ್ತಿರುವ ಬಗ್ಗೆ ಬಾದಲ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಕೊಯ್ಲು ಮಾಡಿದ ಗೋಧಿ, ಭತ್ತ, ಹಣ್ಣು ಮತ್ತು ತರಕಾರಿಗಳು ಹಾಗೂ ತ್ವರಿತವಾಗಿ ಹಾಳಾಗುವ ಇತರ ಪದಾರ್ಥಗಳ ಖರೀದಿಗೆ ಮುಂದೆ ಬಂದರೆ ವ್ಯರ್ಥವಾಗುವ ಪ್ರಮಾಣ ಕಡಿಮೆ ಆಗುತ್ತದೆ. ರೈತರು ಕೂಡಾ ನಿಮ್ಮ ಖರೀದಿಯ ಪ್ರಯೋಜನ ಪಡೆಯಬಹುದು ಎಂದು ಉಲ್ಲೇಖಿಸಲಾಗಿದೆ.
ಎಫ್ಕೆಸಿಸಿಐ ಕಾರ್ಯದರ್ಶಿ ಜನರಲ್ ಡಿಲಿಪ್ ಚೆನಾಯ್,. ಎಫ್ಕೆಸಿಸಿಐ ಆಹಾರ ಸಂಸ್ಕರಣೆ ಸಮಿತಿ ಮುಖ್ಯಸ್ಥ ಮತ್ತು ಐಟಿಸಿ ಫುಡ್ಸ್ ಸಿಇಒ ವಿಭಾಗದ ಹೇಮಂತ್ ಮಲಿಕ್, ಅಮೂಲ್ನ ವ್ಯವಸ್ಥಾಪಕ ನಿರ್ದೇಶಕ ಆರ್ ಎಸ್ ಸೋಧಿ, ಕೋಕಾ ಕೋಲಾ ಇಂಡಿಯಾ ಅಧ್ಯಕ್ಷ ಟಿ. ಕೃಷ್ಣಕುಮಾರ್, ಕಾರ್ಕಿಲ್ ಇಂಡಿಯಾ ಅಧ್ಯಕ್ಷ ಸೈಮನ್ ಗೆರೋಗೆ, ಕೆಲ್ಲೋಗ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮೋಹಿತ್ ಆನಂದ್, ಮಾಂಟೆವ್ಸ್ ಇಂಟರ್ನ್ಯಾಷನಲ್ ಅಧ್ಯಕ್ಷ ದೀಪಕ್ ಅಯ್ಯರ್, ಎಂಟಿಆರ್ ಫುಡ್ಸ್ ಸಿಇಒ ಸಂಜಯ್ ಶರ್ಮಾ ಮತ್ತು ಜೈಡಸ್ ವೆಲ್ನೆಸ್ ಸಿಇಒ ತರುಣ್ ಅರೋರಾ ಸೇರಿದಂತೆ ಹಲವರು ಈ ಸಮಾವೇಶದಲ್ಲಿ ಉಪಸ್ಥಿತರಿದ್ದರು.