ನವದೆಹಲಿ: ಬ್ಯಾಂಕ್ಗಳ ಖಾಸಗೀಕರಣ ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಎರಡು ದಿನಗಳ ಪ್ರತಿಭಟನೆಗೆ ಅಧಿಕಾರಿಗಳು ಹಾಗೂ ನೌಕರರು ಸೇರಿ ಸುಮಾರು 10 ಲಕ್ಷ ಜನ ಬೆಂಬಲ ಸೂಚಿಸಿದ್ದಾರೆ. ಇದರಿಂದಾಗಿ ಇಂದು ಮತ್ತು ನಾಳೆ ಬ್ಯಾಂಕ್ಗಳ ಸಾಮಾನ್ಯ ವಹಿವಾಟಿಗೆ ಅಡೆಚಣೆಯಾಗಲಿದೆ.
ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಸೋಮವಾರ ಮತ್ತು ಮಂಗಳವಾರ ನಡೆಯುವ ಎರಡು ದಿನಗಳ ಮುಷ್ಕರದಲ್ಲಿ ಸುಮಾರು 10 ಲಕ್ಷ ಅಧಿಕಾರಿಗಳು ಮತ್ತು ಸರ್ಕಾರಿ ಬ್ಯಾಂಕ್ಗಳ ಬ್ಯಾಂಕ್ ನೌಕರರು ಭಾಗವಹಿಸುತ್ತಿರುವುದರಿಂದ ದೇಶಾದ್ಯಂತ ಬ್ಯಾಂಕಿಂಗ್ ಕಾರ್ಯಾಚರಣೆಗಳು ಸ್ಥಗಿತಗೊಳ್ಳುವ ಸಾಧ್ಯತೆಯಿದೆ.
ಎರಡು ದಿನಗಳ ಮುಷ್ಕರವು ಈ ಬಾರಿ ಎರಡು ದಿನಗಳ ವಾರಾಂತ್ಯದ ರಜೆಯ ನಂತರ ಬಂದಿದೆ. ಸಾರ್ವಜನಿಕ ವಲಯ ಮತ್ತು ಖಾಸಗಿ ಬ್ಯಾಂಕ್ಗಳು ಮಾರ್ಚ್ 13 ಮತ್ತು 14ರಂದು ಎರಡನೇ ಶನಿವಾರ ಮತ್ತು ಭಾನುವಾರದಂದು ಮುಚ್ಚಿದ್ದವು.
ಯಾವೆಲ್ಲಾ ಸೇವೆಗಳ ಮೇಲೆ ಹೊಡೆತ?
ಎರಡು ದಿನಗಳ ಮುಷ್ಕರದ ಮೊದಲ ದಿನದಂದು ಬ್ಯಾಂಕಿಂಗ್ ಕಾರ್ಯಾಚರಣೆಗಳಲ್ಲಿ ವ್ಯತ್ಯಯ ಉಂಟಾಯಿತು. ವಿಶೇಷವಾಗಿ ಚೆಕ್, ನಗದು ಠೇವಣಿ ಮತ್ತು ಹಿಂಪಡೆಯುವಿಕೆ, ಸಾಲ ಮಂಜೂರಾತಿ, ಬ್ಯಾಂಕ್ ಶಾಖೆಗೆ ಭೇಟಿ ನೀಡುವಂತಹ ಸೇವೆಗಳು ಸ್ಥಗಿತಗೊಂಡಿದ್ದವು. ಮುಷ್ಕರದ ಹಿನ್ನೆಲೆಯಲ್ಲಿ ಎಟಿಎಂಗಳಲ್ಲಿ ಮುಂಚಿತವಾಗಿ ಸಾಕಷ್ಟು ಹಣ ಜಮಾವಣೆ ಮಾಡಲಾಗಿತ್ತು. ನಾಳೆ ಎಟಿಎಂ ವಿತ್ಡ್ರಾನಲ್ಲಿ ನಗದು ಕಂಡುಬರಬಹುದು. ಆದರೆ, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ಎಟಿಎಂ ಕಾರ್ಯಾಚರಣೆಗಳು ಹಿಟ್ ಆಗುವ ಸಾಧ್ಯತೆಯಿಲ್ಲ.
ಇದನ್ನೂ ಓದಿ: 600 ಅಂಕದಷ್ಟು ಕುಸಿತ ಕಂಡ ಸೆನ್ಸೆಕ್ಸ್.. ಭಾರಿ ನಷ್ಟ ಅನುಭವಿಸಿದ ಎಸ್‌ಬಿಐ
ಖಾಸಗಿ ವಲಯದ ಬ್ಯಾಂಕ್ಗಳಾದ ಎಚ್‌ಡಿಎಫ್‌ಸಿ, ಐಸಿಐಸಿಐ, ಆಕ್ಸಿಸ್ ಬ್ಯಾಂಕ್ ಮತ್ತು ಇತರರ ಕೆಲಸವು ಪರಿಣಾಮ ಬೀರುವುದಿಲ್ಲ. ಅವುಗಳು ಇತರ ನಿತ್ಯದಂತೆ ತಮ್ಮ ಕೆಲಸ ಮುಂದುವರಿಸುತ್ತವೆ.
ಎರಡು ದಿನಗಳ ಬ್ಯಾಂಕ್ ಮುಷ್ಕರವನ್ನು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ಕರೆ ಕೊಟ್ಟಿದೆ. ಇದರಲ್ಲಿ ನಾಲ್ಕು ಬ್ಯಾಂಕ್ ಅಧಿಕಾರಿಗಳ ಸಂಘಗಳು ಮತ್ತು ಐದು ಯೂನಿಯನ್ ಬ್ಯಾಂಕ್ ನೌಕರರು ಸೇರಿದ್ದಾರೆ.
'ಈಟಿವಿ ಭಾರತ' ಈ ಹಿಂದೆ ವರದಿ ಮಾಡಿದಂತೆ, ಕಳೆದ ತಿಂಗಳು ಚೆನ್ನೈನಲ್ಲಿ ನಡೆದ ಸಭೆಯಲ್ಲಿ ಕೇಂದ್ರವು ಪ್ರಾರಂಭಿಸಿದ ಖಾಸಗೀಕರಣ ಚಾಲನಾ ನೀತಿ ವಿರೋಧಿಸಲು ಬಿಎಂಎಸ್‌ನ ಕೇಂದ್ರ ಕಾರ್ಯ ಸಮಿತಿ (ಕೆಕೆಎಸ್) ನಿರ್ಧರಿಸಿದೆ.
ಬಿಎಂಎಸ್‌ನ ರಾಷ್ಟ್ರೀಯ ಕಾರ್ಯನಿರ್ವಾಹಕ ಮಂಡಳಿಯು ಕೇಂದ್ರದ ಖಾಸಗೀಕರಣ ವಿರುದ್ಧ ನಿರ್ಣಯ ಅಂಗೀಕರಿಸಿತ್ತು. ಇದರಲ್ಲಿ ರೈಲ್ವೆ ಸೇವೆಗಳ ಖಾಸಗೀಕರಣ ಮತ್ತು ಆರ್ಡ್‌ನೆನ್ಸ್ ಫ್ಯಾಕ್ಟರಿ ಬೋರ್ಡ್ (ಒಎಫ್‌ಬಿ) ಅಡಿಯಲ್ಲಿ ರಕ್ಷಣಾ ಕಾರ್ಖಾನೆಗಳ ಸಾಂಸ್ಥಿಕೀಕರಣ ಒಳಗೊಂಡಿದೆ.
ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ), ಬ್ಯಾಂಕ್ ನೌಕರರ ರಾಷ್ಟ್ರೀಯ ಒಕ್ಕೂಟ (ಎನ್‌ಸಿಬಿಇ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (ಎಐಬಿಒಎ), ಭಾರತೀಯ ಬ್ಯಾಂಕ್ ನೌಕರರ ಒಕ್ಕೂಟ (ಬಿಇಎಫ್‌ಐ), ಇಂಡಿಯನ್ ನ್ಯಾಷನಲ್ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್ (ಐಎನ್‌ಬಿಇಎಫ್), ಇಂಡಿಯನ್ ನ್ಯಾಷನಲ್ ಬ್ಯಾಂಕ್ ಆಫೀಸರ್ಸ್ ಒಕ್ಕೂಟ (ಐಎನ್‌ಬಿಒಸಿ), ನ್ಯಾಷನಲ್ ಆರ್ಗನೈಸೇಶನ್ ಆಫ್ ಬ್ಯಾಂಕ್ ವರ್ಕರ್ಸ್ (ಎನ್‌ಒಬಿಡಬ್ಲ್ಯೂ) ಮತ್ತು ನ್ಯಾಷನಲ್ ಆರ್ಗನೈಸೇಷನ್ ಆಫ್ ಬ್ಯಾಂಕ್ ಆಫೀಸರ್ಸ್ (ಎನ್‌ಒಬಿಒ) ಒಂಬತ್ತು ಒಕ್ಕೂಟಗಳು ಮುಷ್ಕರಕ್ಕೆ ಕರೆಕೊಟ್ಟಿವೆ.
ಸರ್ಕಾರದ ಕನಿಷ್ಠ ಉಪಸ್ಥಿತಿ
ಈ ವರ್ಷದ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸಾರ್ವಜನಿಕ ವಲಯದ ಬ್ಯಾಂಕ್ಗಳ (ಪಿಎಸ್‌ಬಿ) ಪೈಕಿ ಎರಡು ಬ್ಯಾಂಕ್ಗಳು ಹಾಗೂ ಒಂದು ವಿಮಾ ಕಂಪನಿ ಖಾಸಗೀಕರಣಗೊಳಿಸುವುದಾಗಿ ಘೋಷಿಸಿದ್ದರು.
ಸಾರ್ವಜನಿಕ ವಲಯದಲ್ಲಿನ ಬ್ಯಾಂಕ್ಗಳಲ್ಲಿ ಹೆಚ್ಚಿನ ಹಣ ಹೂಡಿಕೆ ಮಾಡುವ ಬದಲು, ಸಾರ್ವಜನಿಕರಿಗೆ ಉತ್ತಮ ಆರೋಗ್ಯ, ಶಿಕ್ಷಣ ಮತ್ತು ಮೂಲಸೌಕರ್ಯಗಳನ್ನು ಒದಗಿಸುವ ತನ್ನ ಆದ್ಯತೆಗಳ ಬಗ್ಗೆ ಸರ್ಕಾರವು ಬಹಳ ಸ್ಪಷ್ಟವಾಗಿದೆ ಎಂದು ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಬಜೆಟ್ ನಂತರದ ಸಂವಾದದಲ್ಲಿ ಈಟಿವಿ ಭಾರತಗೆ ತಿಳಿಸಿದ್ದರು.
ಐಡಿಬಿಐ ಬ್ಯಾಂಕ್ ಹೊರತುಪಡಿಸಿ 2021-22ರಲ್ಲಿ ಎರಡು ಸಾರ್ವಜನಿಕ ವಲಯದ ಬ್ಯಾಂಕ್ಗಳು ಮತ್ತು ವಿಮಾ ಕಂಪನಿಯ ಖಾಸಗೀಕರಣದ ಮಾಡಿಲು ನಾವು ಪ್ರಸ್ತಾಪಿಸುತ್ತೇವೆ. ಇದಕ್ಕೆ ಶಾಸಕಾಂಗ ತಿದ್ದುಪಡಿಗಳು ಬೇಕಾಗುತ್ತದೆ. ಬಜೆಟ್ ಅಧಿವೇಶನದಲ್ಲಿಯೇ ತಿದ್ದುಪಡಿ ಪರಿಚಯಿಸಲು ನಾನು ಸಲಹೆ ನೀಡುತ್ತೇನೆ ಎಂದು ಬಜೆಟ್ ಭಾಷಣದಲ್ಲಿ ಹೇಳಿದ್ದರು.